ಚಿಕ್ಕಲಕಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ 1.50 ರೂ. 307ಗ್ರಾಂ ಚಿನ್ನ ವಶ
ಲೋಕದರ್ಶನ ವರದಿ
ಜಮಖಂಡಿ 09: ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಬೀಗಿ ಭದ್ರತೆಯಿಂದ ಚೆಕ್ ಪೋಸ್ಟ್ಗಳನ್ನು ತೆರೆಯಾಲಾಗಿದ್ದು. ತಾಲೂಕಿನ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ಹದ್ದಿ ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ತಾಲೂಕಿನ ಚಿಕ್ಕಲಕಿ ಕ್ರಾಸ್ನಲ್ಲಿ ಸ್ಥಾಪಿಸಲಾದ ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆಯನ್ನು ಮಾಡುವ ಸಮಯದಲ್ಲಿ ಕಾರಿನಲ್ಲಿ ಇದ್ದ 1,50,800 ರೂ,ಗಳು ಹಾಗೂ 307 ಗ್ರಾಂ, ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಮಖಂಡಿ ಕಡೆಗೆ ಬರುತ್ತಿರುವ ಕಾರಿನಲ್ಲಿ 1 ಲಕ್ಷ,50 ಸಾವಿರದ 8 ನೂರು ರೂ,ಗಳು ನಗದು ಮತ್ತು 307 ಗ್ರಾಂ, ಬಂಗಾರ ದೊರಕಿದ್ದು. ಯಾವುದಕ್ಕು ದಾಖಲೆಗಳು ಇಲ್ಲದ ಕಾರಣ ಎಲ್ಲವನ್ನು ಸೀಜ್ ಮಾಡಲಾಗಿದೆ ಎಂದು ಸಿಪಿಐ ಗುರುನಾಥ ಚವ್ಹಾಣ ತಿಳಿದ್ದಾರೆ.
ಸಾವಳಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಗದು ಮತ್ತು ಬಂಗಾರವನ್ನು ವಶಕ್ಕೆ ಪಡೆದುಕೊಂಡು ಸೀಜ್ ಮಾಡಲಾಗಿದ್ದು. ತಾಲೂಕಿನಲ್ಲಿ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಹುಲ್ಯಾಳ ಕ್ರಾಸ್ ಚೆಕ್ಪೋಸ್ಟ್, ಹುನ್ನೂರ ಚೆಕ್ಪೋಸ್ಟ್ ಮತ್ತು ಚಿಕ್ಕಲಕಿ ಕ್ರಾಸ್ ಚೆಕ್ಪೋಸ್ಟ್ ಹೀಗೆ ಎಲ್ಲ ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ನಮ್ಮ ಸಿಬ್ಬಂದಿಗಳು ರಾತ್ರಿ, ಹಗಲು ಕಾರ್ಯನಿರ್ವಹಿಸುತ್ತಿದ್ದಾರೆಂದು ಸಿಪಿಐ ಗುರುನಾಥ ಚವ್ಹಾಣ ತಿಳಿಸಿದ್ದರು.