ಹಣಕಾಸಿನ ವ್ಯವಹಾರ: ವ್ಯಕ್ತಿಯೊಬ್ಬನ ಹತ್ಯೆಗೆ ವಿಫಲ ಯತ್ನ
ಲೋಕದರ್ಶನ ವರದಿ,
ಜಮಖಂಡಿ : 29: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಹತ್ಯೆಗೆ ವಿಫಲ ಯತ್ನ ಮಾಡಿದ ಘಟನೆ ಕೃಷ್ಣಾ ತೀರದಲ್ಲಿ ಸಂಭವಿಸಿದೆ.
ತಾಲೂಕಿನ ತೊದಲಬಾಗಿ ಗ್ರಾಮದ ಶ್ರೀಧರ ಬಸಪ್ಪ ಕಾಸಾರ (50), ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಹಣಕಾಸಿನ ವ್ಯವಹಾರದ ವ್ಯತ್ಯಾಸದಿಂದ ವ್ಯಕ್ತಿಯ ಮೇಲೆ ಪಿಸ್ತೂಲ್ದಿಂದ ಗುಂಡು ಹಾರಿಸಿದ್ದಾರೆ. ಆದರೆ ಗುಂಡು ವ್ಯಕ್ತಿಗೆ ತಾಗದೇ ಇರುವದರಿಂದ ಅಪಾಯದಿಂದ ಪಾರಾಗಿದ್ದು, ತಲೆಗೆ ಭಾಗಕ್ಕೆ ಗಂಭೀರ ಗಾಯಗೊಂಡು ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ. ಕೃಷ್ಣಾ ತೀರದಲ್ಲಿ ಗುಂಡಿನ ಸದ್ದಿಗೆ ಜನ ಭಯಭೀತಗೊಂಡಿದ್ದಾರೆ.
ಮಹಾರಾಷ್ಟ್ರ ತಾಸಗಾಂವ ಮಂಗಲಂ ಟ್ರೇಡರ್ಸ್ ಮಾಲೀಕ ಅನಿಲ ಪಾಂಡುರಂಗ ಪಾಟೀಲ್ ಹಾಗೂ ಮಲ್ಲಪ್ಪ ಕಾಸರ ಮೂರು ಜನ ಸೇರಿ ಒಣದ್ರಾಕ್ಷಿ ವಿಂಗಡಣಾ ಘಟಕವನ್ನು ಮೂರು ವರ್ಷದ ಹಿಂದೆ ಪ್ರಾರಂಭಿಸಿದ್ದರು, ಅವರ ವಿಂಗಡಣೆ ಘಟಕಕ್ಕೆ ಬಂದ ಒಣದ್ರಾಕ್ಷಿಯನ್ನು ಮಹಾರಾಷ್ಟ್ರ ತಾಸಗಾಂವ ಮಂಗಲಂ ಟ್ರೇಡರ್ಸ್ ಮಾಲೀಕ ಅನಿಲ ಪಾಂಡುರಂಗ ಪಾಟೀಲ್ ಇವರಿಗೆ ಕಳಿಸುತ್ತಿದ್ದರು, ಅವರು ಎರಡು ವರ್ಷ ಸರಿಯಾಗಿ ರೈತರಿಗೆ ಹಣ ನೀಡದೇ ಇರುವದರಿಂದ ಈ ಭಾರಿ ಅಡತೆಗೆ ಒಣದ್ರಾಕ್ಷಿ ಅನಿಲ ಪಾಂಡುರಂಗ ಪಾಟೀಲ್ ಇವರಿಗೆ ಕಳಿಸದ ಹಿನ್ನಲೆಯಲ್ಲಿ ಹಲ್ಲೆ ಮಾಡಿರುವ ಘಟಣೆ ನಡೆದಿದೆ.
ತಾಸಗಾಂವ ಮಂಗಲಂ ಟ್ರೇಡರ್ಸ್ ಮಾಲೀಕ ಅನಿಲ ಪಾಟೀಲ್ ಜೊತೆಗೆ ಸಾವಳಗಿಯ ಸುಭಾಸ ಪಾಟೋಳಿ ಸೇರಿ 10ಕ್ಕೂ ಅಧಿಕ ಜನ ಒಮ್ಮೆಲೆ ಬಂದು ಘಟಕದಲ್ಲಿರುವ ಶ್ರೀಧರ ಕಾಸರ ಮತ್ತು ಅವನ ಮಕ್ಕಳನ್ನು ಬಡಿಗೆ, ಕಬ್ಬಿನದ ಸಲಾಕೆಯಿಂದ ಹೊಡೆದಿದು, ಪಿಸ್ತೂಲ್ ದಿಂದ ಮೂರು ಭಾರಿ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶ್ರೀಧರ ಕಾಸರನಿಗೆ ಕಬ್ಬಿಣ ಸಲಾಕೆಯಿಂದ ಹೊಡೆದ ಪರಿಣಾಮ ತಲೆಭಾಗಕ್ಕೆ, ಕೈಗೆ ಭಾರಿ ಪ್ರಮಾಣ ಗಾಯಗೊಂಡಿರುವ ಕಾರಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಾಧ್ಯತೆ ತಿಳಿದ್ದು ಬಂದಿದೆ.
ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೋಲಿಸ್ರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.