ಲಕ್ಕನ ಕರೆಯಲ್ಲಿ ಯುವತಿಯ ಶವ ಪತ್ತೆ
ಲೋಕದರ್ಶನ ವರದಿ
ಜಮಖಂಡಿ 01: ನಗರದ ಹೃದಯಭಾಗವಾದ ಲಕ್ಕನ ಕರೆಯಲ್ಲಿ ಯುವತಿಯೊರ್ವಳ ಶವ ಪತ್ತೆಯಾಗಿದ್ದು.
ನಗರದ ಕಲಾಲ ಗಲ್ಲಿಯ ನಿವಾಸಿಯಾದ ಲಕ್ಷ್ಮೀ ರಾಮಚಂದ್ರ ಪನಾಳಕರ (34) ಬಟ್ಟೆಗಳನ್ನು ತೊಳೆಯಲು ಹೋಗಿ ಕಾಲುಜಾರಿ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾಳೆಂದು ತಿಳಿದು ಬಂದಿರುತ್ತದೆ.
ಬಟ್ಟೆಗಳನ್ನು ತೊಳೆದು ಕಟ್ಟೆಯ ಮೇಲೆ ಇಟ್ಟಿರುವ ಬ್ಯಾಗ್ ಮತ್ತು ಅವಳ ಮತ್ತೊಂದು ಬ್ಯಾಗ್ನಲ್ಲಿ ತನ್ನ ಆಧರಕಾರ್ಡ, ಚುನಾವಣೆ ಗುರುತಿನ ಚೀಟಿ ಹಾಗೂ ಬಟ್ಟೆಗಳನ್ನು ತುಂಬಿರುವ ಬ್ಯಾಗ್ ಪತ್ತೆಯಾಗಿದ್ದು. ಯುವತಿ ಲಕ್ಷ್ಮೀ ರಾಮಚಂದ್ರ ಪನಾಳಕರ ವಿಕಲಚೇತನಳಾಗಿದ್ದ ಕಾರಣ ಕಾಲುಜಾರಿ ಬಿದ್ದಿದ್ದಾಳೆಂದು ಮಾಹಿತಿ ತಿಳಿದಿರುತ್ತದೆ.
ಸ್ಥಳಕ್ಕೆ ಶಹರ ಠಾಣಿಯ ಪೋಲೀಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದು. ಮನೆಯ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತೆ ಇತ್ತು.