ಅಕ್ರಮವಾಗಿ ನಾಡಪಿಸ್ತುಲ್ ಹೊಂದಿದ್ದ ವ್ಯಕ್ತಿಯ ಬಂಧನ
ಲೋಕದರ್ಶನ ವರದಿ,
ಜಮಖಂಡಿ 28: ಮಹಾಲಿಂಗಪೂರ ಪಟ್ಟಣದ ಪೊಲೀಸ್ ಠಾಣೆಯ ಪೊಲೀಸರು ಅಕ್ರಮವಾಗಿ ನಾಡಪಿಸ್ತುಲ್ ಹೊಂದಿದ್ದ ವ್ಯಕ್ತಿಯ ಬಂಧಿಸಿರುವ ಘಟನೆ ನಡೆದಿದೆ.
ಮಾಹಾಲಿಂಗಪೂರ ಠಾಣಾ ವ್ಯಾಪ್ತಿಯ ಮಾರಾಪೂರ ಗ್ರಾಮದ ಅವ್ವಪ್ಪ ಹಣಮಂತ ತಂಬೂರಿ ಒಂದು ನಾಡ ಪಿಸ್ತೂಲ, 2 ಜೀವಂತ ಗುಂಡುಗಳು, ಒಂದು ಏರಗನ್ ನಮೂನೆಯದು, ಒಂದು ಮೊಟ್ಟೇಬಲ್ ಲಾಂಗ, ಕಟ್ಟಿಗೆ ಹಿಡಿಕೆ ಇದ್ದ ಲಾಂಗ್ ಒಂದು, ಪಿಸ್ತೂಲು ಹಾಗೂ ಗುಂಡುಗಳನ್ನು ಹಾಕಿಟ್ಟ ಪ್ಲಾಸ್ಟೀಕ್ ಚೀಲವನ್ನು ತನ್ನ ಮನೆಯಲ್ಲಿ ಲೈಸನ್ಸ ಇಲ್ಲದೆ ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ ಎಂದು ಡಿಎಸ್ಪಿ ಶಾಂತವೀರ ಈ ಅವರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿಎಸ್ಪಿ ಶಾಂತವೀರ ಈ, ಸಿಪಿಐ ಐ ಎಮ್ ಮಠಪತಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರವೀಣ ಬೀಳಗಿ ಹಾಗೂ ಸಿಬ್ಬಂದಿಗಳಾದ ಎಸ್.ಬಿ.ಜೈನರ, ಎ.ಎಸ್.ಐ. ಜೆ.ಜಿ.ಪಾಟೀಲ, ಎಸ್.ಡಿ.ಬಾರಿಗಿಡದ, ಆರ್.ಎನ್.ತೋಳಮಟ್ಟ, ಬಿ.ಜಿ.ದೇಸಾಯಿ, ಬಿ.ಪಿ.ಹಡಪದ, ಎಮ್.ಎಸ್.ಕನಶೆಟ್ಟಿ ಅವರ ಕಾರ್ಯ ಮೆಚ್ಚುಗೆ ಜಿಲ್ಲಾ ಎಸ್ಪಿ ಅವರು ಶ್ಲಾಘನೆ ವ್ಯಕ್ತ ಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆಂದು ಡಿಎಸ್ಪಿ ತಿಳಿಸಿದ್ದಾರೆ.