ಜಾಗೃತಿ ಅರಿವು ಸಪ್ತಾಹದ ಕುರಿತು: ಕಾಲ್ನಡಿಗೆ ಜಾಥ
ಲೋಕದರ್ಶನ ವರದಿ
ಬಳ್ಳಾರಿ 30: ಕೇಂದ್ರ ಸಕರ್ಾರ ಜಾಗೃತಿ ಅಯೋಗ, ನವದೆಹಲಿ ಹಾಗೂ ಮುಖ್ಯ ಜಾಗೃತ ಅಧಿಕಾರಿಗಳು, ಬೆಂಗಳೂರು ಇವರ ನಿದರ್ೆಶನದಂತೆ, ನಮ್ಮ ಬ್ಯಾಂಕು ಇಡೀ ದೇಶದೆಲ್ಲಡೆ ಮಾಡುತ್ತಿರುವ "ಭ್ರಷ್ಟಾಚಾರವನ್ನು ಅಳಿಸಿ-ನವ ಭಾರತವನ್ನು ಕಟ್ಟೋಣ" ಕಾರ್ಯಕ್ರಮದ ಅಂಗವಾಗಿ ಅ. 29 ರಿಂದ ನ.03 ವರೆಗೆ "ಜಾಗೃತಿ ಅರಿವು ಸಪ್ತಾಹ" ವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ಬಳ್ಳಾರಿ ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವ ಮೂಲಕ ನಮ್ಮ ಬ್ಯಾಂಕಿನ ಸುಮಾರು 100-150 ಸಿಬ್ಬಂದಿ ವರ್ಗದವರು ನಮ್ಮ ಪ್ರಧಾನ ಕಛೇರಿಯಿಂದ ಹೊರಟು ಗಾಂಧೀನಗರ 2ನೇ ಅಡ್ಡರಸ್ತೆ ಮಾರ್ಗವಾಗಿ ದುರುಗಮ್ಮ ದೇವಸ್ಥಾನ ವೃತ್ತ, ಎಸ್.ಪಿ.ವೃತ್ತದವರೆಗೂ ಕಾಲ್ನಡಿಗೆಯಲ್ಲಿ ಜಾಥಾ ಮಾಡಿ ಜಾಗೃತಿ ಅರಿವು ಮೂಡಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀನಾಥ್ ಜೋಷಿ ರವರು ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರಿದರು ಮತ್ತು ಬ್ಯಾಂಕಿನ ಎಲ್ಲಾ ಪ್ರಧಾನ ಪ್ರಬಂಧಕರು, ಹಿರಿಯ ವ್ಯವಸ್ಥಾಪಕರು, ಪ್ರಾದೇಶಿಕ ಕಛೇರಿ, ಬಳ್ಳಾರಿ, ವಲಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಭಾಗಹಿಸಿದ್ದರು.
ಬ್ಯಾಂಕಿನ ಅಧ್ಯಕ್ಷರಾದ ಶ್ರೀನಾಥ್ ಜೋಷಿ ಅವರು ಮಾತನಾಡುತ್ತಾ, ಬ್ಯಾಂಕಿನ 657 ಶಾಖೆಗಳಲ್ಲಿನ 3000ಕ್ಕೂ ಹೆಚ್ಚು ಸಿಬ್ಬಂದಿ ಒಂದು ವಾರ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಈ ಅರಿವು ಸಪ್ತಾಹ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀನಾಥ್ ಜೋಷಿ ಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿ.ಜಿ.ಮಂಜುನಾಥ್; ಎನ್.ಜಿ.ಶೈಲೇಂದ್ರ ಉಡುಪ; ಎನ್.ರವಿಕುಮಾರ್ ಮಹಾ ಪ್ರಬಂಧಕರು, ಬಿ.ಸಿ.ಅನಂತ ಮಯ್ಯ, ಪ್ರಾದೇಶಿಕ ಮ್ಯಾನೇಜರ್ ಹಾಗೂ ಪ್ರಧಾನ ಕಛೇರಿ ಮತ್ತು ಪ್ರಾದೇಶಕಿಕ ಕಛೇರಿ, ಬಳ್ಳಾರಿ ಯ ಎಲ್ಲಾ ಸಿಬ್ಬಂದಿ ಪಾಲ್ಗೊಂಡಿದ್ದರು.