ಜಮಖಂಡಿ

ಪುಸ್ತಕ ಬರವಣಿಗೆಯಲ್ಲಿ ಅಂಬೇಡ್ಕರ್ ಅವರು ಜೀವಂತ: ಜ್ಞಾನಪ್ರಕಾಶ ಶ್ರೀ

ಪುಸ್ತಕ ಬರವಣಿಗೆಯಲ್ಲಿ ಅಂಬೇಡ್ಕರ್ ಅವರು ಜೀವಂತ: ಜ್ಞಾನಪ್ರಕಾಶ ಶ್ರೀ

ಲೋಕದರ್ಶನ ವರದಿ,

ಜಮಖಂಡಿ: 20: ಅಂಬೇಡ್ಕರ್ ಅವರು ಪುತ್ಥಳಿ, ಮೆರವಣಿಗೆಯಲ್ಲಿ ಅಂಬೇಡ್ಕರ್ ಇಲ್ಲ, ಪುಸ್ತಕಗಳಲ್ಲಿ ಮತ್ತು ಬರವಣಿಗೆಯಲ್ಲಿ ಅಂಬೇಡ್ಕರ್ ಅವರು ಜೀವಂತರಾಗಿದ್ದಾರೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಶ್ರೀಗಳು ಹೇಳಿದರು.

ಮುರಗೋಡ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಎಸ್.ಸಿ,ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಘಟಕದಿಂದ ಸಂವಿಧಾನ ರಕ್ಷಣೆಯಲ್ಲಿ ಶೋಷಿತ ವರ್ಗಗಳ ಪಾತ್ರದ ಬಗ್ಗೆ ಜಿಲ್ಲಾ ಮಟ್ಟದ ಬೃಹತ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕ್ಲಾಸ್ ಪ್ರಶಸ್ತಿ, ನಿವೃತ್ತ ನೌಕರರಿಗೆ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ರಕ್ಷಣೆ ಮಾಡುವ ನಿಜವಾದ ಸ್ಥಳ ಮತದಾನ, ಒಂದೊಂದು ಮತದ ಕಿಮ್ಮತ್ತು ನಿಮಗೆ ಗೊತ್ತಾದಾಗ ಮಾತ್ರ ಸಂವಿಧಾನ ಉಳಿಯುತ್ತದೆ, ಬರುವ ಚುಣಾವಣೆ ಸಂವಿಧಾನ ವಿರುದ್ಧ ಮನುಸ್ಮೃತಿಯ ಚುನಾವಣೆ ಯುದ್ದದಲ್ಲಿ ನೀವು ಗೆಲ್ಲಬೇಕು, ಅಂಬೇಡ್ಕರ್ ಹೆಸರು ಹೇಳಲು ನಿಮಗೆ ಏನು ಯೋಗ್ಯತೆ ಇಲ್ಲ, ಪುತ್ಥಳಿ, ಮೆರವಣಿಗೆಯಲ್ಲಿ ಅಂಬೇಡ್ಕರ್ ಇಲ್ಲ ಪುಸ್ತಕ, ಬರವಣಿಗೆಯಲ್ಲಿ ಅಂಬೇಡ್ಕರ್ ಜೀವಂತರಾಗಿದ್ದಾರೆ. ನಾವೆಲ್ಲರು ಆಧುನಿಕ ಭಿಕ್ಷುಕರಾಗಿದ್ದೆವೆ, ನಾವು ಬದಲಾಗುವ ತನಕ ಸಮಾಜ ಬದಲಾಗುವದಿಲ್ಲ, ಅಂಬೇಡ್ಕರ ಕನಸ್ಸು ನನಸ್ಸಾಗಬೇಕಾದರೆ ಒಬ್ಬ ನೌಕರು ಹತ್ತು ನೌಕರರನ್ನು ತಯಾರಿಸಬೇಕು, ನೌಕರರು ಹುಟ್ಟಿದ ಸಮಾಜವನ್ನು ನೋಡಬೇಕು,  ಸಮಾಜದ ಋಣ ತೀರಿಸುವದಕ್ಕೆ ಅಂಬೇಡ್ಕರ್ ಅವರು ತಮ್ಮ ನಾಲ್ಕು ಮಕ್ಕಳನ್ನು ಕಳೆದುಕೊಂಡು. ಸಮಾಜದಲ್ಲಿ ಯಾರು ತುಳಿತಕ್ಕೆ ಇಳಪಟ್ಟಿದ್ದಾರೆ ಅವರ ಒಳಿತಿಗಾಗಿ ಮಕ್ಕಳನ್ನು ಕಳೆದುಕೊಂಡರು. ಅದು ನಿಜವಾದ ಅಂಬೇಡ್ಕರ್ವಾದವಾಗಿತು. ಇಂದು ನೀವು ಹುಟ್ಟಿದ ಸಮಾಜಕ್ಕೆ ಋಣ ತೀರಿಸದಿದ್ದರೆ  ನೀವು ಯಾಕೆ ಬದುಕಬೇಕು ಎಂದರು.

ಬೆಂಗಳೂರ ಪೊಲೀಸ್ ಅಧಿಕಾರಿ ಎಸ್.ಸಿದ್ಧರಾಜು ಮಾತನಾಡಿ, ಹಸಿವು ಹೊಟ್ಟೆಗಿರಬಾರದು ಮನಸ್ಸಿಗಿರಬೇಕು, ಗುಲಾಮಗಿರಿಯಲ್ಲಿರುವ ಸಮಾಜವನ್ನು ಮೇಲೆತ್ತಲು ಅಂಬೇಡ್ಕರ್ ಅವರು ಬರಬೇಕಾಯಿತು, ವಿದ್ಯೆ ಇದ್ದರೆ ಸಮಾಜ ಬದಲಾವಣೆ ಸಾಧ್ಯ, ಇಂದು ಮೀಸಲಾತಿ ನಶಿಸಿ ಹೋಗುತ್ತಿದೆ, ಎಲ್ಲವೂ ಖಾಸಗಿಕರಣವಾಗುತ್ತಿವೆ, ಇದರಿಂದ ನಮಗೆ ಮೀಸಲಾತಿ ಸಿಗುವದಿಲ್ಲ, ವಿದ್ಯೆ ಇದ್ದರು ಉದ್ಯೋಗ ಇಲ್ಲ, ಸಂವಿಧಾನ ಅಪಾಯದಲ್ಲಿದೆ, ತಿದ್ದುಪಡೆಯಲ್ಲಿ ಅರ್ಧ ಬದಲಾವಣೆಯಾಗಿದೆ ಎಂದರು.

ಎಸ್.ಎಸಿ.ಎಸ್.ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಮಾತನಾಡಿದರು,

ಉದ್ಯಮಿ ಚಂದ್ರಕಾಂತ ಸಾಂಗ್ಲಿಕರ, ಅಜಿತ ಕಟ್ಟಿಮನಿ, ಬಿಇಓ ಎ.ಕೆ.ಬಸಣ್ಣವರ, ಸಿಡಿಪಿಓ ಅನುರಾಧಾ ಹಾದಿಮನಿ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ಡಾ.ವಿಜಯಕುಮಾರ ಬಬಲೇಶ್ವರ, ಆರ್.ಮೋಹನ, ಪಿಎಸ್ ಐ ಬಸವರಾಜ ಕೊಣ್ಣೂರೆ, ಡಿ.ಎಚ್.ನಾಡಗೇರೆ, ಸದಾಶಿವ ಕಾಂಬಳೆ, ನಾಗೇಶ ನೀಲನಾಯಕ, ಹಣಮಂತ ರಾಂಪೂರೆ, ದಾನಪ್ಪ ಹರಿಜನ, ಎನ್, ಆರ್, ಬಬಲೇಶ್ವರ, ಎಸ್, ಕೆ, ಕಾಂಬಳೆ, ಶಿವಾಜಿ ನಾಯಕ, ಪಿ.ಎಂ.ಭಜಂತ್ರಿ, ವಾಯ್.ಬಿ.ಕಾಂಬಳೆ ಸೇರಿದಂತೆ ಅನೇಕರು ಇದ್ದರು.ತಾಲ್ಲೂಕಾಧ್ಯಕ್ಷ ಪ್ರಶಾಂತ ಜಂಬಗಿ ಸ್ವಾಗತಿಸಿದರು, ಸುರೇಶ ಬೋಸ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.



ಸುದ್ದಿ ಓದಿ