'ನೀನು ಒಂಟಿಯಲ್ಲಾಪುಸ್ತಕ ಬಿಡುಗಡೆ ಕಾರ್ಯಕ್ರಮ
ಲೋಕದರ್ಶನ ವರದಿ
ಬಳ್ಳಾರಿ 10: ನಾಗೇನಹಳ್ಳಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲದ ಮನೋವೈಧ್ಯರಾದ ಡಾ|| ವಿರೂಪಾಕ್ಷ ದೇವರಮನೆಯವರು ರಚಿಸಿದ "ನೀನು ಒಂಟಿಯಲ್ಲಾ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.
ಈ ಪುಸ್ತಕದ ಸಾರಾಂಶವನ್ನು ಹೇಳುತ್ತಾ, ಮಧ್ಯ ವೆಸನಿಗಳ ಜೊತೆಯಲ್ಲಿ ಬದುಕುತ್ತಿರುವ ಮಕ್ಕಳಗೆ ಜೊತೆಗೆ ಒತ್ತಡ, ಮನೆಯ ವಾತಾವರಣ ಚೆನ್ನಾಗಿರದ ಕಾರಣ ಮಕ್ಕಳಿಗೆ ಪರಿಚಯವಿರುವಂತವರು, ಸಮಾಜ ವರ್ಗದವರು, ಸಹಾಯ ನೀಡಬೇಕು, ಅವಕಾಶಕೊಡಬೇಕು. ಈ ಕಾಯಿಲೆಗೆ ನೀನು ಯಾವುದೇ ರೀತಿಯ ಕಾರಣನಲ್ಲ ಎಂದು ತಿಳಿಸಿ ಮನವೊಲಿಸಬೇಕು.
ಮಧ್ಯವೆಸನಿಗಳ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿರುತ್ತೇವೆ ಅದರಲ್ಲಿ ಟಿ.ವಿ., ರೇಡಿಯೊಗಳಲ್ಲಿ, ಜಾಗೃತಿ ಮೂಡಿಸಲು, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಉಡುಪಿಯಲ್ಲಿ ಕಾರ್ಯನಿರ್ವಹಿಸಿದ್ದು ಅಲ್ಲಿ ಸಹ ಕಾರ್ಯಕ್ರಮ ಜರುಗುತ್ತಿವೆ. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹೊಸಪೇಟೆ ಮತ್ತು ಇತರೆ ಸ್ಥಳಗಳಲ್ಲಿ ಮಕ್ಕಳಿಗೆ ವಿಷಯವನ್ನು ತಿಳಿಸುತ್ತಾ ನೀನು ಎಂದು ಒಂಟಿಯಲ್ಲ ಎಂದು ಮಾನಸಿಕವಾಗಿ ಜಾಗೃತಿ ಮೂಡಿಸಿ ಅವರನ್ನು ಮಧ್ಯವೆಸನದಿಂದ ದೂರ ತರುವ ಮತ್ತು ಸಮಾಜದಲ್ಲಿ ಚೆನ್ನಾಗಿ ಬದುಕುವಹಾಗೆ ನಡೆಸಿಕೊಡುವ ಕಾರ್ಯಕ್ರಮವಾಗಿದೆ. ಫೆಬ್ರವರಿ 10 ರಿಂದ 16ರವರೆಗೆ ದೇಶಾದ್ಯಂತ ಮಧ್ಯವೆಸನಿಗಳ ಮಕ್ಕಳ ಜಾಗೃತಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ರಾಜ್ಯದಲ್ಲಾಗಲಿ ವಿಶ್ವವಿದ್ಯಾಲಯ ಮಟ್ಟದಲ್ಲಾಗಲೀ, ಇನ್ನೂ ಪ್ರೋತ್ಸಾಹ ಸಿಕ್ಕಿರುವುದಿಲ್ಲ. ಆದರೆ ಇಂತಹ ಕಾರ್ಯಕ್ರಮಗಳನ್ನು ಹಳ್ಳಿಗಳಿಂದಲೇ ಪ್ರಾರಂಭಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುನಿರಾಬಾದ್ ಪಶುವೈದ್ಯಾಧಿಕಾರಿಗಳು ಡಾ||ಜೆ.ಎಸ್.ಅಶ್ವತ್ ಕುಮಾರ್, ಮಾತನಾಡಿ ಮಧ್ಯಸೇವನೆಯಿಂದ ಮಕ್ಕಳ ಮೇಲಾಗುವ ಪ್ರಭಾವವನ್ನು ಮನ ಮುಟ್ಟುವಂತೆ ಚಚರ್ಿಸಿದರು. ಅಲ್ಲದೇ ತಮಗಾದ ಅನುಭವವನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಸಖಿ ಸಂಸ್ಥೆಯ ನಿದರ್ೇಶಕರಾದ ಡಾ|| ಬಾಗ್ಯಲಕ್ಷ್ಮೀ, ಮಾನಸ ವಿದ್ಯಾಸಂಸ್ಥೆ ಅಧ್ಯಕ್ಷರಾದ ಟಿ.ಆರ್.ರಾಮಣ್ಣ, ಬೆಳಗಾವಿಯ ಕೃಷಿತಾಂತ್ರಿಕ ಅಧಿಕಾರಿಗಳಾದ ಡಾ||ಮನೋಹರ್ ಗೌಡ, ಹಾಗೂ ಎಸ್.ಡಿ.ಎಂ.ಸಿ. ಸದಸ್ಯರಾದ ವೈ.ಗಂಗಾಧರ ಮತ್ತು ಇನ್ನಿತರರು ಉಪಸ್ಥಿತರಿದ್ದರು, ಮಾರ್ಕಂಡೇಶ್ವರ ಶಾಲೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಊರಿನ ಗಣ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿ ಸೇವಾ ಟ್ರಸ್ಟ್ (ರಿ) ಸಂಘಸಂಸ್ಥೆಗಳ ಪದಾಧಿಕಾರಿಗಳು ಡಾ|| ವಿರುಪಾಕ್ಷ ದೇವರಮನೆ ಇವರನ್ನು ಸನ್ಮಾನಿಸಿದರು.