ಮೂವರು ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಜಮಖಂಡಿ 26: ಹೆತ್ತ ತಾಯಿಯೇ ತನ್ನ ಹಸುಳೆಗಳನ್ನು ಸಾವಿನ ಕೂಪಕ್ಕೆ ಬಿಸಾಡಿದಂತಹ ಹೃದಯ ವಿದ್ರಾವಕ ಘಟನೆಯೊಂದು ತಾಲ್ಲೂಕಿನ ಕುಂಬಾರ ಹಳ್ಳ ಗ್ರಾಮದಲ್ಲಿ ನಡೆದಿದೆ. ತನಗೆ ಮೂರನೇ ಮಗು ಕೂಡಾ ಹೆಣ್ಣು ಕೂಸು ಹುಟ್ಟಿತ್ತೆಂದು ಮಾನಸಿಕಳಾಗಿ ತಮ್ಮದೇ ಹೊಲದಲ್ಲಿನ ಭಾವಿಗೆ ಮೂರು ಮಕ್ಕಳನ್ನು ಎಸೆದು ತಾನೂ ಆತ್ಮಹತ್ಯೆ ಮಾಡಿಕೋಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ.
ತಾಲೂಕಿನ ಕುಂಬಾರಹಳ್ಳ ಗ್ರಾಮದ ಸಂಗೀತಾ ಹಣಮಂತ ಗೌಡಪ್ಪಹೋಳ (28) ಎಂಬಾಕೆಗೆ ಕಳೆದ 21 ದಿನಗಳ ಹಿಂದೆ ತನಗೆ ಮೂರನೇ ಮಗು ಹೆಣ್ಣಾಯಿಂತೆಂಬ ಕಾರಣ ಮಾನಸಿಕಗೊಂಡು ಯಾರೂ ಇಲ್ಲದ ವೇಳೆ ತನ್ನ ಹೆತ್ತ ಮಗ ಶ್ರೀಶೈಲ (5) ಮಗಳು ಶ್ರಾವಣಿ (3) ಹಾಗೂ ಕಳೆದ 20 ದಿನಗಳ ಹಿಂದಷ್ಟೇ ಜಗತ್ತನ್ನು ನೋಡಿದ ಹಸುಕುಸು ಸೌಜನ್ಯಳನ್ನು ಬಾವಿಗೆ ಎಸೆದು ತಾನೂ ಹಾರಿಕೊಂಡಿದ್ದು ಘಟನೆ ನಡೆದಿದೆ.ಅದೃಶ್ಯವಶಾತ ಸಂಗೀತಾ ಬದುಕುಳಿದಿದ್ದು, ಮೂರು ಮಕ್ಕಳು ಪ್ರಾಣತೆತ್ತಿವೆ. ಸಂಗೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಈ ಬಗ್ಗೆ ಜಮಖಂಡಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಡಿವೈಎಸ್ಪಿ ಶಾಂತವೀರ ಘಟನಾ ಸ್ಥಳ ಕ್ಕೆ ಭೇಟಿ ನೀಡಿದ್ದು, ಸಿಪಿಐ ಮಲ್ಲಪ್ಪ ಮಡ್ಡಿ ತನಿಖೆ ನಡೆಸಿದ್ದಾರೆ. ಎಸೈ ಮಹೇಶ ಸಂಖ ಪ್ರಕರಣ ದಾಖಲಿಸಿಕೊಂಡಿದ್ದಾರೆ.