ಜ. 1ರಂದು ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ
ಲೋಕದರ್ಶನ ವರದಿ
ಗುಲರ್ಾಪೂರ 29 : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುಲರ್ಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ ಅಂತಹ ಗ್ರಾಮದ ಹೃದಯಬಾಗದಲ್ಲಿರುವ ಅಯ್ಯಪ್ಪಸ್ವಾಮಿಯ ಶನಿವಾರ ದಿ.1ರಂದು ಹೊಸ ವಷರ್ಾಚರಣೆಯ ದಿನದಂದು ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನಿದ್ಯದಲ್ಲಿ ನಡೆಯವದು
ಶನಿವಾರ ಬೆಳೆಗ್ಗೆ 6 ಗಂಟೆಗೆ ಭಕ್ತರಿಂದ ಪಂಪಾ ನದಿಯ ಹತ್ತಿರುವ ಹಳ್ಳದಲ್ಲಿ ತಣ್ಣೀರ ಸ್ನಾನ ಮಾಡಿ ಸನ್ನಿಧಾನದವರೆಗೆ ದೀಡ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವರು.
ಸಂಜೆೆ 5 ಗಂಟೆಗೆ ಅಯ್ಯಪ್ಪನ ಕನ್ನಿಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆಯರು ಸೇರಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಯ್ಯಪ್ಪ ಭಾವಚಿತ್ರ ಹಾಗೂ ಅಯ್ಯಪ್ಪನ ಪಲ್ಲಕ್ಕಿ ಉತ್ಸವದೊಂದಿಗೆ ಸಕಲ ವಾದ್ಯವೃಂದದೊಂದಿಗೆ ಸಾಗುತ್ತಾ ಕಂಬಳಿ ಪ್ಲಾಟದ ವೀರಭದ್ರೇಶ್ವರನಿಗೆ ಮಂಗಳಾರತಿ ಮಾಡಿ ಮರಳಿ ಅಯ್ಯಪ್ಪನ ಸನ್ನಿಧಾನಕ್ಕೆ ಬಂದು ಅಗ್ನಿಗೆ ಪೂಜೆ ಮಾಡಿ ಮಹಾಪೂಜೆಗೆ ಬಂದ ಎಲ್ಲ ಗುರುಸ್ವಾಮಿಗಳು ಹಾಗೂ ಕನ್ನಿಸ್ವಾಮಿಗಳು ಅಗ್ನಿಹಾಯ್ದು ಹದಿನೆಂಟು ಮೆಟ್ಟಿಲೇರಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳುವರು. ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಘೋಷಣೆಯೊಂದಿಗೆ ಹಾಡನ್ನು ಹಾಡುವರು. ನಂತರ ಅಯ್ಯಪ್ಪ, ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುವದು ಎಂದು ಭಕ್ತಮಂಡಳಿ ತಿಳಿಸಿದ್ದಾರೆ