ವಿಶ್ವ ಛಾಯಾಗ್ರಹಣ ದಿನಾಚರಣೆ
ಲೋಕದರ್ಶನ ವರದಿ
ಜಮಖಂಡಿ : 22: ಜಗತ್ತಿನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆ ಯಾವುದಾದರೂ ಇದ್ದರೆ ಅದು ಛಾಯಾಗ್ರಹಣ ಭಾಷೆ ಎಂದು ಬಿಈಓ ಅಶೋಕ ಬಸನ್ನವರ ಹೇಳಿದರು.
ನಗರದ ಸರ್ವೋದಯ ಕಿವುಡ ಮತ್ತು ಮೂಕರ ಶಾಲೆ ಅವರಣದಲ್ಲಿ ನಡೆದ ತಾಲೂಕ ಛಾಯಾಚಿತ್ರ ಗ್ರಾಹಕರ ಸಂಘದಿಂದ 184 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಛಾಯಾಗ್ರಹಣಕ್ಕೆ ಭಾಷೆಯ ಅವಶ್ಯಕತೆ ಇಲ್ಲ. ಭಾವನೆ ಮೂಲಕ ಮಗುವಿನಿಂದ ವೃದ್ಧರವರೆಗೂ ಅರ್ಥವಾಗುತ್ತದೆ. ಛಾಯಾಗ್ರಹಣ ಜಾಗತಿಕ ಭಾಷೆ ಇದು ಅಳಿಸಿ ಹೋಗುವಂತದ್ದಲ್ಲ. ಬರವಣಿಗೆ, ಮಾತು ಮರೆತು ಹೋಗಬೇಕು ಆದರೆ ಛಾಯಾಗ್ರಹಣ ಶಾಶ್ವತ ಛಾಯಾಗ್ರಹಣ ವೃತ್ತಿಗೆ ಮೊಬೈಲ್ ಮಾರಕವಾಗಿದೆ. ಮೊಬೈಲ್ ಬಳಸುವುದರಿಂದ ಕಾರ್ಯಕ್ರಮಗಳಿಗೆ ಆಹ್ವಾನ ವಿಲ್ಲದಂತಾಗಿದೆ. ಛಾಯಾಗ್ರಹಕರು ಆಧುನಿಕ ಸ್ಪರ್ಶಕೊಟ್ಟು ಪ್ರತಿ ಫೋಟೋಗೆ ಸಂದೇಶ ನೀಡಬೇಕು. ಏಕಾಗ್ರತೆಯಿಂದ ಕೆಲಸ ಮಾಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಮುತ್ತಿನಕಂತಿಮಠದ ಶಿವಲಿಂಗ ಪಂಡಿತರಾಧ್ಯ ಶ್ರೀಗಳು ಆಶೀರ್ವಚನ ನೀಡಿ, ತಾಯಿ ಗರ್ಭದಿಂದ ಭೂಗರ್ಭಕ್ಕೆ ಹೋಗುವವರೆಗೂ ನಮ್ಮ ಜೊತೆ ಛಾಯಾಗ್ರಾಹಕಬೇಕು.ಪೂರ್ವಜರನ್ನು ಮೊಮ್ಮಕ್ಕಳು ನೋಡಲು ಫೋಟೋ ಬೇಕಾಗುತ್ತದೆ. ಸಣ್ಣ ಕಾರ್ಯದಿಂದ ದೊಡ್ಡ ಕಾರ್ಯಕ್ರಮಕ್ಕೆ ಛಾಯಾಗ್ರಾಹಕ ಬೇಕೇ ಬೇಕು. ಯಾವುದೇ ಜಾತಿ, ಲಿಂಗ, ವರ್ಣ, ಬಡವ, ಶ್ರೀಮಂತ ಎಂಬ ಭೇದಭಾವ ಮಾಡದೆ ಕೆಲಸ ಮಾಡುವವರು ಛಾಯಾಗ್ರಾಹಕರು ಎಂದರು.
ಛಾಯಾಗ್ರಾಹಕ ಸಂಘದ ಅಧ್ಯಕ್ಷ ಸಿದ್ದು ಮಾಳಿ, ಅಕ್ಷರ ದಾಸೋಹ ಸಿ.ಎಚ್.ಕಲ್ಯಾಣಿ, ಸಿದ್ದು ಮಾಳಿ, ಎಸ್.ಜಿ. ಅರಕೇರಿ, ಉಪಾಧ್ಯಕ್ಷ ದಸ್ತಗಿರ ಮುಲ್ಲಾ, ಕಾರ್ಯದರ್ಶಿ ರವೀಂದ್ರ ಜಂಬಗಿ, ಜಗದೀಶ ತೆಗ್ಗಿನಮಠ ಅನೇಕರು ಉಪಸ್ಥಿತರಿದ್ದರು.ಸಿ.ಎಂ.ಸಿದ್ದಗೊಂಡ,ಎಸ್.ಎಸ್ ಮೂಡಗಿ, ಡಾ.ರಮೇಶ ಮಡಿವಾಳರ ಮಾತನಾಡಿದರು. ರಮೇಶ ಹಲವಾಯಿ ಸ್ವಾಗತಿಸಿದರು.ಸಿಆರ್ಪಿ ಎ.ಎಚ್.ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾನಾಡಿದರು. ಜಗದೀಶ ಬಿರಾದಾರ ನಿರೂಪಿಸಿದರು. ಈರಣ್ಣಗೌಡ ಪಾಟೀಲ ವಂದಿಸಿದರು.