ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಪದಗ್ರಹಣ
ಜಮಖಂಡಿ 24: ಜಮಖಂಡಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಛಲ ನಮ್ಮಲ್ಲಿ ಇರಬೇಕು. ಸಾಧನೆ ಮಾಡಬೇಕಾದರೆ ಸಾಕಷ್ಟು ಛಲವನ್ನು ಹೊಂದಬೇಕು. ಆದರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡದೇ, ಯಾವುದೇ ಒಂದು ಕುಂಟ ನೆಪವನ್ನು ಇಟ್ಟುಕೊಂಡು ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಶಾಸಕ ಜಗದೀಶ ಗುಡಗುಂಟಿ ಅವರಿಗೆ ವ್ಯಂಗ್ಯವಾಡಿದರು.
ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯಕ್ರಮದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಗರಸಭೆಯ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯು ಅ,16ರಂದು ನಡೆದಿದ್ದು. ಅಧ್ಯಕ್ಷರಾಗಿ ಪರಮಾನಂದ ಗೌರೋಜಿ ಅವರು 24 ಮತಗಳನ್ನು ಪಡೆದು, ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಕಾಂಬಳೆಯವರು 24 ಮತಗಳನ್ನು ಪಡೆದು ಕಾಂಗ್ರೇಸ್ ಪಕ್ಷದಿಂದ ಆಯ್ಕೆಗೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ಮಾತ್ರ ಪಕ್ಷಗಳನ್ನು ಕಾಣಿಸಿಕೊಳ್ಳುತ್ತೇವೆ. ಆದರೆ ಚುನಾವಣೆ ಮುಗಿದ ನಂತರ ಪಕ್ಷಬೇಧವನ್ನು ಮರೆತು ಜಮಖಂಡಿಯ 31 ವಾರ್ಡಗಳನ್ನು ಸಮಾನವಾಗಿ ಅಭಿವೃದ್ದಿಯನ್ನು ಮಾಡುವ ಕೆಲಸವನ್ನು ಇಬ್ಬರು ಮಾಡಬೇಕೆಂದು ಸಲಹೆ ನೀಡಿದರು.
ನಗರಸಭೆಯ ಅಧ್ಯಕ್ಷ,ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮಖಂಡಿ ನಗರವು ಪ್ರತಿವರ್ಷವು ಬೆಳೆಯುತ್ತಾ ಇದೆ. ಆದಕಾರಣ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ,ಉಪಾಧ್ಯಕ್ಷರು ಸ್ವಚ್ಚ ಹಾಗೂ ಅಭೀವೃದ್ದಿಯನ್ನು ಮಾಡುವ ಅವಕಾಶ ಅವರಿಗೆ ಬಂದಿದೆ. ಇದರ ಸದ್ಬಳಕೆಯನ್ನು ಮಾಡಿಕೊಂಡು ಜಮಖಂಡಿಯನ್ನು ಸುಂದರವಾಗಿ ಸ್ವಚ್ಛತೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು. ಸರಕಾರದಿಂದ ಯಾವುದೇ ಸಹಾಯ,ಸಹಕಾರ ಬೇಕೆಂದರೆ ಸಾಕು. ಅವರ ಜೊತೆಗೆ ನಾವು ಕೂಡಾ ಬೆನ್ನಲಬುವಾಗಿ ನಿಂತು ಸಹಕಾರವನ್ನು ನೀಡಲು ನಾನು ಕೂಡಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಜನತೆಗೆ ಸ್ಪಂದಿಸದ ಶಾಸಕ ಜಗದೀಶ ಗುಡಗುಂಟಿ :
ಕ್ಷೇತ್ರದ ಜನತೆ ಬಹಳಷ್ಟು ನಿರಿಕ್ಷೇಯನ್ನು ಇಟ್ಟು ಶಾಸಕರನ್ನು ಆಯ್ಕೆ ಮಾಡಿ.ಅಧಿಕಾರವನ್ನು ನೀಡಿದ್ದಾರೆ. ಜನರ ಸಮಸ್ಯಗೆ ಶಾಸಕರಾದವರು ಸ್ಪಂದಿಸಬೇಕಾದ ಜವಾಬ್ದಾರಿ ಬಹಳ ಇರುತ್ತದೆ. ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ನೂತನ ಶಾಲೆಯ ಆವರಣದಲ್ಲಿ ಮತ್ತು ರಸ್ತೆಯ ಮೇಲೆ ಮಳೆಯ ನೀರು ನಿಲುತ್ತದೆ. ಅದಕ್ಕೆ ಪರಿಹಾರ ಕಲ್ಪಿಸುವ ಕೆಲಸ ಶಾಸಕರು ಮಾಡಬೇಕು. ಆದರು ಸಹ ನಮ್ಮ ಪಕ್ಷದಿಂದ ನೂತವಾಗಿ ಆಯ್ಕೆಗೊಂಡ ಅಧ್ಯಕ್ಷರು,ಉಪಾಧ್ಯಕ್ಷರು ಭೇಟಿ ನೀಡಿ ಗಮನಹರಿಸಿ ಪರಿಹಾರ ನೀಡಬೇಕೆಂದು ಸಲಹೆ ನೀಡುತ್ತೇನೆ ಎಂದರು.
ಕುಂಟು ನೆಪ್ಪ : ಯಾವುದೇ ಕೆಲಸ ಮಾಡಬೇಕೆಂದರೆ ಛಲ ನಮ್ಮಲ್ಲಿ ಇರಬೇಕು.ಸಾಧನೆ ಮಾಡಬೇಕಾದರೆ ಸಾಕಷ್ಟು ಛಲ ನಮ್ಮಲ್ಲಿ ಇರಬೇಕು. ಆದರೆ ಯಾವುದೇ ಒಂದು ಕುಂಟ ನೆಪ್ಪವನ್ನು ಇಟ್ಟುಕೊಂಡು ಅಭಿವೃದ್ದಿ ಮಾಡದೆ ಸುಳ್ಳು ಹೇಳಬಾರದು. ಕುಂಟು ನೆಪ್ಪ ಹೇಳುವುದನ್ನು ಬಿಡಬೇಕು. ಹಿಂದಿನ ಅವಧಿಯಲ್ಲಿ ನಾನು ಕೂಡಾ ಶಾಸಕನಾಗಿದ ಸಮಯದಲ್ಲಿ ಸರಕಾರ ನಮ್ಮದು ಇರಲ್ಲಿಲ್ಲ. ನಾವು ಕೂಡಾ ವಿರೋಧ ಪಕ್ಷದಲ್ಲಿ ಇದರು ಸಹ. ಕ್ಷೇತ್ರದ ಅಭಿವೃದ್ದಿಗೆ ಸಾವಿರದ ಆರುನೂರು ಕೋಟಿ ರೂ,ಗಳ ಅನುದಾನವನ್ನು ತಂದು ಜಮಖಂಡಿ ಮತಕ್ಷೇತ್ರವನ್ನು ಅಭಿವೃದ್ದಿ ಮಾಡಲಾಗಿತ್ತು. ಹಲವಾರು ನೀರಾವರಿಯ ಯೋಜನೆಗಳ ಕೆಲಸವನ್ನು ಮಾಡಲಾಗಿತ್ತು. ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಗಳನ್ನು ಮುಂದುವರಿಸುವ ಕೆಲಸ ಮಾಡಲಾಗಿತ್ತು. ಜಮಖಂಡಿ ನಗರದಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದವು. ಅವುಗಳನ್ನು ಸುಧಾರಣೆ ಮಾಡುವ ಕೆಲಸ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆ ಮಾಡಲಾಗಿತ್ತು. ಆದರೆ ನಾವುಗಳು ಪ್ರಾಮಾಣಿಕವಾಗಿ ನಮ್ಮಿಂದ ಎಷ್ಟು ಸಾಧ್ಯವು ಅಷ್ಟು ಕೆಲಸ ಮಾಡಲಾಗಿತ್ತು ಎಂದರು.
ಮಾಜಿ ಶಾಸಕ, ಹಾಲಿ ಶಾಸಕ ಇಬ್ಬರು
ಅಭಿವೃದ್ದಿ ಕೆಲಸಕ್ಕೆ ನಾನು ಸಜ್ಜು ಮಾಜಿ ಶಾಸಕ ಆನಂದ ನ್ಯಾಮಗೌಡ :
ಹಾಲಿ ಶಾಸಕ ಜೊತೆ ಸೇರಿಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ನಾನು ಸಜ್ಜನಿಂದನೆ. ಸರಕಾರ ನಮ್ಮದು ಇಲ್ಲ ಎಂದು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬಾರದು. ನಮ್ಮ ಕ್ಷೇತ್ರ ಅಭಿವೃದ್ಧಿಗೆ ನಾವುಗಳು ಪ್ರಯತ್ನ ಮಾಡಬೇಕು. ಮಂತ್ರಿಗಳಿಗೆ, ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಭೇಟಿ ನೀಡಿ. ಜಮಖಂಡಿ ಅಭಿವೃದ್ದಿ ಬಗ್ಗೆ ಕಾಲಜಿ ತೊರಿಸಿದರೆ ಮಾತ್ರ ಅನುಧಾನ ತರಲು ಸಾಧ್ಯವಾಗುತ್ತದೆ. ನಮ್ಮಿಂದ ಎನ್ನಾದರೂ ಸಹಕಾರ ಬೇಕಾದರೆ ನಾವುಗಳು ಕೂಡಾ ಸಹಕಾರ ನೀಡುತ್ತೇನೆ. ಸಚಿವರಿಗೆ ಮತ್ತು ಮಂತ್ರಿಗಳಿಗೆ ಭೇಟಿ ನೀಡುದ್ದಾರೆ ಈಗಿನ ಶಾಸಕರ ಜೊತೆಗೆ ಹೋಗಿ ಭೇಟಿ ನೀಡಿ ಜಮಖಂಡಿ ಅಭಿವೃದ್ಧಿಗೆ ಸದಾಸಿದ್ದವಾಗಿರುತ್ತೇನೆ ಎಂದರು.
ಸ್ವಂತಃ ಅನುದಾನ ತರಲಿ : ನಮ್ಮ ಜೊತೆಗೆ ಬೇಡವಾದರೆ. ಈಗಿನ ಶಾಸಕರು ತಮ್ಮ ಸ್ವಂತಃ ಶಕ್ತಿ ಮೇಲೆ ಅನುಧಾನ ತರುವ ನಂಬಿಕೆ ಇದ್ದರೆ ನಮ್ಮದು ಯಾವುದು ತೊಂದರೆ ಇರುವುದಿಲ್ಲ.ನಾವು ಇನ್ನೂ ಖುಷಿಯಾಗುತ್ತೇವೆ. ಯಾವುದೊ ಒಂದು ಕುಂಟು ನೆಪ್ಪ ಹೇಳಿ ಜಮಖಂಡಿ ಹಾಳು ಮಾಡಬೇಡಿ. ನಿಮ್ಮ ಪ್ರಯತ್ನದಿಂದ ಅನುದಾನದ ತಂದು ಅಭಿವೃದ್ದಿ ಮಾಡಿ. ಇಲ್ಲವಾದರೆ ನಮ್ಮ ಸಹಕಾರ ಪಡೆದುಕೊಂಡು ಅನುದಾನವನ್ನು ತಂದುಕೊಂಡು ಅಭಿವೃದ್ದಿ ಮಾಡಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.