ರಾಣಿ ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬನ ಸಾವು
ಲೋಕದರ್ಶನ ವರದಿ,
ಜಮಖಂಡಿ : 24: ನಗರದ ಅರಮನೆ ಪಕ್ಕದಲ್ಲಿ ಇರುವ ರಾಣಿ ಕೆರೆಯಲ್ಲಿ ಯುವಕನೊಬ್ಬನು ಈಜಲು ಹೋಗಿ ಸಾವನ್ನಪ್ಪಿದ ಹೃದವಿದ್ರಾವಕ ಘಟನೆ ನಡೆದಿದೆ.
ಇಲ್ಲಿನ ಸದಾನಂದ ಕಾಲೋನಿಯ ಮಹೇಶ ದುಂಡಪ್ಪ ಮಾಳಿ, (16) ಸಾವನ್ನಪ್ಪಿದ ದುದ್ರೈವಿ. ಸಾವನ್ನಪ್ಪಿದ ಮಹೇಶ ಮನೆಗೆ ಒಬ್ಬನೆ ಗಂಡು ಮಗನಾಗಿದ್ದು. 4 ಜನ ಸಹೋದರಿಯರು ಇತನಿಗೆ ಇದ್ದು. ಆದರೆ ವಿಧಿವಶ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ರೋಧನ ಮುಗಿಲು ಮುಟ್ಟುವಂತೆ ಇತ್ತು.
ರಾಣಿ ಕೆರೆಯಲ್ಲಿ ಯುವಕನ ಶವ ಪತ್ತೆಗಾಗಿ ಅಗ್ನಿಶಾಮಕ ದಳದವರು, ಪೊಲೀಸರು ಹರಸಾಹಸ ಪಡಬೇಕಾಯಿತು. ಉರಿ ಬಿಸಿಲಿನ ತಾಪಕ್ಕೆ ಕೆಲವಂದಿಷ್ಟು ಯುವಕರು ಕೆರೆ, ಬಾವಿ, ಕೆನ್ನಾಲ ಕಾಲುವೆಗಳಲ್ಲಿ ಈಜಲು ಹೋಗ ಬೇಕಾದರೆ ಎಚ್ಚರದಿಂದ ಇರಲೆಬೇಕು. ಸ್ವಲ್ಪ ಯಾಮಾರಿದರೆ ಸಾವು ಖಚಿತ.
ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಯುವನಾಯಕ ಬಸವರಾಜ ನ್ಯಾಮಗೌಡ ಭೇಟಿ ನೀಡಿ. ಕುಟುಂಬಸ್ಥರಿಗೆ ಸ್ವಾಂತನ ತಿಳಿಸಿದ್ದಾರೆ. ಗ್ರಾಮೀಣ ಠಾಣಿ ಪಿಎಸ್ಐ ಗಂಗಾ ಬಿರಾದರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಶವ ಪರಿಕ್ಷೇಗೆ ರವಾನಿಸಿದ್ದು. ಸಾವನ್ನಪ್ಪಿದ ಯುವಕನ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಡುವಂತೆ ಇತ್ತು.