ಜಮಖಂಡಿ

ತೋಟದ ಕೊಳಚೆ ಹೊಂಡದಲ್ಲಿ ಮಹಿಳೆಯ ಶವ ಪತ್ತೆ

ತೋಟದ ಕೊಳಚೆ ಹೊಂಡದಲ್ಲಿ ಮಹಿಳೆಯ ಶವ ಪತ್ತೆ

ಜಮಖಂಡಿ 17: ನಗರದ ಜಂಬಗಿ ರಸ್ತೆ ಪಕ್ಕದ ಕಂಗನೊಳ್ಳಿ ಅವರ ತೋಟದ ಕೊಳಚೆ ಹೊಂಡದಲ್ಲಿ ಮಹಿಳೆಯೊರ್ವಳ ಶವ ಪತ್ತೆಯಾಗಿದೆ. 

ಕಂಗನೋಳ್ಳಿ ಅವರ ತೋಟದ ಗದ್ದೆಯ ಕೊಳಚೆ ಹೊಂಡದಲ್ಲಿ ಅಪರಿಚಿತ ಮಹಿಳೆ (45) ಕೊಳಚೆ ನೀರಿನಲ್ಲಿ ಮುಳಗಿ ಸಾವನ್ನಪಿದ ಘಟನೆ ನಡೆದಿದೆ. ಮಹಿಳೆ ಶವ ಪತ್ತೆಯಾಗಿದ್ದು ಮಹಿಳೆಯ ಶವ ಗುರುತು ಸಿಗದ ಹಿನ್ನೆಲೆಯಲ್ಲಿ ಮಹಿಳೆ ಯಾರೆಂದು ತಿಳಿದು ಬಂದಿರುವುದಿಲ್ಲ. ಮಹಿಳೆಯ ಶವವನ್ನು ಮೇಲೆತ್ತಲು ನಗರಸಭೆಯ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿತ್ತು. 

ಸ್ಥಳಕ್ಕೆ ಡಿ ಎಸ್ ಪಿ. ಶಾಂತವೀರ ಈ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್ ಐ ನಾಗರಾಜ ಕಿಲಾರೆ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಕುರಿತು ಶಹರ ಪೋಲಿಸ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ ಐ. ನಾಗರಾಜ ಕಿಲಾರೆ ಅಪರಿಚಿತ ಮಹಿಳೆಯ ಶವ ಗುರುತು ಸಿಗದ ಹಿನ್ನೆಲೆ ಸಾರ್ವಜನಿಕರಿಗೆ ಮಹಿಳೆಯ ಬಗ್ಗೆ ಸುಳಿವು ಸಿಕ್ಕರೆ ಪೋಲಿಸ್ ಇಲಾಖೆಗೆ ತಿಳಿಸಬೇಕು ಎಂದರು. 


ಸುದ್ದಿ ಓದಿ