ಬೈಲಹೊಂಗಲ

ಸೋಂಕು ನಿಯಂತ್ರಣಕ್ಕಾಗಿ ಸಕಲ ಸಿದ್ಧತೆ

ಸೋಂಕು ನಿಯಂತ್ರಣಕ್ಕಾಗಿ ಸಕಲ ಸಿದ್ಧತೆ
ವಕ್ಕುಂದ ಗ್ರಾಮದಲ್ಲಿ ನಡೆದ ಕೋವಿಡ್ ಸಭೆಯಲ್ಲಿ ಪಿಎಸ್‌ಐ ಈರ​‍್ಪ ರಿತ್ತಿ ಮಾತನಾಡಿದರು.

ಬೈಲಹೊಂಗಲ 17:  ತಾಲೂಕಿನ ವಕ್ಕುಂದ ಗ್ರಾಮದಲ್ಲಿ  ಹೆಚ್ಚು ಕೊರೊನಾ ಕೇಸ್ ಕಂಡುಬರುತ್ತಿರುವುದರಿಂದ ಒಂದು ವಾರ ಸಂಪೂರ್ಣ ಸೀಲ್‌ಡೌನ್ ಮಾಡಲಾಗುವುದು ಎಂದು ಪಿಡಿಓ ವಿಜಯಲಕ್ಷ್ಮಿ ಆನಿಗೋಳ ಹೇಳಿದರು. 

ಅವರು ಗ್ರಾಮದಲ್ಲಿ ಸೋಮವಾರ ನಡೆದ ಕೋವಿಡ್ ನಿಯಂತ್ರಣಕ್ಕಾಗಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ, ಗ್ರಾಪಂ. ಈಗಾಗಲೇ ಅಗತ್ಯ ಕ್ರಮಗಳನ್ನು ಪಾಲಿಸುತ್ತಿದೆ ಹಾಗೂ ನಿಯಂತ್ರಣಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿ ಸೀಲ್‌ಡೌನ್ ಮಾಡಿ ಗ್ರಾಮವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಸಹಕರಿಸಬೇಕು ಎಂದರು.   

ಪಿಎಸಐ  ಈರ​‍್ಪ ರಿತ್ತಿ ಮಾತನಾಡಿ, ಗ್ರಾಮದಲ್ಲಿ 17 ಜನ ಸೋಂಕಿತರು ಇರುವುದರಿಂದ ಗ್ರಾಮಸ್ಥರ ರಕ್ಷಣಾತ್ಮಕ ಉದ್ದೇಶದಿಂದ ಸಾರ್ವಜನಿಕರು ಇದಕ್ಕೆ ಸ್ಪಂದಿಸಿ ಸಹಕಾರ ನೀಡಬೇಕು ಅನಗತ್ಯ ತೊಂದರೆ ಮಾಡಕೂಡದು  ಒಂದು ವೇಳೆ ಉಲ್ಲಂಘಿಸಿದರೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ ಹೋಂ ಕ್ವಾರಂಟೈನ್ ಆಗುವುದು ಸಾಧ್ಯವಿಲ್ಲ ಗ್ರಾಮದಲ್ಲಿ ಚಿಕ್ಕ ಚಿಕ್ಕ ಮನೆಗಳು ಇರುವುದರಿಂದ ಪ್ರತ್ಯೇಕ ಕೊಠಡಿಗಳ ಸೌಲಭ್ಯ ಅತಿ ವಿರಳ ಹಾಗಾಗಿ ಗ್ರಾಮದಲ್ಲಿ ಎರಡು ಹಾಸ್ಟೆಲ್ಗಳು ಇವೆ ಅವುಗಳಲ್ಲಿ ಒಂದನ್ನು ಈ ಪ್ರಕ್ರಿಯೆಗೆ ಬಳಸಿಕೊಳ್ಳಲು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸವಿತಾ ಹೂವಿನ, ಸಿ ಕೆ ಮೆಕ್ಕೆದ, ಬಸನಗೌಡ ಪೊಲೀಸಪಾಟೀಲ, ಪರ್ವತಗೌಡ ಪಾಟೀಲ, ಗಜದಂಡ ಸುತಗಟ್ಟಿ, ರಾಮನಗೌಡ ಪಾಟೀಲ, ಅಶೋಕ ಭದ್ರಶೆಟ್ಟಿ, ನಾಗನಗೌಡ ಸಂಕಪ್ಪನವರ, ಸಂತೋಷ ಹಡಪದ, ಈರಣಗೌಡ ಶೀಲವಂತರ, ಶಂಕರ ಢವಳೆ ಮಲ್ಲಪ್ಪ ಢವಳೆ, ಹಾಗೂ ಅನೇಕ ಗ್ರಾಮದ ಮುಖಂಡರು ಎಲ್ಲ ಅಂಗಡಿಗಳ ಮಾಲಿಕರು, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅನೇಕರು ಉಪಸ್ಥಿತರಿದ್ದರು. 



ಸುದ್ದಿ ಓದಿ