34 ನೇ ಗುರುವಂದನಾ ಕಾರ್ಯಕ್ರಮ
ಬಳ್ಳಾರಿ 01: ಪರಮಪೂಜ್ಯ ಶ್ರೀ ಷಡಾಕ್ಷರಿ ಶೀವಯೋಗಿ ಡಾ|| ಮುರುಗರಾಜೇಂದ್ರ ಸ್ವಾಮಿಗಳ 34ನೇ ಗುರುವಂದನಾ ಮಹೋತ್ಸವ ನಿಮಿತ್ಯ ಡಿವೈನ್ ಚಾರ್ಟಟೆಬಲ್ಟ್ರಷ್ಟ್ವತಿಯಿಂದ ಶುಕ್ರವಾರ ನಗರದ ಕಪಗಲ್ಲು ರಸ್ತೆಯಲ್ಲಿರುವ ವೀರಭ್ರಮ್ಮಯ್ಯ ಮಠದ ಆವರಣದಲ್ಲಿ ಆಯೋಜಿಸಿದ್ದ 34ನೇ ಗುರುವಂದನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾರಾ ಪ್ರತಾಪರೆಡ್ಡಿ, ಮಾಜಿ ಬುಡಾ ಅಧ್ಯಕ್ಷರು, ಕಮಚರ್ೆಡು ಮಠದ ಕಲ್ಯಾಣಸ್ವಾಮಿಗಳು, ಉದ್ಘಾಟನೆ ಮತ್ತು ಪರಿಸರ ಕುರಿತು ಮಾಹಿತಿ ನೀಡಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಂಜುನಾಥ ಭಾಗವಹಸಿದ್ದರು. ನಂತರ ಉದ್ಘಾಟನೆಯನ್ನು ನೆರೆವೇರಿಸಿ ಮಾತನಾಡಿದ ಕಲ್ಯಾಣಸ್ವಾಮಿಗಳು ಹಿಂದಿನ ಕಾಲದಲ್ಲಿ ಜನರು ಶತಾಯುಷಿಗಳಾಗಿದ್ದರು. ನಿರೋಗಿಗಳಾಗಿದ್ದರು. ಸದೃಡರಾಗಿದ್ದರು. ಸ್ವಯಂ ಶೀಲಾಗಿರದ್ದರು. ಇದಕ್ಕೆಲ್ಲಕ್ಕೂ ಕಾರಣ ಅವರು ಸೇವಿಸುತ್ತಿದ್ದ ಪರಿಶುದ್ದವಾದ ಪ್ರಾಣವಾಯು, ಹಣ್ಣು ಹಂಪಲು, ತರಕಾರಿಗಳೇ ಕಾರಣ ಇದೆಲ್ಲದಕ್ಕೂ ಮೂಲ ಸಸ್ಯೆ ಸಂಪತ್ತು. ಇಂದಿನ ಎಲ್ಲಾ ಅವಘಡಗಳಿಗೆ ಪ್ರಕೃತಿ ವಿಕೋಪಕ್ಕೆ ಅರಣ್ಯ ನಾಶವೇ ಕಾರಣವಾಗಿದೆ. ಆದ ಕಾರಣ ಸಸಿಗಳ್ನು ನೆಡುವುದು ಒಂದು ಒಳ್ಳೆಯ ಕೆಲಸ. ಆದರೆ ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯವನ್ನು ಮಾಡಿದರೇ ಮಾತ್ರ ಸಸಿ ನೆಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಮಾನವನು ನೀರಿಲ್ಲದೇ ಊಟ ವಿಲ್ಲದೇ ಕೆಲದಿನ ಬದುಕಬಹುದು. ಆದರೆ ಪ್ರಾಣವಾಯು ಇಲ್ಲದೇ ಕೆಲಕ್ಷಣ ಬದುಕಲಾರರು. ಹಿಡೀ ಜೀವಕೋಟಿಯ ಜೀವಾದಾರ ಈ ಸಸಿಗಳು ನಮ್ಮ ಪ್ರಾಣ ರಕ್ಷಿಸುವದಲ್ಲದೇ ನೆರಳು, ಹಣ್ಣು, ಹಂಪಲು, ಔಷದಿಯ ಎಲೆ ಕಾಂಡಗಳು ಮರ ಔಷದಿಗಳನ್ನು ನೀಡುತ್ತವೆ. ಪರೋಪಕಾರಿ ಜೀವನದ ಪರಮ ಸತ್ಯವನ್ನು ಹೇಳುವ ಪರಮ ಗುರುಗಳಾಗಿವೆ ಎಂದು ಸಸ್ಯೆ ಸಂಪತ್ತಿನ ಮಹತ್ವವನ್ನು ಕೊಂಡಾಡಿದರು. ಈ ಕಾರ್ಯಕ್ರಮದಲ್ಲಿ ಕನರ್ಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಂಜುನಾಥ ಅವರು ಪರಿಸರದ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಿದರು. ಜನ್ಮದಿನದ ಅಂಗವಾಗಿ ಸುಮಾರು 200 ಸಸಿಗಳನ್ನು ಕಾಲಜ್ಞಾನಿ ವೀರಭ್ರವ್ಮ್ಮೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಸಸಿ ನಡೆಉವ ಮೂಲಕ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸಸಿ ನೀಡುವ ಮೂಲಕ 200 ಸಸಿಗಳಿಗೂ ಹೆಚ್ಚು ವಿತರಣೆ ಮಾಡಿದರು. ಈ ಕಾರ್ಯಕ್ರಮದ ಸಂಚಾಲಕರಾದ ಬಿ.ಎಂ.ಯರಿಸ್ವಾಮಿ ಅವರ ಸಹಯೋಗದಲ್ಲಿ ಮಠದ ಭಕ್ತಾದಿಗಳಾದ 21ನೇ ವಾಡರ್ಿನ ಬಿಜೆಪಿ ಮುಖಂಡ ಕೆ.ಹನುಮಂತಪ್ಪ, ರುದ್ರಗೌಡ, ಹನುಮಂತರೆಡ್ಡಿ, ಮುಗುಲಖೋಡು ಜಡಗಾಮಠದ ಭಕ್ತವೃಂದದವರು ಯು.ಚಂದ್ರಣ್ಣ, ಗಾದಿಲಿಂಗಗೌಡ, ಬಿ.ನಾಗರಾಜಗೌಡ, ಯು.ಗಂಗಣ್ಣ. ಗಂಗಿರೆಡ್ಡಿ, ಮತ್ತು ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ನೂರಾರು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.