ಬ್ಯಾಂಕ್ ಗ್ರಾಹಕರಿಗೆ ಶೇ. 15 ಡಿವಿಡೆಂಡ್, ಸಿಬ್ಬಂದಿಗೆ ಬೋನಸ್ ವಿತರಣೆ
ಲೋಕದರ್ಶನ ವರದಿ
ಯರಗಟ್ಟಿ 31: ಈ ವರ್ಷ ನಮ್ಮ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ 8,14583 ಲಕ್ಷ ಲಾಭ ಗಳಿಸಿ ಅಭಿವೃದ್ಧಿ ಪಥದತ್ತ ದಾಪುಗಾಲಿಟ್ಟಿದೆ ಎಂದು ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಬ್ಯಾಂಕ್ ಸಂಸ್ಥಾಪಕ ಅಭಿನವ ಸಿದ್ರಾಯಜ್ಜನವರು ಹೇಳಿದರು.
ಅವರು ಪಟ್ಟಣದ ಸಂಘದ ಕಛೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬ್ಯಾಂಕ ಗ್ರಾಹಕರಿಗೆ ಶೇ. 15 ಡಿವಿಡೆಂಡ್ ಹಾಗೂ ಬ್ಯಾಂಕ ಸಿಬ್ಬಂದಿಗೆ ಬೋನಸ್ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿದರು.
ಬ್ಯಾಂಕ್ ಅಧ್ಯಕ್ಷ ಪವಿತ್ರಾ ಪೂಜೇರ ಮಾತನಾಡಿ ಮುಂಬರುವ ದಿನಗಳಲ್ಲಿ ಸಾಲ ಪ್ರಮಾಣ ಹೆಚ್ಚಿಸಿ ಗ್ರಾಹಕರ ಬಲವರ್ಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಗ್ರಾಹಕರ ಹಣ ಪಡೆಯಲು ಮತ್ತು ತುಂಬಲು ಬ್ಯಾಂಕ್ಗೆ ಬರುವ ತಾಪತ್ರಯ ತಪ್ಪಿಸುವ ಉದ್ದೇಶದಿಂದ ಕೆಲವೇ ದಿನಗಳಲ್ಲಿ ಮೊಬೈಲ್ ಬ್ಯಾಂಕ್ ಸೇವೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆ ಗ್ರಾಹಕ ಮಿತ್ರರು ಸಹಕರಿಸಬೇಕು ಎಂದು ಕೋರಿದರು.
ಬ್ಯಾಂಕಿನ ಆಡಳಿತ ಮಂಡಳಿ ಗ್ರಾಹಕಸ್ನೇಹಿಯಾಗಿ ಕೆಲಸ ಮಾಡಬೇಕು. ಕೋವಿಡ್ ಸಂಕಷ್ಟ ದಲ್ಲಿರುವ ರೈತರ ಕಣ್ಣೀರೊರೆಸುವ ಕೆಲಸ ಮಾಡುವ ಮೂಲಕ ಈ ಭಾಗದ ಗ್ರಾಹಕರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತಿಪ್ಪಣ್ಣಾ ಸಿಂಗಾರಗೋಪ್ಪ, ಕೃಷ್ಣರಾವ ಸಾವಳಕರ, ಮಹಾಂತೇಶ ಯಕ್ಕುಂಡಿ, ಶ್ರೀಶೈಲ ಸಿಂಗಾರಗೊಪ್ಪ, ದುಂಡಪ್ಪ ತಾಳಸಂಗಿ ಬ್ಯಾಂಕ್ನ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದರು ಮತ್ತು ಬ್ಯಾಂಕ್ನ ಗ್ರಾಹಕರು ಉಪಸ್ಥಿತರಿದ್ದರು.