ಅಥಣಿ

ನಂದೇಶ್ವರ ಗ್ರಾಪಂ ಚುನಾವಣೆಗೆ 11 ಸ್ಥಾನಗಳಿಗೆ 41 ಅಭ್ಯರ್ಥಿಗಳು ನಾಮಪತ್ರ

ನಂದೇಶ್ವರ ಗ್ರಾಪಂ ಚುನಾವಣೆಗೆ 11 ಸ್ಥಾನಗಳಿಗೆ 41 ಅಭ್ಯರ್ಥಿಗಳು ನಾಮಪತ್ರ
ನಂದೇಶ್ವರ ಗ್ರಾಮ ಪಂಚಾಯತ ಚುನಾವಣೆಗೆ ಸ್ಫರ್ಧೆಮಾಡಲು ಆಗಮಿಸುತ್ತಿರುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು.

ಅಥಣಿ19: ಸ್ಥಳೀಯ ಗ್ರಾಮ ಪಂಚಾಯತ 4 ವಾರ್ಡಗಳ 11 ಸ್ಥಾನಗಳಿಗೆ ಇದೆ ತಿಂಗಳು ದಿ.29 ರಂದು ಜರಗುವ ಚುನಾವಣೆಗೆ 21 ಜನ ಪುರುಷರು 20 ಜನ ಮಹಿಳೆಯರು ಸೇರಿದಂತೆ 41 ಜನರು ನಾಮ ಪತ್ರಸಲ್ಲಿಸಿ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಮಾ. 19 ರಂದು ನಾಮ ಪತ್ರ ಸಲ್ಲಿಸುವ ಕೊನೆಯ ದಿನವಾಗಿದ್ದರಿಂದ ತಂಡೋಪ ತಂಡವಾಗಿ ಅಭ್ಯರ್ಥಿಗಳು ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಆಗಮಿಸಿ ನಾಮ ಪತ್ರ ಸಲ್ಲಿಸಿದರು.  ಮಾ.22 ರಂಂದು ನಾಮಪತ್ರ ವಾಪಸ್ಸು ಪಡೆಯುವ ದಿನವಾಗಿದ್ದು ನಂತರ ಎಷ್ಟು ಜನ ಚುನಾವಣಾ ಕಣದಲ್ಲಿ ಉಳಿಯುತ್ತಾರೆಯೋ ಕಾದುನೋಡಬಾಕಿದೆ. 

ಅವಿರೋಧ ಆಯ್ಕೆ ಮಾಡಲು ಹಿರಿಯರ ಕಸರತ್ತು 

ಗ್ರಾಮದ ಅಭಿವೃದ್ಧಿಯ ಹಿತ ದೃಷ್ಠಿಯಿಂದ ಗ್ರಾಮದ ಹಿರಿಯರು ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಯೋಚನೆಯಲ್ಲಿದ್ದಾರೆ. ಬೇಸಿಗೆಯ ಬಿಸಿಲಿನ ತಾಪದಿಂದ ಮುಕ್ತಿಪಡೆಯಲು,  ಆರ್ಥಿಕ ವ್ಯಯವಾಗದಂತೆ ತಡೆಯಲು, ಜನರ ಬಾಂಧವ್ಯದ ಹಿತ ದೃಷ್ಟಿಯಿಂದ ಅವಿರೋಧ ಆಯ್ಕೆಯಾದರೆ ಒಳ್ಳೆಯದು ಎಂದು ಹಿರಿಯರು ಹಗಲಿರುಳು ಚರ್ಚೆಯಲ್ಲಿ ತೋಡಗಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಫರ್ಧೆ ಮಾಡಲು ನಾಮ ಪತ್ರ ಸಲ್ಲಿಸಿದ್ದಾರೆ  ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ಅಸಾಧ್ಯವಾಗಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ರುದ್ರೇಶ ನಿಲೋಗಿ, ಪಿ.ಡಿ.ಒ ಸಿ.ಎಲ್.ಶಿರಗಾರ. ಗ್ರಾ.ಪಂ. ಸಿಬ್ಬಂದಿ ಮುರಗಯ್ಯ ಹಿರೇಮಠ, ಮಲ್ಲಿಕಾರ್ಜುನ ಯಲ್ಲಟ್ಟಿ ಇದ್ದರು.

" ಗ್ರಾಮದ ಅಭಿವೃದ್ಧಿ ಹಿತ ದೃಷ್ಠಿಯಿಂದ ಇದೇ ತಿಂಗಳು ದಿ.29ರಂದು ಜರಗುವ ಚುನಾವಣೆಯಲ್ಲಿ ಗ್ರಾಮದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆದರೆ ಒಳ್ಳೆಯದು ಇದು ಇತಿಹಾಸವನ್ನೆ ನಿರ್ಮಾಣ ಮಾಡಲಿದೆ.  ಗ್ರಾಮದ ಹಿರಿಯರು ಅವಿರೋಧ ಆಯ್ಕೆಯ ಕುರಿತು ಯೋಚಿಸುತ್ತಿದ್ದೇವೆ ಕೆಲವು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ." 

-ರಮೇಶಗೌಡ  ಪಾಟೀಲ. 

ಗ್ರಾಮದ ಹಿರಿಯ ಮುಖಂಡ ನಂದೇಶ್ವರ


ಸುದ್ದಿ ಓದಿ