ಬುಡ್ಡಾಸಾಬ ದಳವಾಯಿ ಗುಂಡಾ ವರ್ತನೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು: ಗುಡಿ
ಜಮಖಂಡಿ 14: ತಾಲೂಕಿನ ಮರೆಗುದ್ದಿ ಗ್ರಾಮದ ಅಡವಿ ಸಿದ್ದೇಶ್ವರ ಜಾತ್ರಾ ಸಮಯದಲ್ಲಿ ಸ್ವಚ್ಚತೆಗಾಗಿ ಊರನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಕೆಆರ್ಎಸ್ ಪಕ್ಷದ ಬುಡ್ಡಾಸಾಬ ಲಾಲಸಾಬ ದಳವಾಯಿ ಎಂಬಾತನ ಮನೆ ಎದುರಿಗಿನ ವಿದ್ಯುತ್ ತಂತಿಗೆ ತಗುಲಿದ್ದ ಗಿಡವನ್ನು ತೆಗೆದಿದ್ದಕ್ಕಾಗಿ ಗ್ರಾಪಂ ಸದ್ಯಸರ ಮೇಲೆ ಗುಂಡಾ ವರ್ತನೆ ಮಾಡಿದ್ದಾನೆ. ಆತನ ವಿರುದ್ದ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತೆಂದು ಗ್ರಾಪಂ ಅಧ್ಯಕ್ಷ ಹಣಮಂತ ಗುಡಿ ಹೇಳಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈತ ಗ್ರಾಮದಲ್ಲಿ ಕೆಆರ್ಎಸ್ ಪಕ್ಷದ ತಾ,ಅಧ್ಯಕ್ಷ ಇದ್ದೇನೆಂದು ಹೇಳಿಕೊಂಡು ಗ್ರಾಮದಲ್ಲಿ ಗೂಂಡಾ ವರ್ತನೆ ಮಾಡುತ್ತಿದ್ದು. ಈ ಹಿಂದೆ ಕೂಡಾ ಗ್ರಾಪಂ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅವರ ಅಕ್ಕನ ಹೆಸರಲ್ಲಿ 12ಸಾವಿರ ರೂ,ಗಳ ಬಿಲ್ ತಗೆದುಕೊಂಡಿದ್ದು. ಮೆತ್ತೆ ಅದೇ ಶೌಚಾಲಯ ನಿರ್ಮಾಣಕ್ಕೆ ತಂದೆ ಮತ್ತು ಅಕ್ಕನ ಹೆಸರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾನೆ. ಬೋಗ್ಸ್ ಬಿಲ್ಲ ಪಾಸು ಮಾಡಿಕೊಡಿ ಎಂದು ವಾಗ್ವಾದ ಮಾಡುತ್ತಿದ್ದಾನೆ. ಪಕ್ಷದ ಹೆಸರಲ್ಲಿ ಬಂದು ಹಪ್ತಾ ವಸೂಲಿ ಮಾಡುವ ಜೊತೆಗೆ ಗುಂಡಾವರ್ತನೆ ಮಾಡುತ್ತಿದ್ದಾನೆ. ಈ ತರಹ ವರ್ತನೆ ಸರಿಯಲ್ಲ ಇಂತವರನ್ನು ನಿಮ್ಮ ಪಕ್ಷದಿಂದ ಕಿತ್ತೊಗೆಯಿರಿ ಎಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಅಡಿವೆಪ್ಪ ಗಸ್ತಿ, ಮಲ್ಲಪ್ಪ ಅಥಣಿ, ಸಾತ್ವಿವೀರ ವಾರದ, ನಾಗಪ್ಪ ತಳವಾರ, ಭೀಮಪ್ಪ ಗುಡಿ, ದುಂಡಪ್ಪ ತಳವಾರ, ಮಲ್ಲಪ್ಪ ತಳವಾರ, ಮಾರುತಿ ಮಾದರ, ಸುರೇಶ ಹಕ್ಕಿ, ಮಾದೇವ ಹುದ್ದಾರ, ಮುತ್ತಯ್ಯ ಗಣಾಚಾರಿ, ಬಸು ನಾವಿ, ಮಲ್ಲಪ್ಪ ಕೊಣ್ಣೂರ, ಪುಂಡಲೀಕ ಪೂಜಾರ ಸೇರಿದಂತೆ ಗ್ರಾಮಸ್ಥರು ಇದ್ದರು.