ಹಾಲಮತ ಸಮಾಜ ಎಸ್ಟಿ ಸೇರ್ಪಡೆ : ರಾಜ್ಯದ ಶಿಫಾರಸ್ಸಿಗೆ ಕೇಂದ್ರ ಸ್ಪಂದಸಲಿ
ಗಂಗಾವತಿ 28: ಹಾಲಮತ ಸಮಾಜ ಎಸ್ಟಿ ಸೇರೆ್ಡ ಕುರಿತಂತೆ ಮಾಜಿ ಸಿಎಂ ಬೊಮ್ಮಾಯಿಯವರ ಅಂದಿನ ಸರಕಾರ ಕುಲಶಾಸ್ತೀಯ ಅಧ್ಯಯನ ನಡೆಸಿದ್ದು ಈಗಿನ ಸಿಎಂ ಸಿದ್ದಾರಮಯ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ ಪಿಎಂ ಮೋದಿ ರಾಜ್ಯ ಸರಕಾರದ ಮನವಿಗೆ ಸ್ಪಂದಿಸುವ ಮೂಲಕ ಸಮಾಜಕ್ಕೆ ಪ್ರಾತಿನಿದ್ಯ ನೀಡಬೇಕು ಎಂದು ಹಾಲಮತ ಎಸ್ಟಿ ಹೋರಾಟ ಸಮಿತಿ ಗಂಗಾವತಿ ತಾಲೂಕಾ ಅಧ್ಯಕ್ಷ ಶೇಖರ್ಪ ನವಲಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಹಾಲಮತ ಸಮಾಜದ ಗುರುಗಳ ವಿಶೇಷ ಕಾಳಜಿ, ಸಮಾಜ ಬಾಂಧವರ ನಿರಂತರ ಹೋರಾಟದ ಫಲ, ಮಾಜಿ ಮಂತ್ರಿಗಳಾದ ಕೆ.ಎಸ್.ಈಶ್ವರ್ಪ, ಹೆಚ್.ಎಂ ರೇವಣ್ಣ ಹಾಗು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಇವರ ಮುಂದಾಳತ್ವದಲ್ಲಿ ಹಾಲಮತ ಸಮಾಜ ಎಸ್ಟಿ ಗೆ ಸೇರೆ್ಡಗೊಳ್ಳುವ ಹಂತದಲ್ಲಿದೆ, ಹಿಂದುಳಿದ ವರ್ಗಗಳಲ್ಲಿ ಸದ್ಯ ಕುರುಬ ಸಮಾಜವಿದ್ದು, ನಮ್ಮ ಪಾಲಿನ ಮೀಸಲಾತಿಯೊಂದಿಗೆ ಎಸ್ಟಿ ಸೇರೆ್ಡಗೊಳಿಸುವಂತೆ ಕೆಂದ್ರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು.
ಕನಕದಾಸ ಕುರುಬ ಸಮಾಜ ಅಧ್ಯಕ್ಷ ಶರಣೇಗೌಡ ಮಾತನಾಡಿ, ಕುರುಬ ಸಮಾಜದಲ್ಲಿನ ಎಲ್ಲಾ ಸಮುದಾಯಗಳು, ರಾಜ್ಯದ ಎಲ್ಲ ಪ್ರಾಂತ್ಯದಲ್ಲಿರುವವರು ಬುಡಕಟ್ಟು ಜನಾಂಗದ ಸಂಸ್ಕೃತಿ ಹೊಂದಿದ್ದು, ಮೀಸಲಾತಿಗೆ ಹತ್ತಿರವಾದ ಸಮುದಾಯವೆಂದು ಕುಲಶಾಸ್ತ್ರೀಯ ಅಧ್ಯಯನದಲ್ಲಿ ತಿಳಿಸಲಾಗಿದೆ, ಅಲೆಮಾರಿಗಳಾಗಿ ಕುರಿಗಳನ್ನು ಮೇಯಿಸುತ್ತಾ ಹೋಗುವ ನಮ್ಮ ಸಮುದಾಯ ಸಾಕಷ್ಟು ಕಷ್ಟದ ಜೀವನ ನಡೆಸುತ್ತಿದೆ ಕೇಂದ್ರ ಸರಕಾರ ಆದಷ್ಟು ಬೇಗ ಮೀಸಲಾತಿ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಹಾಲಮತ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ರುದ್ರೇಶ್ ಡ್ಯಾಗಿ ಮಾತನಾಡಿ, ಭಗವಾನ್ ಖೂಬಾ ಹಾಗು ಬಸವರಾಜ್ ಪಾಟೀಲ್ ಯತ್ಬಾಳ್ ಅವರು ಕಾಳಜಿ ಪೂರ್ವಕವಾಗಿ ವಿಧಾನಸಭೆ ಹಾಗು ಲೋಕಸಭೆಯಲ್ಲಿ ಸಮಾಜದ ಪರ ಮಾತನಾಡಿರುವುದು ನಮಗೆ ಸಾಕಷ್ಟು ವರದಾನವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯ ನಾಯಕ ಕೆ.ಎಸ್.ಈಶ್ವರ್ಪ ಹಾಗು ಕೇಂದ್ರ ನಾಯಕರ ನೀಯೋಗದ ಮೂಲಕ ಪಿಎಂ ಮೋದಿಯವರನ್ನು ಭೇಟಿ ಮಾಡಿ ಶೀಘ್ರ ಹಾಲಮತ ಸಮಾಜಕ್ಕೆ ಮೀಸಲಾತಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಸಮಾಜದ ಅಧ್ಯಕ್ಷ ಯಮನುಪ್ಪ ವಿಠಲಾಪುರ, ಎಸ್ಟಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಪುಂಡಗೌಡ ಮುಖಂಡರಾದ ನೀಲಕಂಠಪ್ಪ ನಾಗಶೆಟ್ಟಿ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳಾದ ದುರುಗಪ್ಪ ಮೋರಿ, ಶಿವರಾಜ್ ಹೊಸಳ್ಳಿ, ತಿರುಕಪ್ಪ ಆನೆಗೊಂದಿ, ಶಿವಬಸಪ್ಪ, ಹನುಂತಪ್ಪ ಹುಲಿಹೈದರ್ ಮತ್ತು ವೆಂಕಟೇಶ್ ಸಿಂಗನಾಳ್ ಇತರರಿದ್ದರು.