ಸಿದ್ದೇಶ್ವರ ಶ್ರೀಗಳಿಗೆ ಅಖಂಡ ಕರ್ನಾಟಕ ನುಡಿನಮನ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ 3: ಪೂರ್ವತ, ಪಾಶ್ಚಿಮಾತ್ಯ ಪ್ರಾಚೀನಕಾಲ, ಆಧುನಿಕ ಕಾಲವನ್ನು ತಿಳಿದುಕೊಂಡ ತತ್ವಜ್ಞಾನ, ವಿಜ್ಞಾನ, ಸಮಾಜಶಾಸ್ತ್ರ ಹೀಗೆ ಎಲ್ಲವನ್ನು ತಿಳಿಕೊಂಡವರು ಯಾರಾದರು ಇದ್ದರೆ ಅದು ಶ್ರೀ ಸಿದ್ದೇಶ್ವರ ಶ್ರೀಗಳು ಮಾತ್ರ ಆಗಿದರು. ಅವರ ಆಚಾರ-ವಿಚಾರ, ಬೀಗುಮಾನ ತಿಳಿದುಕೊಳ್ಳಲು ಸಾಧ್ಯವಿಲ್ಲವೆಂದು ಸುತ್ತೂರ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಹೇಳಿದರು.
ತಾಲೂಕಿನ ಕಲ್ಲಹಳ್ಳಿ ಸತ್ಯಕಾಮ ಪ್ರತಿಷ್ಠಾನದಲ್ಲಿ ನಡೆದ ಸತ್ಯಕಾಮರ ಜನ್ಮಾರಾಧನೆ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಅಖಂಡ ಕರ್ನಾಟಕ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ಜಾತಿ, ಮತ, ಪಂಥ ಎಂಬ ಭೇಧ ಭಾವವನ್ನು ಹೊಂದದ ವ್ಯಕ್ತಿಯಾಗಿದ್ದರು. ಜನರಲ್ಲಿನ ಸೂಕ್ಷ್ಮತೆಯನ್ನು ತಿಳಿದುಕೊಂಡು ಅವರಿಗೆ ತಿಳಿಯುವ ಹಾಗೆ ಪ್ರವಚನ ಹೇಳುತ್ತಿದ್ದರು.
ಅಮೇಕರಿಕದಲ್ಲಿನ ಸಾಕ್ರಟೀಸ್ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿ ಅವರ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಅವರು ದೇಶ-ವಿದೇಶಿಗಳಿಗೆ ಪ್ರಯಾಣ ಮಾಡಿದರು. ಅವರು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದರು. ಬರುವಾಗ ಸಹ ಬರಿಗೈಯಲ್ಲಿ ಬರುತ್ತಿದ್ದರು. ಎಲ್ಲ ಶಾಸ್ತ್ರವನ್ನು ತಿಳಿದುಕೊಂಡ ಪೂಜ್ಯರಾಗಿದ್ದರು. ಅವರ ಬದುಕು ವಿಭಿನ್ನವಾಗಿತ್ತು. ಹಸಿರು ಪ್ರೀಯರಾಗಿ ಗಿಡ-ಮರಗಳ ಪರಿಸರ ಪ್ರೇಮಿಯಾಗಿದ್ದರು. ಹೀಗೆ ಅವರು ಸೂಕ್ಷ್ಮತೆ ಗುಣಗಳನ್ನು ಹೊಂದಿದ ಶ್ರೀಗಳು. ಭಕ್ತಿ-ಭಾವ-ಸಮಾನತೆ ಕಾಣುವ ಶ್ರೀಗಳಾಗಿದ್ದರು. ದೇಶದ ಪ್ರಧಾನಿಗಳು ಸಹ ಶ್ರೀಗಳ ಮೇಲೆ ಅಪಾರ ಗೌರವ ಇಟ್ಟಿದರು. ಶ್ರೀಗಳನ್ನು ವರ್ಣಿಸಲಾಗದು, ಅರ್ಧ ಮಾಡಿಕೋಳ್ಳಲಾಗಲ್ಲ, ಅವರ ಹೇಳಿದ್ದನ್ನೆಲ್ಲ ತಿಳಿದುಕೊಳ್ಳಲಾಗುತ್ತಿರಲಿಲ್ಲ, ಅವರಂತೆ ಬದುಕನ್ನು ಆಚರಣೆ ಮಾಡುವುದು ಅಸಾಧ್ಯವಾಗಿತ್ತು. ಇದೆಲ್ಲ ಅವರಲ್ಲಿನ ವಿಶಿಷ್ಠ ಗುಣಗಳು, ಅವರು ಯಾವಾಗ ಪ್ರಸನ್ನರಾಗಿರುತ್ತಾರೆ, ಯಾವಾಗ ಸಂತೋಷದಿಂದ ಮಾತನಾಡುತ್ತಾರೆ, ಯಾವಾಗ ಬಿಗುವಿನಿಂದ ಇರುತ್ತಾರೆಂದು ಯಾರಿಂದಲೂ ಹೇಳಲು ಸಾಧ್ಯವಾಗುತ್ತಿರಲಿಲ್ಲವೆಂದು ಅವರ ಜೊತೆಯಲ್ಲಿನ ಒಡನಾಟದ ಬಗ್ಗೆ ಹೇಳಿದರು.
ಕೋಲ್ಲಾಪೂರ ಕನೇರಿ ಅದೃಷ್ಟ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿ, ಪ್ರಕೃತಿಯಲ್ಲಿ ಆರೋಗ್ಯ ಕಳೆದುಕೊಂಡವರು ಜೀನವ ಸಾಗಿಸುವುದು ಕಷ್ಠಕರವಾಗಿದೆಂಬ ಭಾವನೆ ಹೊಂದಿದ ಸಿದ್ದೇಶ್ವರ ಶ್ರೀಗಳು ಎಲ್ಲ ಭಕ್ತ ಸಮೂದಾಯಕ್ಕೆ ಆರೋಗ್ಯ ಮತ್ತು ಪರಿಸರ ಕಾಪಾಡುವಂತೆ ಸೂಚಿಸುತ್ತಿದ್ದರು. ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅವರು ಯಾವ ರಾಜಕಾರಣಿಗಳ ಬರುವಿಕೆಯನ್ನು ಕಾಯುತ್ತಿರಲಿಲ್ಲ. ಸಮಾರಂಭಕ್ಕಿಂತ 15 ನಿಮಿಷ ಮುಂಚಿತವಾಗಿ ಬರುವ ರೂಢಿ ಇಂದು ನಮ್ಮ ಜನ ಅದನ್ನು ಪರಿಪಾಠವಾಗಿಸಿಕೊಳ್ಳಲೇಕಾಗಿದೆ. ದುಷ್ಠವ್ಯಕ್ತಿ, ಅಧಿಕಾರಿಗಳನ್ನು ಕ್ಷಮಿಸುವ ಗುಣ ಶ್ರೀಗಳಲ್ಲಿತ್ತು. ಶ್ರೀಗಳ ಬಗ್ಗೆ ಟೀಕೆ-ಟಿಪ್ಪಣೆ ಮಾಡುವ ವ್ಯಕ್ತಿಗಳನ್ನು ಬೆನ್ನು ತಟ್ಟುವ ಸ್ವಾಭಾವ ಹೊಂದಿದ ಅವರು ಕಳ್ಳನನ್ನು ಪರಿವರ್ತಿಸುವ ಶಕ್ತಿ ಹೊಂದಿದ್ದರು. ಇಂದು ಸಂಯಮ, ತ್ಯಾಗ, ಸೌಜನ್ಯ ಗುಣಗಳು ಇತರೆ ಸ್ವಾಮಿಜಿಗಳಲ್ಲಿ ಸಿಗಲಾರವು. ಪ್ರಚವನವು ದೇವರ ಪೂಜೆಯಷ್ಠೇ ಪವಿತ್ರವಾದದ್ದು ಎಂದು ನಂಬಿದ ಅವರು ಎಂದೂ ಪ್ರವಚನ ಬಿಡುತ್ತಿರಲಿಲ್ಲ. ಶ್ರೀಗಳು ಜೈನ ಸಂಪ್ರದಾಯವನ್ನು ಅಧ್ಯಯನ ಮಾಡಿದ ಅವರು ನುಡಿದಂತೆ ನಡೆಯುವ ಶತಮಾನದ ಸಂತರಾಗಿದ್ದರೆಂದು ಎಂದರು.
ಅತಿಥಿಗಳಾಗಿದ್ದ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಿ, ಯಾವಾಗಲೂ ಒಂದು ವಸ್ತು ಅಥವಾ ವ್ಯಕ್ತಿ ಬೆಲೆ ಅರ್ಥವಾಗಬೇಕಾದರೆ ಸಾಕಷ್ಟು ಅಂತರ ಬೇಕಾಗುತ್ತದೆ. ಅವರಿದ್ದ ಕಾಲದಲ್ಲಿ ನಾವಿದ್ದವಿ ಎಂಬುದಕ್ಕಿಂತ ನಮ್ಮ ಕಾಲದಲ್ಲಿ ಅವರಿದ್ದರು ಎಂಬುದು ಸತ್ಯವೆನಿಸುತ್ತದೆ. ಪ್ರತಿಯೊಂದನ್ನು ಅರಿವು ಮಾಡಿಕೊಳ್ಳಲು ಸಿದ್ದೇಶ್ವರ ಶ್ರೀಗಳು ಮುಂಚೂಣಿಯಲ್ಲಿದ್ದವರು. ಅನ್ನ-ಆಶ್ರಯ ನೀಡಿದ ಜನ ಸಾಕಷ್ಟು ಇದ್ದಾರೆ, ಆದರೆ ಸಿದ್ದೇಶ್ವರ ಶ್ರೀಗಳು ಅರಿವು ನೀಡಿದರು. ಅರಿವು ಕಳೆದುಕೊಂಡರೆ ನಮ್ಮ ನೆಲೆ ಕಳೆದುಕೊಂಡಂತಾಗುತ್ತದೆ. ಶ್ರೀಗಳಲ್ಲಿ ಓದಿನ ಹರಿವು ಇತ್ತು. ಶ್ರೀಗಳ ಮಾತನ್ನು ಕೇಳಲು ಕಿವಿ ಅವಶ್ಯವಿಲ್ಲ, ಹೃದಯವಿದ್ದರೆ ಮಾತ್ರ ಸಾಕು. ಬೇಕು ಎಂಬವವನಿಗೆ ಭೋಗಿ, ಬೇಡ ಎನ್ನುವನಿಗೆ ಸಂತ ಎನ್ನುವ ತತ್ವ ಹೊಂದಿದ್ದ ಶ್ರಿಗಳು, ನಾಲಿಗೆ ಮತ್ತು ಕೈಗೆ ಹತ್ತಿರದ ಸಂಬಂಧವಿದೆ. ಯಾವಾಗ ಕೈಚಾಚುತ್ತಿರೂ ಆಗ ನಾಲಿಗೆ ಬಿದ್ದು ಹೋಗುತ್ತದೆ. ಎಲ್ಲಿ ತನಕ ಕೈ ಚಾಚುವುದಿಲ್ಲವೋ ಅಲ್ಲಿ ತನಕ ನಾಲಿಗೆಗೆ ಶಕ್ತಿ ಬರುತ್ತದೆಂಬ ಭಾವನೆ ಹೊಂದಿದ್ದರು. ಸಿದ್ದೇಶ್ವರ ಶ್ರೀಗಳು ನಮ್ಮ ಕಾಲದ ಅಲ್ಲಂಪ್ರಭು ಇದ್ದಂತೆ ಇದ್ದರು ಎಂದರು.
ಮೈಗೂರು ಮಲ್ಲಯ್ಯಾ ಶ್ರೀಗಳು, ಶೃದ್ದಾನಂದ ಶ್ರೀಗಳು, ಬಸವರಾಜ ಪಾಟೀಲ ಸೇಡಂ, ಪ್ರಕಾಶ ಹಜೇರಿ, ಸೂಲಿಬೆಲೆ ಚಕ್ರವರ್ತಿ, ಸುಕನ್ಯಾ ಸುಂಕದ, ಲೀಲಾ ಕಾರಟಗಿ, ಎಂ.ಎನ್. ಶಿವಕುಮಾರ ಅನೇಕರು ಮಾತನಾಡಿದರು. ಶಂಕರ ಸೇವನೂರು, ಸವಿತಾ ಶ್ರೀಕಾಂತ, ಬಸವರಾಜ ಹಾದಿಮನಿ, ವಿ.ಬಿ.ಆರತಿ ಅನೇಕರಿದ್ದರು. ಬೆಂಗಳೂರು ಮನೋಜವಂ ಅತ್ರೇಯ ಹಾಗೂ ತಂಡದವರು ಗಾನ ನಮನ, ಸಿರಸಿಯ ನೀರ್ನಳ್ಳಿ ಗಣಪತಿ ಚಿತ್ರನಮನ ಸಲ್ಲಿಸಿದರು. ಸತ್ಯಕಾಮ ಪ್ರತಿಷ್ಠಾನದ ಸಂಚಾಲಕಿ ವೀಣಾ ಬನ್ನಂಜೆ ಸ್ವಾಗತಿಸಿ,ವಂದಿಸಿದರು.