ಅಥಣಿ

ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ: ಕುಟುಂಬಕ್ಕೆ ಚಿದಾನಂದ ಸವದಿ ನೆರವು

ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ: ಕುಟುಂಬಕ್ಕೆ ಚಿದಾನಂದ ಸವದಿ ನೆರವು
ಬೀದಿಪಾಲಾಗಿದ್ದ ರೈತ ಕುಟುಂಬಕ್ಕೆ ನೆರವಾದ ಡಿಸಿಎಂ ಸವದಿ ಪುತ್ರ

ಅಥಣಿ 16: ಕಳೆದ ರಾತ್ರಿ ತಾಲೂಕಿನ ಬಾಡಗಿ ಗ್ರಾಮದ ನಿವಾಸಿ ಕಾಮು ರಾಮಪ್ಪ ಹುದ್ದಾರ್ ಎಂಬವರ ರೈತರ ಮನೆಗೆ ಆಕಸ್ಮಿಕ ಬೆಂಕಿ ಸಂಭವಿಸಿ ಲಕ್ಷಾಂತರ ರೂಪಾಯಿ ಹಾಣಿ ಸಂಭವಿಸಿದ ಹಿನ್ನೆಲೆ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕವಾಗಿ ಧನ ಸಹಾಯ ಮಾಡಿದ್ದಾರೆ.

ಕಳೆದ ರಾತ್ರಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ಸಂಭವಿಸಿ, ಮನೆಯಲ್ಲಿ ಇದ್ದ ಅಲ್ಪ ಬಂಗಾರ ಹಾಗೂ ದವಸ ಧಾನ್ಯಗಳು, ಬಟ್ಟೆ, ಪಾತ್ರೆಗಳು ಬೆಂಕಿಗೆ ಆಹುತಿಯಾಗಿ ಕುಟುಂಬ ಸಂಕಷ್ಟ ಎದುರಾಗಿತ್ತು. ಸ್ಥಳಿಯರು ಚಿದಾನಂದ ಸವದಿ ಅವರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಬಾಡಗಿ ಗ್ರಾಮಕ್ಕೆ ಭೇಟಿ ನೀಡಿ ಹುದ್ದಾರ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕವಾಗಿ ಸಹಾಯ ಮಾಡಿ ಮತ್ತೋಮ್ಮೆ ಮಾನವಿಯತೆ ಮೆರೆದಿದ್ದಾರೆ.
ಕಳೆದ ಎರಡು ವಾರದ ಹಿಂದೆಯಷ್ಟೇ ಕೊಟ್ಟಲಗಿ ಗ್ರಾಮದಲ್ಲಿ ದುಡಿಯುವ ಮಗನನ್ನು ಕಳೆದುಕೊಂಡ ತಾಯಿ ಪರದಾಡುವಂತಾಗಿತ್ತು ಆ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಕುಟುಂಬ ನಿರ್ವಹಣೆಗೆ ಆರ್ಥಿಕವಾಗಿ ಸಹಾಯ ಮಾಡಿ ಬೆನ್ನಲ್ಲೇ ಮತ್ತೊಮ್ಮೆ ಬಾಡಗಿ ಗ್ರಾಮದ ಬಡ ಕುಟುಂಬಕ್ಕೆ 40ಸಾವಿರ ರೂಪಾಯಿ ಒಂದು ಕ್ವಿಂಟಾಲ್ ದವಸ ಧಾನ್ಯಗಳು ನೀಡಿ ಮಾನವೀಯತೆ ಮೆರೆದಿದ್ದಾರೆ. ಚಿದಾನಂದ ಸವದಿ ಮಾನವಿಯತೆ ಕಾರ್ಯಕ್ಕೆ ತಾಲೂಕಿನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಸುದ್ದಿ ಓದಿ