ಕಲೆ ಶಾಶ್ವತವಾದುದು ಅಧಿಕಾರ ಅಲ್ಲ: ನಿಷ್ಠಿ ರುದ್ರಪ್ಪ
ಲೋಕದರ್ಶನ ವರದಿ
ಬಳ್ಳಾರಿ 25:ಜೀವನದಲ್ಲಿ ಕಲೆ ಶಾಶ್ವತವಾದುದೇ ಹೊರೆತು, ಅಧಿಕಾರ ಐಶ್ವರ್ಯ ಅಲ್ಲ. ಇಂದಿನ ದಿನಗಳಲ್ಲಿ ಮೊಬೈಲ್ನಲ್ಲಿ ಮುಳುಗಿರುವ ನಮಗೆ ಭಾರತೀಯ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ. ಅದಕ್ಕಾಗಿ ಅವುಗಳನ್ನು ಪ್ರದಶರ್ಿಸುವ ಕಲಾಕಾರರನ್ನು ಪ್ರೋತ್ಸಾಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನಿಷ್ಠಿ ರುದ್ದಪ್ಪ ಹೇಳಿದರು.
ಅವರು ನಿನ್ನೆ ಸಂಜೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಖ್ಯಾತ ತೊಗಲುಗೊಂಬೆ ಕಲಾವಿದ ದಿ. ಹುಲೆಪ್ಪ ಸ್ಮರಣಾರ್ಥ ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರಧಾನ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭದಲ್ಲಿ ಹುಲೆಪ್ಪನವರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿ. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕರ್ಾರ ಕೆಲ ಕಲಾವಿದರನ್ನು ಮಾತ್ರ ಗುರುತಿಸಿ ಗೌರವಿಸುತ್ತದೆ. ಉಳಿದವರನ್ನು ಇಂತಹ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದರು
ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಸಹಾಯಕ ನಿದರ್ೇಶಕ ಬಿ. ನಾಗರಾಜ್ ಮಾತನಾಡಿ. ಅಧುನಿಕತೆಯನ್ನು ಬಳಸಿಕೊಂಡು ಹೊನ್ನೂರು ಸ್ವಾಮಿ ಹೊಸ ಹೊಸ ರೂಪಕ ರಚಿಸುತ್ತಿದ್ದಾರೆ. ಅವರಿಂದ ಇನ್ನಷ್ಟು ಹೊಸ ರೂಪಕಗಳು ಬೆಳಕಿಗೆ ಬರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಶಿರಗಾನಹಳ್ಳಿ ಶಾಂತನಾಯ್ಕ ಬುಡಕಟ್ಟು ಜನತೆ ಈ ದೇಶದ ಸಾಂಸ್ಕೃತಿಕ ರಾಯಭಾರಿಗಳು, ಈ ದೇಶದಲ್ಲಿ ಕಲೆ ಎನ್ನುವುದು ಉಳಿದಿದ್ದರೆ, ಅದು ಕೆಳವರ್ಗದವರಿಂದ ಮಾತ್ರ. ಏಕೆಂದರೆ ಈ ಜನರು ಇನ್ನೂ ದುಡ್ಡಿನ ಹಿಂದೆ, ಪ್ರಶಸ್ತಿ ಹಿಂದೆ ಬೀಳದಿರುವುದು, ಆದಾಗ್ಯೂ ಲಾಭ ಸಿಗದ ಕಲೆಯನ್ನು ಇತ್ತೀಚೆಗೆ ಜನರು ದೂರಕರಿಸುತ್ತಿದ್ದಾರೆ. ಆದರೆ ಹುಲಿಕುಂಟೆರಾಯ ತೊಗಲುಗೊಂಬೆ ಸಂಸ್ಥೆ ಇವತ್ತು ತೊಗಲುಗೊಂಬೆ ಕಲೆಯನ್ನು ಎಡೆಬಿಡದೇ ಪ್ರೊತ್ಸಾಹಿಸುತ್ತಾ ಮುಂದೆ ಸಾಗುತ್ತಿರುವುದು ಶ್ಲಾಘನೀಯ.. ಹೊನ್ನೂರುಸ್ವಾಮಿ ಮತ್ತು ಪ್ರೊ. ವೆಂಕಟೇಶ್ಕುಮಾರ್ ಸಹೋದರರು ಖ್ಯಾತ ತೊಗಲುಗೊಂಬೆ ಆಟಗಾರರಾಗಿದ್ದು, ಸಿ.ಹುಲೆಪ್ಪನವರ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರತಿಭಾವಂತ ಕಲಾವಿದರ ಗರಡಿಯಲ್ಲಿ ಬೆಳೆದವರು ಹೆಸರು ಮಾಡಿರುವ ಸಂದರ್ಭದಲ್ಲಿ ಹೊನ್ನೂರುಸ್ವಾಮಿಯಂತಹ ಅಪ್ಪಟ ಕಲಾವಿದರು ವಿದೇಶಗಳಿಗೆ ಹೋಗುವುದು ಅವಶ್ಯವಾಗಿದೆ. ಜಗತ್ತಿನಲ್ಲೇ ಅಪರೂಪದ ಕಲೆಯಾಗಿರುವ ತೊಗಲುಗೊಂಬೆಗೆ ಹೊಸ ಆಯಾಮ ನೀಡುವ ದಿಸೆಯಲ್ಲಿ ಆಲೋಚನೆ ಮಾಡುತ್ತಿರುವ ಹೊನ್ನೂರುಸ್ವಾಮಿ ಅವರ ಕಾರ್ಯ ಕೈಗೂಡಲಿ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಚೋರನೂರು ಕೊಟ್ರಪ್ಪ ಮಾತನಾಡಿ ನಾಡೋಜ ಬೆಳಗಲ್ಲು ವೀರಣ್ಣ ಅವರು ಹುಲೆಪ್ಪನವರ ಗರಡಿಯಲ್ಲಿ ಪಳಗಿದವರು. ಖ್ಯಾತ ಹಿಂದೂಸ್ತಾನಿ ಗಾಯಕ ವೆಂಕಟೇಶ ಕುಮಾರ್ ಸಹ ಹುಲೆಪ್ಪನವರ ಕೊಡುಗೆ ಎಂದ ಅವರು. ಈ ಹಿಂಧೆ ಹಳ್ಳಿಗಳಲ್ಲಿ ಮಳೆ ಬಾರದೆ ಇದ್ದಾಗ ತೊಗಲುಗೊಂಬೆ ಆಟ ಆಡಿಸುತ್ತಿದ್ದರು. ವಂಶಪಾರಂಪರಿಕವಾಗಿ ಬಂದ ಈಕಲೆಯನ್ನು ಮುಂದುವರೆಸಿಕೊಂಡು ಹೋಗುವುದು ಶ್ಲಾಘನೀಯ
ಜಿಲ್ಲೆಯ ಅನೇಕ ಕಡೆ ತೊಗಲು ಗೊಂಬೆ ಕಲಾವಿದರ ತಂಡ ಇವೆ. ಈ ಹಿಂದೆ ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಇತ್ತು ಆದರೆ ಈಗ ಸರಕಾರದಿಂದ ಆ ಮಾತು ಅಲ್ಲ ಗಳೆಯುವಂತೆ ಆಗಿದೆ. ಸರಕಾರ ಸಾಕಷಟು ಕಾರ್ಯಕ್ರಮಗಳನ್ನು ನೀಡುವ ಮೂಲಕ ಕಲಾವಿದರ ಜೀವನಕ್ಕೆ ನೆರವಾಗುತ್ತಿದೆಂದರು.
ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಹೊನ್ನೂರು ಸ್ಮಾಮಿ ತಮ್ಮ ತಂಡದಿಂದ ಸಂತ ಶಿಶುನಾಳ ಷರೀಫ, ಬುದ್ಧ ದರ್ಶನ, ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕೆರೆಗೆಹಾರ ಎಂಬ ಹೊಸ ರೂಪಕಗಳನ್ನು ಸಿದ್ದಪಡಿಸುತ್ತಿರುವೆ ಎಂದು ತಿಳಿಸಿದರು.
ಕುಲಿಕುಂಟೆ ಶ್ರೀ ಪ್ರಶಸ್ತಿ ಪದಾನ: ನಂತರ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ವರದಿಗಾರ ಎನ್. ವೀರಭದ್ರಗೌಡ, ಬೊಂಬೆ ಕಲಾವಿದ ಪರಶುರಾಮ್, ನೃತ್ಯ ಕಲಾವಿದ ಅಲ್ಲಾಭಕ್ಷಿ, ರಂಗ ನಿದರ್ೇಶಕ ಅಣ್ಣಾಜಿ ಕೃಷ್ಣಾರೆಡ್ಡಿ, ಬುರ್ರಕಥಾ ಕಲಾವಿದ ಅಶ್ವ ಪೆದ್ದ ಮಾರೆಕ್ಕ, ತಗಲಾ ಕಲಾವಿದ ಉಮೇಶ್ ಸಂಡೂರು, ಮುಖ್ಯ ಶಿಕ್ಷಕ ಕೆ. ಚಂದ್ರಮೌಳಿ, ಕಹಳೆ ವಾದನ ಕಲಾವಿದ ಕೆ. ವಸಂತಕುಮಾರ ಅವರುಗಳಿಗೆ ಕುಲಿಕುಂಟೆ ಶ್ರೀ ಪ್ರಶಸ್ತಿ ಪದಾನ ಮಾಡಲಾಯಿತು.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಇಂಗ್ಲೀಷ್ ಪ್ರಾಧ್ಯಾಪಕ ಡಾ.ಶಾಂತಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ನಿಂಗಪ್ಪ, ಹಿರಿಯ ರಂಗ ಕಲಾವಿದೆ ಸುಜಾತಮ್ಮ, ಸರಳಾದೇವಿ ಕಾಲೇಜಿನ ಪ್ರಾಂಶೂಪಾಲ ಪ್ರೊ. ಅಬ್ದುಲ್ ಮುತಾಲಿಬ್, ಸತಾಲೂಕು ಸಾಕ್ಷರತಾ ಸಮಿತಿ ಜಿ. ಶಿವಶಂಕರ ವೇದಿಕೆಯಲ್ಲಿದ್ದರು. ಅಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂ. ನಾಗಭೂಷಣ ಬಾಪು ಗವಾಯಿಗಳಿಂದ ಹಿಂದೂಸ್ತಾನಿ ಸಂಗೀತ, ತೊಗಲುಗೊಂಬೆ ಪ್ರದರ್ಶನ, ಕೆ. ಪರಶುರಾಮ್ ಹಂದ್ಯಾಳ್ ಅವರಿಂದ ತತ್ವಪದ, ಗೆಣಿಕೆಹಾಳ್ ಕೆ.ಆರ್. ಎರ್ರೇಗೌಡ ಮತ್ತು ತಂಡದಿಂದ ಸುಗಮ ಸಂಗೀತ, ಸೂರ್ಯ ಕಲಾಟ್ರಸ್ಟ್ನಿಂದ ಜಾನಪದ ನೃತ್ಯ, ಗುಡುದೂರು ರಾಘವೇಂದ್ರ ಅವರಿಂದ ಹಾರ್ಮೋನಿಯಂ ಹಾಗು ಕೆ. ಉಮೇಶ್ ಅವರು ತಬಲಾ ಸಾಥ್ ನೀಡಿದರು. ಶ್ರೀಮತಿ ಆರ್.ವೀಣಾ ಅವರು ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಶ್ರೀಮತಿ ಲಕ್ಷ್ಮಿದೇವಿ ಹೊನ್ನೂರುಸ್ವಾಮಿ ಅವರು ವಂದಿಸಿದರು.