ಮತದಾನದ ಜಾಗೃತಿ ಚಿತ್ರಕಲಾ ಪ್ರದರ್ಶನ
ಲೋಕದರ್ಶನ ವರದಿ,
ಜಮಖಂಡಿ : 16: ಸ್ವೀಪ್ ಕಾರ್ಯಕ್ರಮದಡಿ ತಾಲೂಕಾಡಳಿ, ನಗರಸಭೆ, ಬಿಈಓ ಕಚೇರಿ ಸಹಯೋಗದಲ್ಲಿ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿನ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರಿಗೆ ನಿರ್ಮಿಸಿದ ಮತದಾನದ ಜಾಗೃತಿ ಚಿತ್ರಕಲೆಯನ್ನು ನಗರಸಭೆ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.
ಅವಳಿ ತಾಲೂಕಿನಿಂದ ಸುಮಾರು 36 ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಬರುವ ಚುನಾವಣೆಯಲ್ಲಿ ಮತದಾನದ ಮಹತ್ವ-ಅರಿವು ಮೂಡಿಸುವ ಬಗ್ಗೆ ಶಿಕ್ಷಕರು ವಿಭಿನ್ನ ರೀತಿಯ ಚಿತ್ರಕಲೆಗಳನ್ನು ಬಿಡಿಸಿದರು.
ಚುನಾವಣಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ ಸದಾಶಿವ ಮಕ್ಕೋಜಿ, ಬಿಈಓ ಅಶೋಕ ಬಸನ್ನವರ, ಡಿವೈಎಸ್ಪಿ ಶಾಂತವೀರ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ಅಭಿಯಂತರೆ ಕುಸುಮಾ ಸೋಪ್ಟಲ್ಡ್, ಕಾಡು ಹಂಚನಾಳ, ದೈಹಿಕ ಅಧೀಕ್ಷಕ ಈಶ್ವರ ನಾವಿ ಅವರುಗಳು ವಿವಿಧ ಬಗೆಯ ಚಿತ್ರಗಳನ್ನು ವೀಕ್ಷಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾವಣೆ ಮುಗಿಯುವವರೆಗೆ ಈ ಚಿತ್ರಕಲೆಗಳನ್ನು ಜಮಖಂಡಿ ಮಿನಿ ವಿಧಾಸೌಧದ ಆವರಣದಲ್ಲಿ ಇಡಲಾಗುವುದೆಂದು ತಿಳಿಸಿದರು.