ಜಮಖಂಡಿ

ವಿಜ್ಞಾನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶೇ 98ರಷ್ಟು ಫಲಿತಾಂಶ

ವಿಜ್ಞಾನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶೇ 98ರಷ್ಟು ಫಲಿತಾಂಶ

ಜಮಖಂಡಿ 23: 2023 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಮಖಂಡಿ ನಗರದ ತುಂಗಳ ವಿಜ್ಞಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಹಾವಿದ್ಯಾಲಯವು ಶೇ 98.89 ಪ್ರತಿಶತ ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ಪ್ರಾಚಾರ್ಯ ಆರ್‌. ಜಿ. ಜಹಾಗೀರದಾರ ತಿಳಿಸಿದರು.  

ವೈಷ್ಣವಿ ಮುತಾಲಿಕ ದೇಸಾಯಿ 585 ಅಂಕ ಪಡೆದು ಪ್ರಥಮ ಸ್ಥಾನ, ಸರಸ್ವತಿ ಹಂದಿಗುಂದ 582 ಪಡೆದು ದ್ವಿತೀಯ ಸ್ಥಾನ, ಕಾವೇರಿ ಮಹಾಜನ 581 ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

153 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಹೆಚ್ಚು ಅಂಕ, 328 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 272 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯೊಂದಿಗೆ ಉತ್ತೀರ್ಣರಾಗಿರುತ್ತಾರೆ.  

ಗಣಿತಶಾಸ್ತ್ರದಲ್ಲಿ 15 ವಿದ್ಯಾರ್ಥಿಗಳು, ಕನ್ನಡ ವಿಷಯದಲ್ಲಿ 7 ವಿದ್ಯಾರ್ಥಿಗಳು, ಜೀವಶಾಸ್ತ್ರ ವಿಷಯದಲ್ಲಿ 4 ವಿದ್ಯಾರ್ಥಿಗಳು, ಗಣಕ ವಿಜ್ಞಾನ ವಿಷಯದಲ್ಲಿ 3 ವಿದ್ಯಾರ್ಥಿಗಳು, ಸಂಖ್ಯಾಶಾಸ್ತ್ರ, ಇಲೇಕ್ಟ್ರಾನಿಕ್ಸ್‌ ಹಾಗೂ ಸಂಸ್ಕೃತ ವಿಷಯದಲ್ಲಿ ತಲಾ 2 ವಿದ್ಯಾರ್ಥಿಗಳು ಮತ್ತು ರಸಾಯನಶಾಸ್ತ್ರ ವಿಷಯದಲ್ಲಿ 1 ವಿದ್ಯಾರ್ಥಿ 100ಕ್ಕೆ 100 ಅಂಕಗಳನ್ನುಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.  

ಅದ್ಭುತ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥಾಪಕರಾದ ಶ್ರೀ ಅಶೋಕ ತುಂಗಳ, ಡಾಽಽ ಲಕ್ಷ್ಮೀ ತುಂಗಳ ಹಾಗೂ ಪ್ರಾಚಾರ್ಯ ಆರ್‌. ಜಿ. ಜಹಾಗೀರದಾರ, ಹಾಗೂ ಎಲ್ಲ ಶಿಕ್ಷಕ ವೃಂದ ಶುಭ ಹಾರೈಸಿದರು.. 


ಸುದ್ದಿ ಓದಿ