ಎಇಡಿಎಸ್ಓ 65ನೇ ಸಂಸ್ಥಾಪನಾ ದಿನ ; ಸೂಕ್ತಿ, ಛಾಯಾಚಿತ್ರ ಪ್ರದರ್ಶನ
ಬಳ್ಳಾರಿ 28:ಎಐಡಿಎಸ್ಒ ವಿದ್ಯಾಥರ್ಿ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿಯ ವತಿಯಿಂದ ಎಐಡಿಎಸ್ಒನ 65ನೇ ಸಂಸ್ಥಾನಾ ದಿನದ ಅಂಗವಾಗಿ ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದ ಬಳಿ ಮಹಾನ್ ವ್ಯಕ್ತಿಗಳ 'ಸೂಕ್ತಿ ಮತ್ತು ಎಐಡಿಎಸ್ಒ ಹೋರಾಟಗಳ ಛಾಯಾಚಿತ್ರಗಳ ಪ್ರದರ್ಶನ'ವನ್ನು ಹಮ್ಮಿಕೊಳ್ಳಲಾಗಿತ್ತು. ರಾಜಿರಹಿತ ಹೋರಾಟದ ಸ್ಪೂತರ್ಿಯ ಸಂಕೇತವಾದ ಭಗತ್ ಸಿಂಗ್ರವರ ಭಾವಚಿತ್ರವಿರುವ ಬ್ಯಾಡ್ಜ್ಗಳನ್ನು ಸಾವಿರಾರು ವಿದ್ಯಾಥರ್ಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು. ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ನರಸಣ್ಣನವರು ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ನುಡಿಗಳನ್ನು ಮಾತನಾಡುತ್ತಾ.., "ಇಂದಿನ
ಈ ಸಮಸ್ಯೆಗಳನ್ನು ಹೋಗಲಾಡಿಸಲು ಹೋರಾಟ ಅನಿವಾರ್ಯ, ನಾವು ಎಲ್ಲಾತ್ಯಾಗಕ್ಕೂ ಸಿದ್ದರಾಗಬೇಕಾಗಿದೆ. ಆಗಮಾತ್ರ ಫಲವನ್ನು ಪಡೆಯಲು ಸಾಧ್ಯ ಹಾಗೂ ನಿರಂತರ ಹೋರಾಟದಿಂದ ಮಾತ್ರ ಬದಲಾವಣೆ ಸಾದ್ಯ. ಅಂತಹ ಪ್ರಯತ್ನ ಈ ಸಂಘಟನೆ ಮಾಡುತ್ತಿದೆ. ಈ ಸಂಘಟನೆಯಲ್ಲಿರುವವರು ಬರೀ ವಿದ್ಯಾಥರ್ಿಗಳಲ್ಲ ದೇಶದ ರೂಪುರೇಷಗಳನ್ನು ಬದಲಾಯಿಸಲು ಮುಂದಾಗಿರುವ ನಾಯಕರು. ಇಂತಹ ಸಂಘಟನೆ ನೇತಾಜಿ, ಭಗತ್ಸಿಂಗ್ರ ಆದರ್ಶದಲ್ಲಿ ಬೆಳೆಯುತ್ತಿದೆ. ಎಐಡಿಎಸ್ಒ ಸಂಘಟನೆಯ ವಿದ್ಯಾಥರ್ಿ ಶಕ್ತಿ ದೊಡ್ಡದಾಗಿಲಿ" ಎಂದು ಹಾರೈಸಿದರು. ಎಐಡಿಎಸ್ಒನ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ನೇಮಕಲ್ರವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ.., "ನಮ್ಮದೇಶದ ಏಕೈಕ ನೈಜಕ್ರಾಂತಿಕಾರಿ ವಿದ್ಯಾಥರ್ಿ ಸಂಘಟನೆ ಎಐಡಿಎಸ್ಒ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಎಐಡಿಎಸ್ಒನ ಮಾರ್ಗದರ್ಶಕರಾದ ಕಾಮ್ರೇಡ್ ಶಿವದಾಸ್ ಘೋಷ್ರವರು ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರಿತ ಶಿಕ್ಷಣವನ್ನು ಒತ್ತಿಹೇಳುವ ವಿದ್ಯಾಥರ್ಿಗಳ ಧ್ವನಿಯಾದ ಎಐಡಿಎಸ್ಒ ವಿದ್ಯಾಥರ್ಿ ಸಂಘಟನೆಯನ್ನು 1954 ಡಿಸೆಂಬರ್ 28 ರಂದು ಸ್ಥಾಪಿಸಲು ಮಾರ್ಗದರ್ಶನ ನೀಡಿದರು. ಅವರು
ಈ ದೇಶದಲ್ಲಿರುವ ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ವಿಚಾರಗಳನ್ನು ಅಳವಡಿಸಿಕೊಂಡು ದೇಶವನ್ನು ಬದಲಾಯಿಸುವಲ್ಲಿ ವಿದ್ಯಾಥರ್ಿಗಳ ಪಾತ್ರ ಬಹುಮುಖ್ಯ ಎಂಬುವ ಉದ್ದೇಶದಿಂದ ಎಐಡಿಎಸ್ಒ ಸಂಘಟನೆಯನ್ನು ಸ್ಥಾಪಿಸಿದರು. ಇದು ಇಂದು ದೇಶದ28 ರಾಜ್ಯಗಳಲ್ಲಿ ಸಕ್ರಿಯವಾಗಿ ವಿದ್ಯಾಥರ್ಿಗಳ ಹಾಗೂ ಶೈಕ್ಷಣಿಕ ಸಮಸ್ಯೆಗಳ ಕುರಿತು ರಾಜಿರಹಿತ ಹೋರಾಟಗಳನ್ನು ಕಟ್ಟುತ್ತಿದೆ. ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್ ಹಾಗೂ ಹಲವಾರು ಕ್ರಾಂತಿಕಾರಿಗಳು ಕಂಡಕನಸ್ಸನ್ನು ನನಸು ಮಾಡಲು ಸಕ್ರಿಯವಾಗಿಕಾರ್ಯ ನಿರ್ವಹಿಸುತ್ತಿದೆ" ಎಂದು ಹೇಳಿದರು. ಜಿಲ್ಲಾ ಕಾರ್ಯದಶರ್ಿ ಸುರೇಶ್.ಜಿ ಮಾತನಾಡುತ್ತಾ.., "ಕ್ರಾಂತಿಕಾರಿಗಳ ವಿಚಾರದ ಸ್ಪೂತರ್ಿಯೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿನ ಸಮಸ್ಯೆಗಳ ಕಿತ್ತೊಗೆಯಲು ಧಣಿವರಿಯದೆ ವಿದ್ಯಾಥರ್ಿಗಳ ಮದ್ಯೆ ಕೆಲಸ ಮಾಡುತ್ತಾ ಹೋರಾಟಗಳನ್ನು ಕಟ್ಟುತ್ತಿರುವ ನೈಜ ಸಂಘಟನೆ ಎಂದರೆ ಅದು ಎಐಡಿಎಸ್ಒ. ಜಾಗತೀಕರಣ, ಖಾಸಗೀಕರಣದ ನೀತಿಗಳಿಂದ ಶಿಕ್ಷಣವು ಮಾರಾಟದ ವಸ್ತುವಾಗಿದೆ. ಹಣವಿದ್ದವರಿಗೆ ಒಂದು ರೀತಿಯ ಶಿಕ್ಷಣ ಇಲ್ಲದವರಿಗೆ ಇನ್ನೊಂದು ರೀತಿಯ ಶಿಕ್ಷಣವನ್ನು
ಈ ಪ್ರಜಾತಂತ್ರರಾಷ್ಟ್ರದಲ್ಲಿ ಸಕರ್ಾರಗಳು ಜಾರಿಗೆ ತಂದಿವೆ. ಮೌಲ್ಯಗಳನ್ನು ಮರೆತು, ನೀತಿ-ನೈತಿಕತೆಗಳನ್ನು ಗಾಳಿಗೆ ತೂರಿಯಂತ್ರಮಾನವರನ್ನು ಸೃಷ್ಟಿಮಾಡುತ್ತಿವೆ. ಸಕರ್ಾರಗಳು ಶಿಕ್ಷಣಕ್ಕೆ ಅನುದಾನ ಕಡಿತಗೊಳಿಸಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳು ಕಲ್ಪಿಸದೇ, ಶಿಕ್ಷಕರ ನೇಮಕಾತಿ ಮಾಡದೆ ಕಾಟಾಚಾರಕ್ಕೆ ಶಿಕ್ಷಣ ನೀಡುತ್ತಿದೆ. ಖಾಸಗಿ ಶಾಲಾ-ಕಾಲೇಜುಗಳತ್ತ ಜನರು ಮುಖ ಮಾಡಲು ನಮ್ಮ ಸಕರ್ಾರಗಳು ಹಗಲಿರುಳು ಶ್ರಮಿಸುತ್ತಿವೆ. ಪ್ರಜಾತಂತ್ರದೇಶದಲ್ಲಿ ಶಿಕ್ಷಣವನ್ನು ಸಂಪೂರ್ಣವಾಗಿ ಸಕರ್ಾರವೇ ಉಚಿತವಾಗಿ ಜನರಿಗೆ ನೀಡಬೇಕು. ಶಿಕ್ಷಣ ನಮ್ಮ ಹಕ್ಕು. ಇದಕ್ಕೆ ಶಿಕ್ಷಕರು, ವಿದ್ಯಾಥರ್ಿಗಳು, ಶಿಕ್ಷಣ ಪ್ರೇಮಿಜನತೆ ಒಕ್ಕೊರಲಿನಿಂದ ಧ್ವನಿಯೆತ್ತಿದಾಗ ಮಾತ್ರ ಶಿಕ್ಷಣವನ್ನು ಉಳಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದರು. ಜಿಲ್ಲಾ ಸಮಿತಿಯ ಸದಸ್ಯರಾದ ಗುರಳ್ಳಿ ರಾಜರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ರವಿಕಿರಣ್.ಜೆ.ಪಿ, ಈರಣ್ಣ, ರಂಗಸ್ವಾಮಿ, ಶಾಂತಿ, ಶೇಖರ್ ಹಾಗೂ ನೂರಾರು ವಿದ್ಯಾಥರ್ಿಗಳು ಭಾಗವಹಿಸಿದ್ದರು.