ಕರಾಟೆ ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ಸಾಧನೆ ಮಾಡಿದ ಅಥಣಿ ವಿದ್ಯಾರ್ಥಿಗಳು
ಅಥಣಿ 19: ಹೈದ್ರಾಬಾದ್ ತೆಲಂಗಾಣದಲ್ಲಿ ಜರುಗಿದ ರಾಮಟ್ಟದ ಕರಾಟೆ ಚಾಂಪಿಯನ್ ಶಿಪ್ 2021 ರಲ್ಲಿ ತಾಲ್ಲೂಕಿನ ಹತ್ತು ಜನ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ ಎಂದು ಅಥಣಿಯ ಮೂರನೇ ಡಿಗ್ರಿ ಬ್ಲ್ಯಾಕ್ ಬೆಲ್ಟ್ ವಿಜೇತ ತರಬೇತುದಾರ ಮೋಹನ್ ಸಿಂಗ್ ರಜಪೂತ ಹೇಳಿದ್ದಾರೆ .
ಅಥಣಿ- ಈ ಕುರಿತು ಅಥಣಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ತರಬೇತುದಾರ ಮೋಹನ್ ಸಿಂಗ್ ರಜಪೂತ 2018 ರಿಂದ ಇಲ್ಲಿಯವರೆಗೂ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ 150 ಕ್ಕೂ ಹೆಚ್ಚು ಪದಕಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದು ಸಾಧನೆ ತೋರಿದ್ದಾರೆ ಪ್ರಸ್ತುತ 200 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ .ಈ ಬಾರಿ ಸುಶೀಲಕುಮಾರ್ ಹೆಗ್ಡೆ ಚಿನ್ನ ಹಾಗೂ ಬೆಳ್ಳಿಯ ಪದಕ, ಸಂಕಲ್ಪ ಜಕ್ಕಪ್ಪಣ್ಣವರ ಬೆಳ್ಳಿ ಹಾಗೂ ಕಂಚಿನ ಪದಕ, ರಕ್ಷಿತ ಪಾರ್ಥನಹಳ್ಳಿ ಚಿನ್ನದ ಪದಕ, ನಾಗರಾಜ ಕುರಿ ಚಿನ್ನದ ಹಾಗೂ ಕಂಚಿನ ಪದಕ , ಸ್ವರಾಜ್ ಬೋಸ್ಲೆ ಚಿನ್ನದ ಹಾಗೂ ಬೆಳ್ಳಿಯ ಪದಕ ಕಿಶೋರ್ ಗಾಯಕವಾಡ 2 ಕಂಚಿನ ಪದಕ, ದರ್ಶನ್ ಖಿಲಾರೆ ಬೆಳ್ಳಿ ಹಾಗೂ ಕಂಚಿನ ಪದಕ, ಎಂ ಡಿ ಸಾಧಿಕ್ ಮುಲ್ಲಾ ಬೆಳ್ಳಿ ಹಾಗೂ ಕಂಚಿನ ಪದಕ, ಅವಿನಾಶ ಅಂಬಿ ಚಿನ್ನದ ಹಾಗೂ ಬೆಳ್ಳಿಯ ಪದಕ, ವಿನಯ ಕೊಲ್ಲಾಪುರ ಚಿನ್ನದ ಹಾಗೂ ಬೆಳ್ಳಿಯ ಪದಕ ಪಡೆದಿದ್ದಾರೆ.
ಟೀಮ್ ಕಟಾ ವಿಭಾಗದಲ್ಲಿ ಸಂಕಲ್ಪ್ ಜಕ್ಕಪ್ಪಣ್ಣವರ, ಅವಿನಾಶ ಅಂಬಿ, ವಿನಾಯಕ ಕೊಲ್ಲಾಪುರ 3 ಜನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.ಈ ವೇಳೆ ಬಹುಮಾನ ವಿಜೇತ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಮಾತನಾಡಿ ತರಬೇತುದಾರ ಮೋಹನ ಸಿಂಗ್ ರಜಪೂತ ಅವರು ಸೋಮಶೇಖರ ಗೌಡರ, ವಿಜಯ ಭಜಂತ್ರಿ ಹಾಗೂ ಮುಂಬಯಿಯ ನಗರದಲ್ಲಿ ತರಬೇತಿ ಪಡೆದಿದ್ದಾರೆ. ಹೀಗಾಗಿ ಇವರಿಂದ ನಮಗೆಲ್ಲ ಅತ್ಯುತ್ತಮ ತರಬೇತಿ ದೊರೆತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು .
ರಾಜ್ಯಮಟ್ಟಕ್ಕೆ ಆಯ್ಕೆ
2021 ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ 16/2/2021 ರಂದು ಜರುಗಿದ ಕರಾಟೆ ಸ್ಪರ್ಧೆಯಲ್ಲಿ ಕುಮಾರಿ ರಂಜಿತಾ ಸದಲಗಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿನಿಗೆ ಮೋಹನ ಸಿಂಗ್ ರಜಪೂತ ಅವರು ತರಬೇತಿ ನೀಡಿದ್ದಾರೆ.