ಯುವಕನೊಬ್ಬ ಅಯೋಧ್ಯೆಯಿಂದ ರಾಮೇಶ್ವರದವರಿಗೆ ಸೈಕಲ್ ಮೂಲಕ ಯಾತ್ರೆ
ಲೋಕದರ್ಶನ ವರದಿ,
ಜಮಖಂಡಿ 13: ಶ್ರೀರಾಮನು ತಂಗಿದ ಸ್ಥಳಗಳಿಗೆ ಉತ್ತರಪ್ರದೇಶದ ಯುವಕನೊಬ್ಬ ಅಯೋಧ್ಯೆಯಿಂದ ರಾಮೇಶ್ವರದವರಿಗೆ ಸೈಕಲ್ ಮೂಲಕ ಯಾತ್ರೆಯನ್ನು ಆರಂಭಿಸಿದ್ದು. ಜಮಖಂಡಿ ನಗರದ ರಾಮೇಶ್ವರ ದೇವಾಸ್ಥಾನಕ್ಕೆ ಭೇಟಿ ನೀಡಿದರು.
ಉತ್ತರಪ್ರದೇಶದ ಅಯೋಧ್ಯೆ ನಗರದ ನಿವಾಸಿ ಅಭಿಷೇಕ ಸಾವಂತ ಶ್ರೀವಾತ್ಸವ ವೃತ್ತಿಯಲ್ಲಿ ಪಂಜಾಬ ಕೇಸರಿ ಪತ್ರಿಕೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು. ಅಯೋಧ್ಯೆ ಡೈರಿ ಟೂರಿಸ್ಟ್ ವೇಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಏಪ್ರೀಲ್ 6 ರಿಂದ ಸೈಕಲ್ ಯಾತ್ರೆ ಆರಂಭಿಸಿ. ಈಗಾಗಲೇ 6 ಸಾವಿರ ಕಿ.ಮೀ ಯಾತ್ರೆ ಸಂಚರಿಸಿದ್ದಾರೆ. ಇನ್ನೂ 2,5 ಸಾವಿರ ಕಿ.ಮೀ ಸಂಚರಿಸಬೇಕಾಗಿದ್ದು. ಶ್ರೀರಾಮನು 14 ವರ್ಷಗಳ ಕಾಲ ವನವಾಸ ಸಂಚರಿಸಿರುವ ಎಲ್ಲ ಸ್ಥಳಗಳಿಗೆ ಭೇಟಿ ನೀಡುವ ಗುರಿ ಹೊಂದಿದ್ದೇನೆ ಎಂದರು.
ಶ್ರೀರಾಮ ಅಯೋಧ್ಯೆಯಿಂದ ಕನ್ಯಾಕುಮಾರಿಯವರಿಗೆ ಕಾಡು, ನಾಡು, ಗುಡ್ಡ ಬೆಟ್ಟಗಳ ನಡುವೆ ಸಂಚರಿಸಿದ ದಾರಿಯಲ್ಲಿ ನಿಮಾರ್ಣಗೊಂಡಿರುವ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿರುವ ಮಹಿಮೆ ಮಹಾತ್ಮೆ ಅರಿಯುವ ಮೂಲಕ ರಾಮನ ಮಹಿಮೆ ಬಣ್ಣಿಸುತ್ತ ಸಾಗುತ್ತಿರುವುದು ವಿಷೇಷವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂದಿನ ಯುವಕರಿಗೆ ಶ್ರೀರಾಮನ ಮಹಿಮೆ ಬಗ್ಗೆ ತಿಳಿದ್ದುಕೊಳ್ಳುವದು ಅವಶ್ಯವಾಗಿದೆ ಎಂದರು.
ನಗರದ ಪ್ರಭುಜಿ ಹುಗಾರ, ಶೈಲೆಶ ಆಪ್ಟೆ, ಅಜಯ ಕಡಪಟ್ಟಿ, ವಿರೇಂದ್ರ ಕಲೂತಿ, ಪ್ರಕಾಶ ಮೆಲಮನಿ, ಶಂಕರ ಕಾಳೆ, ಶ್ರೀಧರ ಕಂಬಿ, ಸಿದ್ದು ನ್ಯಾಮಗೌಡ, ವಿನಾಯಕ ಗವಳಿ, ಪವನ ಸಾಳೂಂಕೆ, ಶ್ರೀಶೈಲ ಗಡಾದ ಸೇರಿದಂತೆ ಅನೇಕರು ಇದ್ದರು.