ಜಮಖಂಡಿ

ಆಡಳಿತ ನ್ಯಾಯಾಧೀಕರಣದಲ್ಲಿ 2 ವರ್ಷಗಳ ವೃತ್ತಿ ತರಬೇತಿ

ಆಡಳಿತ ನ್ಯಾಯಾಧೀಕರಣದಲ್ಲಿ 2 ವರ್ಷಗಳ ವೃತ್ತಿ ತರಬೇತಿ

ಜಮಖಂಡಿ 22: 2024-25 ನೇ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾನೂನು ಪದವಿಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ 2 ವರ್ಷಗಳ ವೃತ್ತಿ ತರಬೇತಿಯನ್ನು ನೀಡಲಾಗುವದು. ಕಾನೂನು ಪದವಿ ತೇರ್ಗಡೆಯಾದ ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಇಲಾಖೆ ವೆಬ್‌ಸೈಟ್ (www.sw.kar.nic.in) ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇಲಾಖೆ  ವೆಬ್‌ಸೈಟ್ (www.twd.karnataka.gov.in)  ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು, ಕಾನೂನು ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಜಮಖಂಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಡ್ಡದೇವರಮಠ ಪ್ರಕಟನೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ