ಮಾಳಿ ಸಮಾಜದ ಸಮಾವೇಶಕ್ಕೆ ಬರುತ್ತೇನೆ: ಸಿಎಂ ಖಚಿತ
ಲೋಕದರ್ಶನ ವರದಿ
ಗುರ್ಲಾಪೂರ 17: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಳಿ, ಮಾಲಗಾರ ಸಮುದಾಯದ ಮುಖಂಡರು ಸೇರಿ ತೇರದಾಳ ಶಾಸಕ ಸಿದ್ದು ಸವದಿ ಅವರ ನೇತೃತ್ವದಲ್ಲಿ ಅಖಿಲ ಕರ್ನಾಟಕ ಮಾಳಿ, ಮಾಲಗಾರ ಸಮಾಜದ ಮುಖಂಡರು
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೆಟ್ಟಿಯಾದ ಸಮಯದಲ್ಲಿ ಮುಖ್ಯಮಂತ್ರಿಯವರು ಮಾತನಾಡಿ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ರಾಜ್ಯಮಟ್ಟದ ಸಮಾವೇಶವು ಮುಗಳಖೋಡದಲ್ಲಿ ಇದೆ 26ರಂದು ಜರುಗುತ್ತಿರುವ ಕಾರ್ಯಕ್ರಮಕ್ಕೆ ಮ. 2 ಗಂಟೆಗೆ ಖಚಿತವಾಗಿ ಬರುತ್ತೇನೆ. ಹಾಗೂ ಹಿಂದುಳಿದ ಮಾಳಿ, ಮಾಲಗಾರ ಸಮಾಜವನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತೇನೆ ಎಂದು ಹೇಳಿದರು.
ತೇರದಾಳ ಶಾಸಕ ಸಿದ್ದುಸವದಿ ಮಾತನಾಡಿ ಮುಗಳಖೋಡದಲ್ಲಿ ಜರುಗುತ್ತಿರುವ ಮಾಳಿ ಮಾಲಗಾರ ಸಮಾವೇಶಕ್ಕೆ ಮುಖ್ಯಮಂತ್ರಿಗಳು ಕೂಡಾ ಆಗಮಿಸುತ್ತಿದ್ದಾರೆ. ಆದಕಾರಣ ಮುಗಳಖೋಡ ಸುತ್ತಮುತ್ತಲಿನ ಮಾಳಿ ಸಮಾಜದ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲರೂ ಸೇರಿ ಸಮಾವೇಶ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಸಮಯದಲ್ಲಿ ನಿಯೋಗ ಅಧ್ಯಕ್ಷ ಸಿ.ಬಿ.ಕೂಲಿಗೋಡ, ರಾಜ್ಯಾಧ್ಯಕ್ಷ ಕಾಡು ಮಾಳಿ, ಶಂಕರ ಕಿವಟಿ, ಶ್ರೀಶೈಲ ಹಳ್ಳದಮಳ, ಸದಾಶಿವ ಹೊಸಮನಿ, ಮುರಿಗೆಪ್ಪ ಮಾಲಗಾರ, ಮಹಾದೇವ ಚಮಕೇರಿ, ನೀಲಪ್ಪ ಕಿವಟೆ, ರಮೇಶ ಕಾಗಲಿ, ಸಂಜು ಅಥಣಿ, ಸಿದ್ದಪ್ಪ ಮೆಂಡಿಗೇರಿ, ನಿಂಗಪ್ಪ ಚಿಂಚಲಿ, ಸೇರಿದಂತೆ ಸಮಾಜದ ಮುಖಂಡರಿದ್ದರು