ಹೊಟೇಲ್ ಮಾಲೀಕರು ಚುನಾವಣೆ ನೀತಿ-ಸಂಹಿತೆ ಉಲ್ಲಂಘಿಸಿದರೆ ಕ್ರಮ: ಕಾಮಗೌಡ
ಲೋಕದರ್ಶನ ವರದಿ,
ಜಮಖಂಡಿ 05: ನಗರ ಹಾಗೂ ಗ್ರಾಮೀಣ ಪ್ರದೇಶಲ್ಲಿನ ಹೊಟೇಲ್ ಮಾಲೀಕರು ಚುನಾವಣೆ ಸಮಯದಲ್ಲಿ ಚುನಾವಣೆ ನೀತಿ-ಸಂಹಿತೆ ಉಲ್ಲಂಘಿಸಿ ಅಕ್ರಮ ನಡೆಸಿದರೆ ಅಂತಹ ಮಾಲೀಕರುಗಳ ವಿರುದ್ಧ ಎಫ್ಐಆರ್ ದಾಖಲಿಸುವುದು ಹಾಗೂ ಅಂತಹ ಹೋಟೇಲ್ ಮಾಲೀಕರುಗಳ ಲೈಸೆನ್ಸ್ ತೊಂದರೆಯಾಗುತ್ತದೆ. ಪ್ರಕರಣ ದಾಖಲಿಸಿ ಕೋಟರ್್ ಮತ್ತು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆಂದು ಎಸಿ,ಚುನಾವಣಾಧಿಕಾರಿ ಸಂತೋಷ ಕಾಮಗೌಡ ಎಚ್ಚರಿಕೆ ನೀಡಿದರು.
ತಾಲೂಕಾಡಳಿ ಸಬಾಭವನದಲ್ಲಿ ನಡೆದ ಹೋಟೇಲ್ ಮಾಲೀಕರ ಹಾಗೂ ಪೆಟ್ರೋಲ್ ಬಂಕ್ ಮಾಲೀಕರೆ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಪ್ರಚಾರದ ವಾಹನಗಳಿಗೆ ಅಧೀಕೃತವಾಗಿ ಪರ್ಮಿಷನ್ ಪತ್ರದ ಪ್ರಕಾರ ಪೆಟ್ರೋಲ್ ಮತ್ತು ಡಿಸೈಲ್ ಹಾಕುವುದು,ಯಾವುದೇ ಪೆಟ್ರೋಲ್ ಬಂಕ್ ಮಾಲೀಕರುಗಳು ಅನಧೀಕೃತ ವ್ಯವಹಾರಗಳಿಗೆ ಒಳಗಾಗದೆ ಕಾನೂನುಬದ್ದ ರೀತಿಯಲ್ಲಿ ತಮ್ಮ ದೈನಂದಿನ ವ್ಯವಹಾರಗಳನ್ನು ನಡೆಸಿಕೊಂಡು ಹೋಗಲು ಯಾವುದೇ ಅಭ್ಯಂತರವಿರುವುದಿಲ್ಲ. ಸಿ-ವಿಜಿಲ್ ಆಫ್ದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ಕುರಿತು ಸಾರ್ವಜನಿಕರಿಗೂ ದೂರು ದಾಖಲಿಸಲು ಅವಕಾಶ ಕಲ್ಪಿಸಿರುವುದರಿಂದ ಅಂತಹ ಯಾವುದೇ ದೂರುಗಳು ಬಾರದಂತೆ ಮುಂಜಾಗ್ರತಾ ಕ್ರಮವಹಿಸಲು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಬಂಕ್ ಮಾಲೀಕರುಗಳಿಗೆ ಹಾಗೂ 30 ಕ್ಕೂ ಹೆಚ್ಚು ಹೊಟೇಲ್ ಉದ್ಯಮಿದಾರರುಗಳಿಗೆ ಯಾವುದೇ ರೀತಿಯ ಆಕ್ರಮ ಚಟುವಟಿಕೆಗಳಿಗೆ ಒಳಗಾಗದೆ ದೈನಂದಿನದ ವ್ಯಾಪಾರ ವ್ಯವಹಾರಗಳನ್ನು ನಡೆಸಿಕೊಂಡು ಹೊಗಲು ಯಾವುದೇ ರೀತಿಯ ತಕರಾರು ಹಾಗೂ ಅಭ್ಯಂತರವಿರುವುದಿಲ್ಲ. ಚುನಾವಣಾ ಆಯೋಗದ ಚುನಾವಣಾ ನೀತಿ ಸಂಹಿತೆಯ ಮಾರ್ಗಸೂಚಿಗಳನ್ನು ಉಲ್ಲಂಘನೆಯಾಗದಂತೆ ನಿಷ್ಪಕ್ಷಪಾತ-ಪಾರದರ್ಶಕ ಚುನಾವಣೆ ನಡೆಸಲು ಸರ್ಕಾರದೊಂದಿಗೆ ಸಹಕಾರ ನೀಡುವಂತೆ ಕೋರಿಕೊಂಡರು.
ಸಭೆಯಲ್ಲಿ ತಹಸೀಲ್ದಾರ ಸದಾಶಿವ ಮಕ್ಕೋಜಿ, ಹೋಟೇಲ್ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಸಂತೋಷ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ವಿನಯ ಶೆಟ್ಟಿ, ಭಾಸ್ಕರ ದೇವಾಡಿಗ, ರಾಜೇಸಾಬ, ಗಿರೀಶ ನಯ್ಯಾರಿ, ವಿಸ್ವನಾಥ ಶೆಟ್ಟಿ ಅನೇಕರು ಉಪಸ್ಥಿತರಿದ್ದರು.