ಜಮಖಂಡಿ

ಮೃತರ ಕುಟುಂಬಕ್ಕೆ 1 ಲಕ್ಷ ಗಾಯಾಳುಗಳಿಗೆ 25 ಸಾವಿರ ರೂ. ಪರಿಹಾರ

ಮೃತರ ಕುಟುಂಬಕ್ಕೆ 1 ಲಕ್ಷ ಗಾಯಾಳುಗಳಿಗೆ 25 ಸಾವಿರ ರೂ. ಪರಿಹಾರ

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಘೋಷಣೆ 

ಜಮಖಂಡಿ 31: ತಾಲೂಕಿನ ಆಲಗೂರ ಗ್ರಾಮದಲ್ಲಿ ನಡೆದ ಶಾಲಾ ವಾಹನ  ಅಪಘಾತದಲ್ಲಿ ನಾಲ್ಕು ಮಕ್ಕಳು ಮೃತರಾಗಿದ್ದು. ಅದರ ಜೊತೆಗೆ ಇನ್ನೂ ಅನೇಕ ಮಕ್ಕಳು ಗಾಯಾಳುಗಳಾಗಿದ್ದಾರೆ. ಅವರಿಗೆ ವೈಯಕ್ತಕವಾಗಿ ಮೃತರ ಕುಟುಂಬಕ್ಕೆ 1 ಲಕ್ಷ ಗಾಯಾಳುಗಳಿಗೆ 25 ಸಾವಿರ ರೂ,ಗಳನ್ನು ಪರಿಹಾರ ನೀಡುತ್ತೇನೆಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. 

ನಗರದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ಜರುಗಬಾರದು ಇದರ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು. ಟ್ರಾಕ್ಟರದಲ್ಲಿ ಅತಿಯಾದ ಸೌಂಡ ಇರಬಾರದೆಂದು ಬೆಳಗಾವಿಯಲ್ಲಿ ಪೋಲಿಸ ಇಲಾಖೆಗೆ ತಿಳಿಸಿದ್ದೇವೆ. ಅದೇ ರೀತಿಯಾಗಿ ಇಲ್ಲಿಯೂ ಸಹ ಆಗಬೇಕಾಗಿದೆ. ಇಲ್ಲಿನ ಡಿಎಸ್‌ಪಿ, ಎಸಿ, ಮುತುವರ್ಜಿ ವಹಿಸಿ ಚಾಲಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. 

ಆರ್‌ಟಿಓ ಇಲಾಖೆ ಪ್ರತಿ ಟ್ರಾಕ್ಟರ ಹಿಂದೆ ರಿಫ್ಲೆಕ್ಟರ ಅಳವಡಿಕೆಯಾಗುವಂತೆ ಕ್ರಮ ಜರುಗಿಸಿಬೇಕು.  ಬೆಳಗಾವಿ ಜಿಲ್ಲೆಯಲ್ಲಿ ತಡರಾತ್ರಿಯಾದಂತೆ ಲಾರಿಗಳ ಸಂಚಾರಕ್ಕೆ ನಿಷೇಧ ಮಾಡಿದ್ದು. ಬೆಳಗಿನ ಜಾವದಲ್ಲಿ ಸಂಚಾರವನ್ನು ಪ್ರಾರಂಬಿಸಿದ್ದೆವು ಅದರಂತೆ  ಜಮಖಂಡಿಯಲ್ಲಿ ಮಾಡಬೇಕಾಗಿದ್ದು  ಅಧಿಕಾರಿಗಳ ಕರ್ತವ್ಯವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದಿದೆ. ಓಇಎಸ್‌ದಿಂದ ಎನ್‌.ಪಿ.ಎಸ್ ಬದಲಾವಣೆಯ ಕ್ರೀಯೆ ನಡೆದಿದೆ. ಬೆಳಗಾವಿ ಚಿಕ್ಕೋಡಿ, ವಿಜಯಪುರ, ಬಾಗಲಕೋಟ ಈ ನಾಲ್ಕು ಶೈಕ್ಷಣಿಕ ಜಿಲ್ಲೆಗೆ 12 ಕೋಟಿ ರೂ, ಅನುದಾನ ನೀಡಿದ್ದೇವೆ. ಅತಿಥಿ ಶಿಕ್ಷಕರ ಸಮಸ್ಯೆಯನ್ನು ಅರಿತು ಮೊದಲಿದ್ದ 10 ಸಾವಿರ ರೂ,ಗಳ ಸಂಬಳದ ಬದಲಾಗಿ ಇವಾಗ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದರು. 

ಮಾಜಿ ಶಾಸಕ ಅನಂದ ನ್ಯಾಮಗೌಡ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿಯವರು ಆಲಗೂರ ಗ್ರಾಮದ ಬಳಿ ನಡೆದ ಘಟನೆಗೆ ತಮ್ಮ ವೈಯಕ್ತಿಕ ಹಣದಿಂದ ಸಹಾಯ ನೀಡಿದ್ದಾರೆ. ಮೃತರ ಕುಟುಂಬಕ್ಕೆ 1 ಲಕ್ಷ ಗಾಯಾಳುಗಳಿಗೆ 25 ಸಾವಿರ ರೂ,ಸಹಾಯಧನ ನೀಡಿದಾರೆ ಎಂದು ತಿಳಿಸಿದರು. 

 ಎಸಿ, ಸಂತೋಷ ಕಾಮಗೊಂಡ, ತಹಶಿಲ್ದಾರ  ಸದಾಶಿವ ಮಕ್ಕೋಜಿ, ಜಿಲ್ಲಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ದಾನೇಶ ಘಾಟಗೆ, ರವಿ ಯಡಹಳ್ಳಿ, ಈಶ್ವರ ವಾಳೆಣ್ಣವರ, ದಿಲಾವರ ಶಿರೋಳ, ಅರುಣಕುಮಾರ ಶಹಾ, ಅನ್ವರ ಮೋಮಿನ ಸೇರಿದಂತೆ ಅನೇಕ ಮುಖಂಡರು ಇದ್ದರು. 


ಸುದ್ದಿ ಓದಿ