ಜಮಖಂಡಿ

ಹೋಳಿ ಹಬ್ಬದ ರಂಗು-ರಂಗಿನ ಬಣ್ಣದಾಟವಾಡಲು ಪ್ರತ್ಯೇಕ ಸ್ಥಳದ ವ್ಯವಸ್ಥೆ

ಹೋಳಿ ಹಬ್ಬದ ರಂಗು-ರಂಗಿನ ಬಣ್ಣದಾಟವಾಡಲು ಪ್ರತ್ಯೇಕ ಸ್ಥಳದ ವ್ಯವಸ್ಥೆ

ಜಮಖಂಡಿ 06:  ಜಮಖಂಡಿ ನಗರದಲ್ಲಿ 8ರಂದು ಐತಿಹಾಸಿಕ ಪೋಲೋ ಮೈದಾನದಲ್ಲಿ ಹೋಳಿ ಹಬ್ಬದ ರಂಗೋತ್ಸವನ್ನು ಅದ್ದುರಿಯಾಗಿ ಆಚರಿಸಲಾಗುವುದು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಹೋಳಿ ಹಬ್ಬದ ರಂಗು-ರಂಗಿನ ಬಣ್ಣದಾಟವಾಡಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದರು. 

ನಗರದ ರಮಾ ನಿವಾಸ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಳಿ ಹಬ್ಬದ ರಂಗಿನ ದಿನದಂದು ವಿವಿಧ ಮಠಾಧೀಶರಿಂದ ಹಾಗೂ ಮುಖಂಡರ ನೇತೃತ್ವದಲ್ಲಿ ಮಡಿಕೆಯನ್ನು ಒಡೆಯುವ ಮೂಲಕ ರಂಗೋತ್ಸವಕ್ಕೆ ಚಾಲನೆಯನ್ನು ನೀಡಲಾಗುತ್ತದೆ, ಮಹಾರಾಷ್ಟ್ರದ ಕೋಲಾಪೂರದಿಂದ ಸುಮಾರು ಎರಡು ಟನ್‌ಗಳಷ್ಟು ಸಾವಯವ ಒಣ ಬಣ್ಣವನ್ನು ತರಿಸಲಾಗುವುದು. ಕಲರ, ಕಲರ ಬಣ್ಣವನ್ನು ಆಡಲು ಬಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕಲರ-ಕಲರ ಬಣ್ಣವನ್ನು ಆಡಲು ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ, ಯುವಕರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಮಾಡಲಾಗುವುದು. ಕಾರಂಜಿಯ ಮೂಲಕ ವಿವಿಧ ತರಹದ ಬಣ್ಣವನ್ನು ಆಡಲು ಅವಕಾಶ ಮಾಡಲಾಗುವುದು ಎಂದರು. 

ಜಮಖಂಡಿ ಮತ್ತು ಗ್ರಾಮೀಣ ಪ್ರದೇಶದ ನಾಗರಿಕರು ಈ ರಂಗೋತ್ಸವದಲ್ಲಿ ಪಾಲ್ಗೊಂಡು ಯಶ್ವಸಿಗೊಳಿಸಲು ಶಾಸಕ ಆನಂದ ನ್ಯಾಮಗೌಡ ಕೋರಿಕೊಂಡರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಶಿ, ಜಿಪಂ, ಮಾಜಿ ಉಪಾಧ್ಯಕ್ಷ ಈಶ್ವರ ಕರಬಸನ್ನವರ, ಬಸವರಾಜ ನ್ಯಾಮಗೌಡ, ನಿಂಗಪ್ಪ ಕಡಪಟ್ಟಿ, ಬಸವರಾಜ ಹರಕಂಗಿ, ಕುಮಾರ ಆಲಗೂರ, ಸುಜೀತ ಮಾಳಿ, ಪುಂಡಲಿಕ ದೇಸಾಯಿ, ರೂಪೇಶ ಚೋಪಡೆ, ಸುನೀಲ ಚೌಧರಿ, ರಾಹುಲು ಲೋಕಂಡೆ, ನಿಖಲ ಪಾಟೀಲ, ವಿಶಾಲ ತೇಲಿ,ಲಿಂಗರಾಜ ಪಾಟೀಲ, ಕುಮಾರ ಶಿವನಕ್ಕನ್ನವರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ