ವಿದ್ಯಾಥರ್ಿಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ
ಬಳ್ಳಾರಿ 02: ನಗರದ ರಾಯಲ್ ಕಾಲೋನಿಯಲ್ಲಿರುವ ಕನ್ನಡ ಚೈತನ್ಯ ವೇದಿಕೆಯ 18ನೇ ವಾಷರ್ಿಕೋತ್ಸವದ ಅಂಗವಾಗಿ ವಿವಿದ ಶಾಲೆಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 7ನೇ ತರಗತಿ ವಿದ್ಯಾಥರ್ಿಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ಭಾನುವಾರ ಸರಳಾದೇವಿ ಸತೀಶ್ ಚಂದ್ರ ಅಗರವಾಲ್ ಕಾಲೇಜಿನ ಕೊಠಡಿಯಲ್ಲಿ ಆಯೋಜಿಸಿದ್ದರು. 7ನೇ ತರಗತಿ ವಿದ್ಯಾಥರ್ಿಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ 8ನೇ ತರಗತಿ ಹೈಸ್ಕೂಲ್ ಮಟ್ಟಕ್ಕೆ ಹೋಗುವುದರಿಂದ ವೇದಿಕೆಯು 7ನೇ ತರಗತಿ ವಿದ್ಯಾಥರ್ಿಗಳಿಗಾಗಿಯೇ ಆಯೋಜಿಸಿದ್ದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಹಲವಾರು ವಿದ್ಯಾಥರ್ಿಗಳು ಪರೀಕ್ಷ ಬರೆದರು. ಶೇ.50 ರಷ್ಟು ರಾಜ್ಯಕ್ಕೆ ಸಂಬಂಧಿಸಿದ ವಿಷಯವಿದ್ದು. ಉಳಿದ ಶೇ.50 ವಿವಿದ ವಿಷಯಗಳ ಬಗ್ಗೆ ಪ್ರಶ್ನೆಪತ್ರಿಕೆಯಲ್ಲಿ 50 ಪ್ರಶ್ನೆಗಳನ್ನು ಲಗತ್ತಿಸಿದ್ದರು. ನಾವು ಪ್ರತೀ ವರ್ಷದಂತೆ ಈ ವರ್ಷವು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಆಚರಿಸುತ್ತಿರುವ ಈ ಜ್ಞಾನ ಪರೀಕ್ಷೆಯಿಂದ ಮಕ್ಕಳಿಗೆ ಒಳ್ಳೆಯ ತಿಳುವಳಿಕೆ ಸಿಗಲಿದೆ ಎಂದು ಕನ್ನಡ ಚೈತನ್ಯವೇದಿಕೆಯ ಅಧ್ಯಕ್ಷರಾದ ಬಿ.ಎಸ್ ಪ್ರಭುಕುಮಾರ ಪತ್ರಕರ್ತರಿಗೆ ತಿಳಸಿದರು. ಈ ಪರೀಕ್ಷಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಡಿ.09ರಂದು ನಡೆಯುವ ರಾಘವಕಲಾಮಂದಿರದಲ್ಲಿ ಸಾಯಂಕಾಲ ಆಯೋಜಿಸಿರುವ ವಿವಿದ ಸಾಂಸ್ಕೃತಿಕ ಕಾರ್ಯಕ್ರಮದ ಸಭೆಯಲ್ಲಿ ವಿದ್ಯಾಥರ್ಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಮತ್ತು ಪುರುಷ ಸದಸ್ಯೆರು ಭಾಗವಹಿಸಿ ಯಾವುದೇ ಕೊರತೆ ಇಲ್ಲದೇ ಪರೀಕ್ಷಯನ್ನು ಯಶಸ್ವಿಮಾಡಿದರು.