ಬಸ್ ನಿಲ್ದಾಣ ಕಟ್ಟಡ ನಿಮರ್ಿಸಲು ಆಗ್ರಹಿಸಿ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬಸ್ ನಿಲ್ದಾಣ ಕಟ್ಟಡ ನಿಮರ್ಿಸಲು ಆಗ್ರಹಿಸಿ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ 12:ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿ ಇರುವ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಸಂಬಂಧಸಿದ ಖಾಲಿಸ್ಥಳ ಹಾಗೂ ಶ್ರಿ ಕನಕದುರ್ಗಮ್ಮ ದೇವಸ್ಥಾನದ ಬಳಿ ಇರುವ ಕೇಂದ್ರ ಕಾರ್ಯಗೃಹಕ್ಕೆ ಸಂಬಂಧಿಸಿದ ಹಾಳು ಬಿದ್ದ ಸಿಬ್ಬಂದಿ ವಸತಿಗೃಹಗದ ಸ್ಥಳವನ್ನು ಸಾರಿಗೆ ಬಸ್ ನಿಲ್ದಾಣ ಕಟ್ಟಡಕ್ಕೆ ನೀಡಬೇಕು ಎಂದು ಒತ್ತಾಯಿಸಿ ಯುವಸೇನೆ ಸೋಷಿಯಲ್ ಆಕ್ಷನ್ ಕ್ಲಬ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಗರದಲ್ಲಿ ಸಾರ್ವಜನಿಕರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೆೇಶಗಳಿಗೆ ಹೋಗಬೇಕಾದರೆ ಖಾಸಗಿ ವಾಹನಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆಗುತ್ತಿರುವ ನಷ್ಟವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಮೇಳಿನ ಎರಡು ಪ್ರದೇಶಗಳಲ್ಲಿನ ಜಾಗವನ್ನು ಸಾರಿಗೆ ಸಂಸ್ಥೆಗೆ ನೀಡಿ ಅದರಿಂದಲೇ ಅತ್ಯಧುನಿಕ ಹಾಗೂ ಆಕರ್ಷಕವಾಗಿರುವಂತಹ ಬಸ್ ನಿಲ್ದಾಣವನ್ನು ನಿಮರ್ಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೇ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಸುತ್ತು ಗೋಡೆ ನಿಮರ್ಿಸಿರುವುದರಿಂದ ಬಸ್ ನಿಲುಗಡೆಗೆ ವ್ಯೆವಸ್ಥೆ ಇಲ್ಲ. ಈ ಹಿನ್ನಲೆಯಲ್ಲಿ ಪಕ್ಕದಲ್ಲಿರುವ ಕಾರ್ಯಗೃಹಕ್ಕೆ ಸಂಬಂಧಿಸಿದ ಸಿಬ್ಬಂದಿ ನಿವಾಸಿಗಳ ಸ್ಥಳವನ್ನು ನಿಲ್ದಾಣ ಕಟ್ಟಡ ಮಆಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಯುವಸೇನೆ ಸೋಷಿಯಲ್ ಆಕ್ಷನ್ ಕ್ಲಬ್ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದರು.

ಸುದ್ದಿ ಓದಿ