ಕಬ್ಬಿನ 150ರೂ ಸಹಾಯಧನ ಮಂಜೂರು ಮಾಡಲು ಮನವಿ
ಜಮಖಂಡಿ 25: ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬಾಕಿ ಹಣ ಟನ್ಗೆ 50 ರೂ ಹಾಗೂ ಸರ್ಕಾರದಿಂದ 150ರೂ ಘೋಷಣೆ ಮಾಡಿದ ಸಹಾಯಧನ ಮುಂಜೂರು ಮಾಡಬೇಕು ಎಂದು ಅಗ್ರಹಿಸಿ ರೈತಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ತಾಲ್ಲೂಕು ಆಡಳಿತ ಸೌಧದಲ್ಲಿ ಶಿರಸ್ತೆದಾರ ಬಿರಡಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡ ಕಲ್ಲಪ್ಪ ಬಿರಾದಾರ ಮಾತನಾಡಿ, ಈ ಬಾರಿ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಬೆಳೆಗಳು ಒಣಗಿವೆ, ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು. ಕೂಡಲೇ ಬಾಕಿ ಹಣ ಪಾವತಿಸಬೇಕು ಎಂದರು.
ಬಿ.ಎಸ್.ಕರಿಗೌಡರ ಮಾತನಾಡಿ, ಕಾರ್ಖಾನೆ ಮಾಲಿಕರ ಹಾಗೂ ರೈತರ ಸಭೆ ನಡೆಸಿ ಬರುವ ಹಂಗಾಮಿನ ಕಬ್ಬಿನ ಬಿಲ್ ಘೋಷಣೆ ಮಾಡಿ ಕಾರ್ಖಾನೆಯನ್ನು ಪ್ರಾರಂಭಿಸಬೇಕು, ರಾಜ್ಯದಲ್ಲಿ ಬರಗಾಗ ತೀವ್ರವಾಗುತ್ತಿದ್ದು, ಬರಗಾಲವನ್ನು ಸರ್ಕಾರ ಘೋಷನೆ ಮಾಡಿದರೆ ಸಾಲದು ಸಮಸ್ಯೆಗಳು ಇರುವದನ್ನು ಗಮನಿಸಿ ಜನ ಜಾನುವಾರುಗಳಿಗೆ ಗೋಶಾಲೆ ಪ್ರಾರಂಭಿಸಿ, ನೀರಿನ ವ್ಯವಸ್ಥೆಯನ್ನು ಮಾಡಿ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ಆರ್.ಭೂಮಾರ, ರಾಜು ನದಾಪ್, ಎಮ್.ಬಿ.ಕುರಣಿ, ಆರ್.ಬಿ.ನದಾಪ್ ಸೇರಿದಂತೆ ಇತರರು ಇದ್ದರು.