ಕಾಖರ್ಾನೆಗಳನ್ನು ಆರಂಭಿಸಿ ಪರಿಹಾರ ಹೆಚ್ಚಿಸಲು ಎಐಟಿಯುಸಿಯಿಂದ ಬೈಕ್ ರ್ಯಾಲಿ
ಲೋಕದರ್ಶನ ವರದಿ
ಬಳ್ಳಾರಿ 31:ರೈತರ ಜಮೀನುಗಳನ್ನು ವಶಪಡಿಸಿಕೊಂಡಿರುವ ಉದ್ದೇಶದಂತೆ ಕೂಡಲೇ ಕಾಖರ್ಾನೆಗಳನ್ನು ಆರಂಭಿಸಿ ಜೊತೆಗೆ ರೈತರು ನೀಡಿರುವ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ತಾಲೂಕಿನಲ್ಲಿ ಮಿತ್ತಲ್, ಭ್ರಾಹ್ಮಿಣಿ, ಎನ್.ಎಂ.ಡಿ.ಸಿ ಕಂಪನಿಗಳಿಗೆ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ. ಅವರು ಭಾನುವಾರ ಸುದ್ದಿಗೋಷ್ಟಿ ನಡೆಸಿದ ಎಐಟಿಯುಸಿಯ ಮುಖಂಡ ಜೆ.ಸತ್ಯಬಾಬು ನೇತೃತ್ವದಲ್ಲಿ ಹಲವಾರು ರೈತರು ಮಾತನಾಡಿ ತಾಲೂಕಿನ ಕುಡುತಿನಿ, ಸಿದ್ದಮನಹಳ್ಳಿ, ಕೊಲಗಲ್ಲು, ವೇಣಿವೀರಾಪುರ, ಹರಗಿನಡೋಣಿ ಮೊದಲಾದ ಗ್ರಾಮಗಳ ಸಂತ್ರಸ್ಥರಾದ ರೈತರು ಮಾತನಾಡಿ ಕಳೆದ ಎಂಟು ಹತ್ತು ವರ್ಷಗಳಿಂದ ನಮ್ಮ ಗ್ರಾಮಕ್ಕೆ 10 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಗಳನ್ನು ಕೇವಲ 5 ರಿಂದ 8 ಲಕ್ಷ ರೂ ಪರಿಹಾರ ನೀಡಿ ಉಕ್ಕಿನ ಕಾಖರ್ಾನೆಗಳನ್ನು ಪ್ರಾರಂಭಿಸುವುದಾಗಿ ಸರಕಾರದ ಕೆಐಡಿಬಿಯು ಕಂಪನಿಗಳಿಗೆ ಸ್ವಾದೀನ ಪಡಿಸಿಕೊಂಡಿದ್ದರು. ಆದರೆ ಈ ವರೆಗೆ ನಮ್ಮ ಗ್ರಾಮಗಳಲ್ಲಿ ಒಂದು ಕಾಖರ್ಾನೆ ಸಹ ಪ್ರಾರಂಭವಾಗಿಲ್ಲ. ಆರಂಭಿಸಿದ್ದರೇ ನಮ್ಮ ಕುಟುಂಬಗಳಿಗೆ ಒಂದಿಷ್ಟು ಉದ್ಯೋಗ ದೊರಕುತ್ತಿತ್ತು. ಅದು ಆಗಲಿಲ್ಲ. ಹೀಗಾಗಿ ಜಮೀನು ಮಾರಿದ ಕುಟುಂಬಗಳಿಗೆ ಯಾವುದೇ ರೀತಿಯ ಕೆಲಸವಿಲ್ಲದಂತಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಕಾಖರ್ಾನೆ ಆರಂಭಿಸುವವರೆಗೆ ಪ್ರತೀ ಕುಟುಂಬಕ್ಕೆ ಒಂದು ಎಕರೆಗೆ 20 ಸಾವಿರ ರೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಏಕೆಂದರೆ ಈ ಹಿಂದೆ ನೀಡಿದ ಪರಿಹಾರದ ಮೌಲ್ಯ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕು ಎಂದ ಅವರು ನಮ್ಮಿಂದ 8 ಲಕ್ಷಕ್ಕೆ ಪಡೆದ ಜಮೀನು ಕೆಐಡಿಬಿ ಈಗ ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಲು 58 ಲಕ್ಷ ರೂಗೆ ಮಾರಲು ಮುಂದಾಗಿದೆ. ಅದಕ್ಕಾಗಿ ಕೂಡಲೇ ಕೈಗಾರಿಕೆಗಳನ್ನು ಆರಂಭಿಸಿ ಜೊತೆಗೆ ಮಾರಿದ ದಿನಾಂಕದಿಂದ ಇಲ್ಲಿಯವರೆಗೆ ಪ್ರತೀ ಕುಟುಂಬಕ್ಕೆ ಮಾಸಿಕ 20 ಸಾವಿರ ಪರಿಹಾರ ನೀಡಿ ಹಿಂದೆ ನೀಡಿದ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಎಂದು ಸರಕಾರವನ್ನು ಒತ್ತಾಯಿಸಲು ಜ.03ರಂದು ಕುಡತಿನಿಯಿಂದ ಬಳ್ಳಾರಿಯವರೆಗೆ ಬೈಕ್ ರ್ಯಾಲಿ ಮೂಖಾಂತರ ಜಿಲ್ಲಾಧಿಕಾರಿಗಳ ಆವರಣದಲ್ಲಿ ಒಂದು ದಿನದ ಮುಷ್ಕರವನ್ನು ಕೈಗೊಳ್ಳಲಾಗುತ್ತದೆ ಎಂದು ಮತ್ತು ಈ ಜಮೀನಿಗೆ ಸಂಬಂಧಿಸಿದ ಸೊಂಡೂರು ಶಾಸಕ, ಸಚಿವ ಈ.ತುಕರಾಮ್, ಸಂಸದ ಉಗ್ರಪ್ಪ ಅವರಿಗೆ ಈ ವಿಷಯ ಕುರಿತು ಮನವಿಯನ್ನು ಮಾಡಲಾಗುತ್ತದೆ ಎಂದರು. ಈ ಪತ್ರಿಕಾಗೋಷ್ಟಿಯಲ್ಲಿ ರೈತರುಗಳಾದ ಕೃಷ್ಣಪ್ಪ, ರೇಣುಕಾರಾಜ್, ಜಂಗ್ಲಿ ಸಾಬ್, ಮಲ್ಲಿಕಾಜರ್ುನ, ವಿಜಯಕುಮಾರ, ಗೋವಿಂದರಾಜು, ಪಾಂಡುರಂಗ, ನಾಗೇಶಪ್ಪ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.