ಸಿಂಧಗಿ

48 ಕುರಿಗಳು ವಿಷಪೂರಿತ ನೀರು ಕುಡಿದು ಸಾವನ್ನಪ್ಪಿವೆ

48 ಕುರಿಗಳು ವಿಷಪೂರಿತ ನೀರು ಕುಡಿದು ಸಾವನ್ನಪ್ಪಿವೆ
ಸಿಂದಗಿ: ಕಾಂಗ್ರೆಸ್ ಯುವ ಮುಖಂಡ ಅಶೋಕ ಮನಗೂಳಿ ಅವರು ಬಡ ರೈತ ಬಸಪ್ಪ ಯಲ್ಲಪ್ಪ ಪೂಜಾರಿ ಅವರಿಗೆ ಸಾಂತ್ವಾನ ಹೇಳಿ ಸಹಾಯಧನ

ಸಿಂದಗಿ29:  ವಿಷಪುರಿತ ನೀರನ್ನು ಕುಡಿದು 48 ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಗೊಲಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಗಿಡಕ್ಕೆ ಹೊಡಿಯಲು ಕ್ರಿಮಿನಾಶಕ ಔಷಧ ಕಲಿಸಿ ಇಟ್ಟ ನೀರನ್ನು ಕುರಿಗಳು ಕುಡಿದದ್ದರಿಂದ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕಾಂಗ್ರೆಸ್ ಯುವ ಮುಖಂಡ ಅಶೋಕ ಮನಗೂಳಿ ಅವರು ಕುರಿ ಮಾಲೀಕ ಗ್ರಾಮದ ಬಡ ರೈತ ಬಸಪ್ಪ ಯಲ್ಲಪ್ಪ ಪೂಜಾರಿ ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ. ನಂತರ ಅವರು ವೈಯಕ್ತಿಕವಾಗಿ 25000 ರೂ. ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಣ್ಣ ಸಾಲಿ ಅವರ ಸುಪುತ್ರ ಸಂತೋಷ ಸಾಲಿ ರವರು 25000 ರೂ. ಸಹಾಯಧನ ನೀಡಿದರು.

ರವಿ ಸಾಹುಕಾರ ದೇವರಮನಿ, ಬಸವರಾಜ ಮಾರಲಭಾವಿ, ಬಾಬುಗೌಡ ಸಸಾಬಾಳ, ಶಿವು ಹತ್ತಿ, ಮಹಬೂರಿ ಹಳಿಮನಿ, ಪ್ರಕಾಶ ಬಿರಾದಾರ, ಕುಮಾರ್ ಗೋಂದಳಿ, ಶಿವಯೋಗಿ ಹತ್ತರಕಿ, ಮಡು ನಾಯ್ಕೊಡಿ, ನಿಂಗನಗೌಡ ಬಿರಾದಾರ ಡವಳಾರ, ಶರಣಗೌಡ ಡಂಬಳ, ವಿಶ್ವನಾಥ ಮಠ, ರಾಜು ಹತ್ತರಕಿ, ಪ್ರಭು ವಂದಾಲ, ಶ್ರೀಶೈಲ ಜಾಲವಾದಿ, ರೇವಣಪ್ಪ ಪೂಜಾರಿ, ಅಭು ಶಾಬಾದಿ ಇತರರು ಇದ್ದರು.


ಸುದ್ದಿ ಓದಿ