ಜಮಖಂಡಿ

ಮಣಿಪುರ ಘಟನೆ ಖಂಡಿಸಿ ಕಂದಾಯ ಅಧಿಕಾರಿಗೆ ಮನವಿ

ಮಣಿಪುರ ಘಟನೆ ಖಂಡಿಸಿ ಕಂದಾಯ ಅಧಿಕಾರಿಗೆ ಮನವಿ

ಲೋಕದರ್ಶನ ವರದಿ,

ಜಮಖಂಡಿ  8: ಮಣಿಪುರದಲ್ಲಿ ನಡೆದಂತಹ ಕುಕಿ ಜನಾಂಗದ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಘಟನೆ ಅತ್ಯಂತ ಅಮಾನವೀಯವಾಗಿದ್ದು, ಇದರಿಂದ ಭಾರತ ದೇಶದ ನಾಗರಿಕರೆಲ್ಲ ತಲೆ ತಗ್ಗಿಸುವಂತಾಗಿದೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರಬಣ) ಸಂಘಟನೆ ಪದಾಧಿಕಾರಿಗಳು ಕಂದಾಯ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ನಂತರ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಒಂದು ಪ್ರಜಾತಂತ್ರ ದೇಶದಲ್ಲಿ ಅತ್ಯಂತ ಹಿಂದುಳಿದ ವರ್ಗದ ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವಂತದ್ದು ಅತ್ಯಂತ ಹೀನಾಯ ಮತ್ತು ಆಡಳಿತದ ವೈಪಲ್ಯ ತೋರಿ ಸುವಂತಹದ್ದು, ಇಡೀ ದೇಶದಲ್ಲಿ ಆರ್ಎಸ್ಎಸ್ ಬೆಂಬಲಿತ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ  ಹಿಂದುಳಿದ, ದಲಿತ, ಆದಿವಾಸಿ ಬುಡಕಟ್ಟು ಜನಾಂಗಗಳಿಗೆ ಭದ್ರತೆ ಇಲ್ಲದತಾಗಿದೆ. ಈ ಘಟನೆಯಲ್ಲಿ ಮಣಿಪುರದ ಬೀರೇನ್ಸಿಂಗ್ ಸರ್ಕಾರ ಸಂಪೂರ್ಣವಾಗಿ ಆರೋಪಿಗಳ ಪರವಾಗಿ ನಿಂತಿದ್ದು ಕಂಡು ಬರುತ್ತಿದೆ.ಭಾರತದ ಜಾತಿ ವ್ಯವಸ್ಥೆಯಲ್ಲಿ ಯಾವಾಗಲೂ ಕೂಡಾ ನಿರಂತರವಾಗಿ ದಲಿತ, ಶೋಷಿತ ಬುಡಕಟ್ಟು ಆದಿವಾಸಿ ಸಮುದಾಯಗಳ ಮೇಲೆ ಮೇಲ್ವರ್ಗದ ಇಂತ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಸಂವಿಧಾನಾತ್ಮಕವಾಗಿ ಇವುಗಳನ್ನೆಲ್ಲ ತಡೆಗಟ್ಟಿ ರಕ್ಷಣೆ ಕೊಡಬೇಕಾದ ಸರ್ಕಾರಗಳು ಈಚಿಗೆ ದೌರ್ಜನ್ಯವನ್ನು ಬೆಂಬಲಿಸುವುದು ಈ ಮಣಿಪುರದ ಘಟನೆಯಲ್ಲಿಯೂ ಕೂಡಾ ಕಂಡು ಬರುತ್ತಿದೆ. ಕೂಡಲೇ ರಾಷ್ದ್ರಪತಿಗಳು ಮಣಿಪುರದ ಅಮನವೀಯ ಘಟನೆಯಲ್ಲಿ ಮಧ್ಯಪ್ರವೇಶಿಸಿ ಸಂತೃಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಸದಾಶಿವ ಐನಾಪೂರ, ಬಸವರಾಜ ದೊಡಮನಿ, ಅಪ್ಪಾಶಿ ಕಾಂಬಳ, ರವಿ ಚಲವಾದಿ, ಅಡಿವೆಪ್ಪ ಮೆರೆಗುದ್ದಿ, ವಿಠ್ಠಲ ಸಿಂಗೆ, ಯಲ್ಲಪ್ಪ ಕಾಂಬಳೆ, ಪರಸು ಕಾಂಬಳೆ, ಪರಮಾನಂದ ಕಾಂಬಳೆ, ಬಸವರಾಜ ಬನ್ನೂರ. ಹಣಮಂತ ಕಾಂಬಳೆ, ವಿಠ್ಠಲ ಕಾಂಬಳೆ, ಲಕ್ಷ್ಮಣ ಕಾಂಬಳೆ, ಹಣಮಂತ ಮೇಲ್ಗಡೆ, ಶ್ರಾವಣ ನಿಡೋಣಿ, ಪುಂಡಲಿಕ ಕಾಂಬಳೆ, ಯಾಸೀನ ಲೋದಿ ಅನೇಕರು ಇದ್ದರು. 


ಸುದ್ದಿ ಓದಿ