ಅಥಣಿ

ತಳವಾರ ಸಮುದಾಯ ಏಳ್ಗೆಗೆ ಸರ್ಕಾರ ಪ್ರೋತ್ಸಾಹ ನೀಡಲಿ: ಜಯಶ್ರೀ

ತಳವಾರ ಸಮುದಾಯ ಏಳ್ಗೆಗೆ ಸರ್ಕಾರ ಪ್ರೋತ್ಸಾಹ ನೀಡಲಿ: ಜಯಶ್ರೀ

ಅಥಣಿ 21: ಸರಕಾರ ತಳವಾರ ಸಮುದಾಯಕ್ಕೆ ಶೀಘ್ರವಾಗಿ ಎಸ್ ಟಿ ಪ್ರಮಾಣಪತ್ರ ನೀಡಬೇಕು ಈ ಮೂಲಕ ಸಮುದಾಯದ ಏಳ್ಗೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಅಥಣಿ ಗಂಗಾಮತಸ್ಥ ಸಮುದಾಯದ ಮಹಿಳಾ ಮುಖಂಡ ಜಯಶ್ರೀ ಪೂಜಾರಿ ಹೇಳಿದ್ದಾರೆ.

ಪಟ್ಟಣದಲ್ಲಿ ಗುರುವಾರ ಗಂಗಾಮತಸ್ಥ ಸ್ತ್ರೀಯರಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. 

ಗಂಗಾಮತಸ್ಥ ಸಮುದಾಯದ ಹೆಣ್ಣು ಮಕ್ಕಳು ಸೇರಿಕೊಂಡು ಕಂಬದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಮಹಾಪ್ರಸಾದ ನೇರವೇರಿಸಿ ಅಂಬಿಗರ ಚೌಡಯ್ಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಯಶ್ರೀ ಪೂಜಾರಿ, ಡಾ.ವಿಜಯಾ ಗಸ್ತಿ, ಬಾಳವ್ವ ಗಸ್ತಿ, ಲಕ್ಷೀ ಕೊಲಾರ, ಮಂಗಳಾ ಗಸ್ತಿ, ಶೈಲಾ ಶಿರಹಟ್ಟಿ, ಸುಜಾತಾ ಶಂಕರ ಗಸ್ತಿ, ಅಂಬಿಕಾ ಗಸ್ತಿ, ಪದ್ಮಾ ಉಗಾರೆ ಅನೇಕ ಮಹಿಳೆಯರು ಮಕ್ಕಳು ಮುತ್ತೈದೆಯರು ಪಾಲ್ಗೊಂಡಿದ್ದರು. ಈ ವೇಳೆ ಸುಮಾರು 200 ಜನ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.

ಸುದ್ದಿ ಓದಿ