ಜಮಖಂಡಿ

ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ

ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ

ಜಮಖಂಡಿ 13:  ನಗರದ ಬಿಎಲ್‌ಡಿಇಎಎಸ್ ನಸಿಂರ್ಗ್ ಕಾಲೇಜಿನ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳ ಕಾಲೇಜು ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. 

ಬಿಎಲ್‌ಡಿಇಎಸ್, ಪಿಯು ಸ್ವತಂತ್ರ ಕಾಲೇಜು ಮತ್ತು ಕಾಮರ್ಸ್‌, ಬಿಎಚ್‌ಎಸ್ ಕಲೆ, ಮತ್ತು ಟಿಜಿಪಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸಲಾಯಿತು, ಪ್ರೊ. ಬಿ.ಐ. ಕರಲಟ್ಟಿ, ಬಿಎಲ್‌ಡಿಇಎಸ್ ನಸಿಂರ್ಗ್ ಕಾಲೇಜಿನ ಪ್ರಾಂಶುಪಾಲ ಡಾ, ವೀರಭದ್ರ​‍್ಪ ಜಿ, ಮೆಂಡಗುಡ್ಲಿ, ಪದವಿ ಕಾಲೇಜಿನ ಆಂಕಿ ವಿಭಾಗದ ಮುಖ್ಯಸ್ಥ ಡಾ, ವಿ.ಎಸ್‌. ಕುಲಕರ್ಣಿ ಉಪಸ್ಥಿತರಿದ್ದರು, ಇತರ ಗಣ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಹ ಭಾಗವಹಿಸಿದರು. 

ದ್ವಿತೀಯ ಸೆಮಿಸ್ಟರ್‌ನ 16 ಮಂದಿ ವಿದ್ಯಾರ್ಥಿಗಳು    ಮೈಮ್    ಪ್ರದರ್ಶನದ ಮೂಲಕ ಜನಸಂಖ್ಯಾ ಹೆಚ್ಚಳದ ಕಾರಣಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಅರಿವು ಮೂಡಿಸಿದರು, ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಲಕ್ಷ್ಮಿ ಮಸಲಿ ಅವರು ಪಿಯು ವಿದ್ಯಾರ್ಥಿಗಳಿಗೆ ಜಾಗೃತಿಯ ಮಹತ್ವವನ್ನು ಹಾಗೂ ಭವಿಷ್ಯದ ಜವಾಬ್ದಾರಿ ಪೂರಿತ ನಾಗರಿಕರು, ಪಿಯು ವಿದ್ಯಾರ್ಥಿಗಳು ಜನಸಂಖ್ಯಾ ಸಮಸ್ಯೆಗಳ ಅರಿವು ಮತ್ತು ಪರಿಹಾರಗಳ ಕುರಿತು ಅರಿತುಕೊಳ್ಳುವುದು ಅತ್ಯವಶ್ಯಕತೆವಾಗಿದೆ ಎಂದರು, 

ಬಿಎಲ್‌ಡಿಇಎಸ್ ನಸಿಂರ್ಗ್ ಕಾಲೇಜಿನ ಪ್ರಾಂಶುಪಾಲ ಡಾ, ವೀರಭದ್ರ​‍್ಪ ಜಿ. ಮೆಂಡಗುದ್ಲಿ ಅವರು ಜನಸಂಖ್ಯೆಯ ಪ್ರಮುಖ ಸಮಸ್ಯೆಗಳನ್ನು ಮತ್ತು ಅದರಿಂದ  ಸಮಾಜದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ವಿವರಿಸುವ ಮೂಲಕ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.  

ಇದೇ ಸಂದರ್ಭದಲ್ಲಿ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ನಸಿಂರ್ಗ್, ಪಿಯು, ಮತ್ತು ಪದವಿ ಕಾಲೇಜುಗಳ ಅಧ್ಯಾಪಕರು ಭಾಗವಹಿಸಿದರು, ನಸಿಂರ್ಗ್ ಪಿಜಿ ಟ್ಯೂಟರ್ ಕೀರ್ತಿ ಹಳೆಮಣಿ ಮತ್ತು ಯುಜಿ ಟ್ಯೂಟರ್ ಜ್ಯೋತಿ ಮರೆಗುದ್ದಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ