ಜಮಖಂಡಿ

ಭಕ್ತರ ಹರ್ಷೋದ್ಘಾರದ ಮಧ್ಯೆ ಭವ್ಯ ವಚನ ರಥೋತ್ಸವ

ಭಕ್ತರ ಹರ್ಷೋದ್ಘಾರದ ಮಧ್ಯೆ ಭವ್ಯ ವಚನ ರಥೋತ್ಸವ

ಜಮಖಂಡಿ 11: ಬಸವ ಜಯಂತಿ ಅಂಗವಾಗಿ ಐತಿಹಾಸಿಕ ಓಲೇಮಠದ ಆವರಣದಲ್ಲಿ 21 ಅಡಿ ಎತ್ತರದ ರಥ ವಚನ ಪಲ್ಲಕ್ಕಿ ಉತ್ಸವದೊಂದಿಗೆ ಭಕ್ತರ ಹರ್ಷೋದ್ಘಾರದ ಮಧ್ಯೆ ಭವ್ಯ ವಚನ ರಥೋತ್ಸವ ಜರುಗಿತು. 

ಓಲೇಮಠದ ಡಾ.ಚನ್ನಬಸವ ಮಹಾಸ್ವಾಮಿಗಳು ನೇತೃತ್ವದಲ್ಲಿ ವಚನ ಭವ್ಯ ರಥೋತ್ಸವಕ್ಕೆ  ಚಿಮ್ಮಡದ ಪ್ರಭು ಮಹಾಸ್ವಾಮಿಗಳು, ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಮರೆಗುದ್ದಿಯ ನಿರುಪಾದಿ ಮಹಾಸ್ವಾಮಿಗಳು, ರುದ್ರಾವಧೂತ ಮಠದ ಸಹಜಾನಂದ ಶ್ರೀಗಳು, ಲೋಕಾಪುರದ ಸದಾನಂದ ಶ್ರೀಗಳು, ಚಿಕ್ಕಪಡಸಲಗಿಯ ಅವಧೂತರ ಸಾನಿಧ್ಯದಲ್ಲಿ ಶಾಸಕ ಜಗದೀಶ ಗುಡುಗುಂಟಿ ರಥೋತ್ಸವಕ್ಕೆ ಚಾಲನೆ ನೀಡಿದರು. 

ಶ್ರೀಗಳ ನೇತೃತ್ವದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಭವ್ಯ ರಥೋತ್ಸವ ಜರುಗಿತು.ಭಕ್ತರು ಜಯ ಘೋಷ ಹಾಕುತ್ತ ಭಕ್ತಿಯಿಂದ ರಥವನ್ನು ಎಳೆದರು. ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಚಿತ್ರಬಿಡಿಸಿ ಹೂವಿನ ಮಳೆಗೈದು, ಖಾರೀಕು, ಬೆತ್ತಾಸುಗಳನ್ನು ರಥದ ಮೇಲೆ ಹಾರಿಸಿ ಭಕ್ತಿ ಪರಕಾಷ್ಟೆ ಮೆರೆದರು. 

ಎನ್‌.ಎಸ್‌.ದೇವರವರ, ಕಾಡಪ್ಪ ದೇಸಾಯಿ, ಅಪ್ಪಾಸಾಬ ದೇವರವರ, ನಾಗಪ್ಪ ಮುತ್ತಕ್ಕನವರ, ಮಲ್ಲಪ್ಪ ದೇಸಾಯಿ, ಮಲ್ಲಯ್ಯ ಮಠಪತಿ, ಶ್ರೀಶೈಲ ಗೊಂಗನವರ, ಎಂ.ಕೆ. ಹಿಟ್ಟಿನಮಠ, ಶಿವಯ್ಯ ನಾಗರಾಳಮಠ, ಮಲ್ಲಿಕಾರ್ಜುನ ಹೋಳಗಿ, ರಮೇಶ ವಾಜಂತ್ರಿ, ಬಸವರಾಜ ಬಳಗಾರ,ಎಂ ಗುಡ್ಡಪ್ಪ, ಮಲ್ಲಿಕಾರ್ಜುನ ಬಾಡಗಿ, ಸಿದ್ದಯ್ಯ ಕಲಕತ್ತಿಮಠ, ಶ್ರೀಶೈಲ ದೇಸಾಯಿ, ಮಹೇಶ ಕಲಕತ್ತಿಮಠ, ರಾಚಯ್ಯ ಮಠಪತಿ, ಬಸಯ್ಯ ಹಿರೇಮಠ, ಸಗರೆಪ್ಪ ಅತ್ತೆಪ್ಪನವರ, ಬಸವರಾಜ ಹಾಲಳ್ಳಿ, ಪ್ರಶಾಂತ ಚರಕಿ, ಸಂಜು ಗೌಡನವರ, ಸುನೀಲ ಹಿರೇಮಠ, ಮಂಜು ಗೌಡನವರ, ಸಂಗಮೇಶ ಕೋಲಾರಮಠ, ರಾಚಯ್ಯ ನಾಗರಾಳಮಠ, ವಿರುಪಾಕ್ಷಯ್ಯ ಹಿರೇಮಠ, ನವೀನ ಭೂಸನ್ನವರ, ಕಲ್ಮೇಶ ಕೊಣ್ಣೂರ, ಕಲ್ಮೇಶ ಭೂಸನ್ನವರ, ಗುರು ಮಾಳಿ, ರಾಹುಲ ಗೌಡನವರ, ಮಂಜು ಚಾರಮಗೋಳ, ಗುರು ದೊಡಮನಿ, ಲಕ್ಷ್ಮಣ ನಾಯ್ಕರ, ಮಂಜು ಮನಗೂಳಿ, ಅಜೀತ ಸಿಂಗಾಡಿ, ಧರೆಪ್ಪ ಉಳ್ಳಾಗಡ್ಡಿ, ಪ್ರಜ್ವಲ ಮಣ್ಣೂರ, ಪ್ರಕಾಶ ಚಿಮ್ಮಡ, ಬಸವರಾಜ ನಾಗಮೋತಿ ಇತರರು ಪಾಲ್ಗೊಂಡಿದ್ದರು.   


ಸುದ್ದಿ ಓದಿ