ಜಮಖಂಡಿ

ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಮುಖ್ಯಮಂತ್ರಿಗಳಿಗೆ ಮನವಿ

ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಮುಖ್ಯಮಂತ್ರಿಗಳಿಗೆ ಮನವಿ

ಜಮಖಂಡಿ 13:  ಸಮೀಪದ  ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದ ವಿವಿಧ ಇಲಾಖೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಾವಳಗಿ ತಾಲೂಕು ಸಮಿತಿ ನಿಯೋಗವೂ ಸಾವಳಗಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ  ಮಾಡುವಂತೆ ಮನವಿ ಸಲ್ಲಿಸಲಾಯಿತು. 

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಸಮಿತಿ ರಾಜು ಮೇಲಿನಕೇರಿ ಸಾವಳಗಿಯ ಭೌಗಳಿಕ, ಶೈಕ್ಷಣಿಕತೆಯ ಹಾಗೂ ಆರ್ಥಿಕತೆಯ ಬಗ್ಗೆ ವಿವರಿಸುವದಲ್ಲದೇ ತಾಲೂಕ ರಚನೆಗಾಗಿ ಸಮಿತಿ ವತಿಯಿಂದ ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸುವದಲ್ಲದೇ, ಕಳೆದ 40 ವರ್ಷಗಳಿಂದ ಸರ್ವಪಕ್ಷಗಳ ಮುಖಂಡರಿಗೆ ಕಾಲ ಕಾಲಕ್ಕೆ ಮನವಿ ಮಾಡಲಾಗಿತ್ತು. 1997 ರಲ್ಲಿ 5 ದಿನಗಳ ಅಹೋರಾತ್ರಿ ಉಪವಾಸ, ಸುಮಾರು 25 ದಿನಗಳ ಕಾಲ ಸರದಿ ಉಪವಾಸ ಸತ್ಯಾಗ್ರಹ, 100 ದಿನ ಧರಣಿ  ಸತ್ಯಾಗ್ರಹ, 2 ದಿನ ಆಮರಣ ಉಪವಾಸ ಸತ್ಯಾಗ್ರಹ, ರಸ್ತಾ ರೋಖೋ ಚಳುವಳಿ, 2020 ರಿಂದ 3 ಬಾರಿ ಗ್ರಾಮ ಪಂಚಾಯತ ಚುನಾವಣೆಯನ್ನು ಬಹಿಷ್ಕರಿಸಿದಂತೆ ಅನೇಕ ಹೋರಾಟಗಳನ್ನು ಮಾಡಲಾಗಿದೆಂದು ವಿವರಿಸಿದರು. 

ಸಾವಳಗಿ ಗ್ರಾಮವು ಹೋಬಳಿ ಕೇಂದ್ರವಾಗಿ ಸಾವಳಗಿಯೂ 24 ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ. ಜಮಖಂಡಿಯಿಂದ 40ಕಿ.ಮೀ, ವಿಜಯಪುರದಿಂದ 60ಕಿ.ಮೀ, ಅಥಣಿಯಿಂದ 30 ಕಿ.ಮೀ ದೂರದಲ್ಲಿದ್ದು. ಸುಮಾರು 1 ಲಕ್ಷ 50 ಸಾವಿರ ಜನಸಂಖ್ಯೆ ಹೊಂದಿದ್ದು, ಈ ನಾಡ ಕಾರ್ಯಲಯ(ಉಪ ತಹಸೀಲ್ದಾರ), ಪೋಲಿಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಪದವಿ ಪೂರ್ವ, ಕೈಗಾರಿಕ ತರಬೇತಿ ಕೇಂದ್ರ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಮತ್ತು ಅನೇಕ ಶಿಕ್ಷಣ ಸಂಸ್ಥೆಗಳು ಹೊಂದಿದೆ. ಸುಸಜ್ಜಿತವಾದ ಪ್ರವಾಸಿ ಮಂದಿರ ಹೀಗೆ ಇನ್ನು ಅನೇಕ ವಾಣಿಜ್ಯ ಕೇಂದ್ರಗಳು ಹಾಗೂ 20 ಕಿ.ಮೀ ವ್ತಾಪ್ತಿಯಲ್ಲಿ ಒಟ್ಟು 3 ಸಕ್ಕರೆ ಕಾರ್ಖಾನೆಗಳಿವೆ. ಸಾವಳಗಿ  ವಾಣಿಜ್ಯ ಹಾಗೂ ಆರ್ಥಿಕವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಸರ್ಕಾರಿ ಕಚೇರಿಗಳನ್ನು ನಡೆಸಲು ಸಾವಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  45ಕ್ಕೂ ಅಧಿಕ ಪುರ್ನವಸತಿ ಸರ್ಕಾರಿ ಕಟ್ಟಡಗಳು ಲಭ್ಯಗಳಿವೆ. 

ಸಮಿತಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಾರಿ ತಾಲೂಕು ಪುನರ ರಚನೆ ಮಾಡುವ ಸಂದರ್ಭದಲ್ಲಿ ಸಾವಳಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಸುಭಾಸ ಪಾಟೋಳಿ, ಬಸುಗೌಡ ಪರಮಗೊಂಡ, ರಾಜುಗೌಡ ಪಾಟೀಲ, ಸಿದ್ದು ಬಂಡಿವಡ್ಡರ, ಸುಜೀತಗೌಡ ಪಾಟೀಲ, ಆಧಿನಾಥ ಸಕಳೆ, ತುಕಾರಾಮ ಬಾಪಕರ, ಅನೀಲ ಬಡಿಗೇರ, ರಾಜು ಕರಾಬೇ, ಲಕ್ಷಣ ಪುಂಡೆ, ವಿಠ್ಠಲ ಉಮರಾಣಿ, ಆಜೀಂ ಆಲಗೂರ, ಪಾರೀಶ ಸಕಳೆ, ಬಸವರಾಜ ಮಾಳಿ ಅನೇಕರು ಇದ್ದರು.  


ಸುದ್ದಿ ಓದಿ