ಲಕ್ಕನಕೆರೆಯಲ್ಲಿ ಮೊಸಳೆ ಮರಿ ಪ್ರತ್ಯೇಕ್ಷ
ಜಮಖಂಡಿ 28: ನಗರದ ಮಧ್ಯ ಭಾಗದಲ್ಲಿರುವ ಲಕ್ಕನಕೆರೆಯಲ್ಲಿ ಮೊಸಳೆ ಮರಿಗಳು ಪ್ರತ್ಯೇಕ್ಷವಾದ ಘಟನೆ ನಡೆದಿದೆ. ಕೆರೆಯಲ್ಲಿ ಮೊಸಳೆ ಮರಿಯನ್ನು ಕಂಡಿದ್ದಕ್ಕೆ ನಾಗರಿಕರು ಭಯಭೀತಗೊಂಡಿದ್ದಾರೆ.
ಲಕ್ಕನಕೆರೆಯಲ್ಲಿ ದಿನಂಪ್ರತಿ ಬಟ್ಟೆ ತೊಳೆಯಲು ಬರುವ ನೂರಾರು ಮಹಿಳೆಯರು, ಅಗಸರು ಆತಂಕದಲ್ಲಿದ್ದು, ನಗರಸಭೆ ಅಧಿಕಾರಿಗಳು ಈ ಕೆರೆ ದ್ವಾರಕ್ಕೆ ಬೀಗ ಜಡಿದು ಅನಾಹುತಗಳನ್ನು ತಪ್ಪಿಸಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.
ಯಾರೋ ದುಷ್ಕರ್ಮಿಗಳು ಮೊಡಳೆ ಮರಿಗಳನ್ನು ಕೆರಗೆ ತಂದು ಬಿಟ್ಟಿದ್ದು, ಈ ರೀತಿ ಇದರಿಂದ ಮಹಿಳೆಯರು ಬಟ್ಟೆ ತೊಳೆಯುವುದು ದುತ್ಸರವಾಗಿದೆ. ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದ್ದು, ಇಲ್ಲದಂತಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಿ, ಜನನೀಬೀಡ ಪ್ರದೇಶಗಳಲ್ಲಿ ಇಂತಹ ಅಪಾಯಕಾರಿ ಜಲಚರ ಪ್ರಾಣಿಗಳು ಕಾಣದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆ ಜವಾಬ್ದಾರಿಯಾಗಿದ್ದು, ಕೂಡಲೇ ಮೊಸಳೆ ಮರಿಗಳನ್ನು ಹಿಡಿಯಬೇಕು ಮತ್ತು ಲಕ್ಕನಕೆರೆ ಮುಖ್ಯದ್ವಾರವನ್ನು ಬಂದ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ರಾಜು ಪೋತರಾಜ ಒತ್ತಾಯಿಸಿದ್ದಾರೆ.