ಸಿದ್ಧೇಶ್ವರ ಶ್ರೀಗಳು ಒಳಗೂ ಹೊರಗೂ ನಿರಾಳರಾಗಿದ್ದರು: ಕಡ್ಡಿ
ಜಮಖಂಡಿ 19: ಚಿತ್ತದಲ್ಲಿ ನಿರಪೇಕ್ಷ, ಬಯಕೆಯಲ್ಲಿ ನಿರಾಭಾರಿ, ಪ್ರಾಣದಲ್ಲಿ ನಿರ್ಭಯ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದರಾಗಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಒಳಗೂ ಮತ್ತು ಹೊರಗೂ ನಿರಾಳರಾಗಿದ್ದರು ಎಂದು ಸಾಹಿತಿ ಪ್ರೊ.ಬಸವರಾಜ ಕಡ್ಡಿ ಹೇಳಿದರು.
ಸಾಹಿತ್ಯ ಸೌರಭ ವೇದಿಕೆ ಹಾಗೂ ಸಾನಿಯಾ ಪ್ರಕಾಶನ ಧನ್ನೂರ ಇವುಗಳ ಆಶ್ರಯದಲ್ಲಿ ನಗರದ ಕುಂಚನೂರ ರಸ್ತೆ ಪಕ್ಕದ ಡಾಲರ್ಸ್ ಕಾಲೊನಿಯ ಕಲ್ಪವೃಕ್ಷ ನಿಲಯದ ಆವರಣದಲ್ಲಿ ಆಯೋಜಿಸಿದ್ದ ಶ್ರೀಗಳ ಪ್ರಥಮ ಪುಣ್ಯ ಸ್ಮರಣೋತ್ಸವ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಶ್ರೀಗಳು ಬರೆದಿದ್ದ ಅಂತಿಮ ಅಭಿವಂದನಾ ಪತ್ರದಲ್ಲಿ ಗದ್ದುಗೆ ಅಥವಾ ಸ್ಮಾರಕ ನಿರ್ಮಿಸದೆ ತಮ್ಮ ದೇಹವನ್ನು ಅಗ್ನಿಗೆ ಅರ್ಪಿಸಿ ನಿಸರ್ಗದಲ್ಲಿ ತಮ್ಮನ್ನು ಕಾಣಬೇಕೆಂಬ ಬದುಕಿನ ಪರಮೋಚ್ಛ ಸಂದೇಶವನ್ನು ನೀಡಿದ್ದರು ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಅಧ್ಯಕ್ಷತೆ ವಹಿಸಿ ಹಾಗೂ ಶತಮಾನದ ಸಂತ ಕೃತಿಯನ್ನು ಲೋಕಾರೆ್ಣ ಮಾಡಿ ಮಾತನಾಡಿ, ಲೋಕಕ್ಕೆ ಒಬ್ಬರೇ ಸಿದ್ಧೇಶ್ವರ ಶ್ರೀಗಳು. ಅವರ ಬದುಕೇ ಒಂದು ಮಹಾಕಾವ್ಯ. ಅವರ ಬಣ್ಣನೆಗೆ ಶಬ್ದಗಳ ಕೊರತೆಯಾಗುತ್ತದೆ ಎಂದರು.
ಸಾಹಿತ್ಯ ಸೌರಭ ವೇದಿಕೆಯ ಸಂಚಾಲಕ ಆರ್.ಕೆ. ಹೊಸಟ್ಟಿ ಇದ್ದರು. ಬಾಹುಬಲಿ ಬಿರಾದಾರಪಾಟೀಲ, ಎಂ.ಡಿ.ಸಂಖ, ಜೆ.ಡಿ.ಧನ್ನೂರ, ವಿಮಲಾ ಕುಬಕಡ್ಡಿ, ನಾರಾಯಣ ಶಾಸ್ತ್ರೀ ಕವಿನಮನ, ನುಡಿನಮನ ಸಲ್ಲಿಸಿದರು.
ಜೆ.ಡಿ. ಧನ್ನೂರ ಹಾಗೂ ರಂಗನಾಥ ಅಂಬಿಗೇರ ಅವರು ಸಂಪಾದಿಸಿದ ಹಾಗೂ ಸಾನಿಯಾ ಪ್ರಕಾಶನ ಹೊರತಂದ ಶತಮಾನದ ಸಂತ ಕೃತಿಯನ್ನು ಲೋಕಾರೆ್ಣ ಮಾಡಲಾಯಿತು. ಸಿದ್ಧೇಶ್ವರ ಶ್ರೀಗಳ ಕುರಿತು 111 ಕವಿಗಳು ರಚಿಸಿರುವ 111 ಕವನಗಳು ಕೃತಿಯಲ್ಲಿವೆ. ಡಿ.ವಿ. ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ರಮೇಶ ದಾನಗೌಡ ಸ್ವಾಗತಿಸಿದರು. ರಮೇಶ ದೇಸಾಯಿ ನಿರೂಪಿಸಿದರು. ವಿನೋದ ಬಿರಾದಾರ ವಂದಿಸಿದರು.