ವೊಕೇಷನಲ್ ಕೋಸರ್್ ಆನ್ ಪೈಥಾನ್ ಕಾರ್ಯಕ್ರಮ

ವೊಕೇಷನಲ್ ಕೋಸರ್್ ಆನ್ ಪೈಥಾನ್ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 28:ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 28 ರಂದು ಕಂಪ್ಯೂಟರ್ ಸೈನ್ಸ್ & ಇಂಜಿನೀಯರಿಂಗ್ ವಿಭಾಗವತಿಯಿಂದ "ವೊಕೇಷನಲ್ ಕೋಸರ್್ ಆನ್ "ಪೈಥಾನ್  ಎಂಬುವ ಐದು ದಿನಗಳ ಕಾರ್ಯಕ್ರಮವನ್ನು       ಪ್ರಾಂಶುಪಾಲರು   ಡಾ|| ಕುಪ್ಪಗಲ್ ವಿರೇಶ್,  ಉಪಪ್ರಾಂಶುಪಾಲರು  ಹಾಗು ಕಂಪ್ಯೂಟರ್ ಸೈನ್ಸ್ & ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ|| ಟಿ. ಹನುಮಂತ ರೆಡ್ಡಿ, ಹಾಗೂ ಐ.ಕೂ.ಏ.ಸಿ-ಮೆಂಬರ್, ಡಾ|| ವೀರ ಗಂಗಾಧರ ಸ್ವಾಮಿ, ಸಂಯೋಜಕರುಗಳು ವಿನುತಾ ಪ್ರಶಾಂತ್, ಶ್ರೀಮತಿ ಸರ್ವರ್ ಬೇಗಂ  ಇವರು ಉದ್ಘಾಟಿಸಿದರು. 

ಈ ಕಾರ್ಯಕ್ರಮದಲ್ಲಿ ಡಾ|| ಟಿ. ಹನುಮಂತ ರೆಡ್ಡಿ ಇವರು ಮಾತನಾಡುತ್ತಾ "ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಕಂಪ್ಯೂಟರ್ ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನವು ಹೊರ ಬರುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲೇ ಒಂದು ಒಳ್ಳೆಯ ಹಾದಿಯನ್ನು ಆರಿಸಿ ಅದರಲ್ಲಿ ಪರಿಣತಿ ಹೊಂದಲು ಪ್ರಯತ್ನಿಸಬೇಕು. ಹಾಗೂ ಜೀವನ ಪರ್ಯಂತ ಹೊಸ ಜ್ಞಾನ ಕಲಿಯಲು ಜಿಜ್ಞಾಸೆ ಹೊಂದಿರಬೇಕು. ಆಗಲೇ ಉತ್ತಮ ಕಂಪ್ಯೂಟರ್ ಇಂಜಿನಿಯರ್ ಆಗಲು ಸಾಧ್ಯವೆಂದು" ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲರು ಡಾ|| ಕುಪ್ಪಗಲ್ ವಿರೇಶ್, ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ "ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳು  ವಿದ್ಯಾಥರ್ಿಗಳಲ್ಲಿ ಅಡಗಿರುವ ತಂತ್ರಜ್ಞಾನಕಲೆ ಗಳನ್ನು ವಿದ್ಯಾಥರ್ಿ ದೆಸೆಯಲ್ಲೇ ಮನವರಿಕೆ ಮಾಡಿಸುವುದು ಹಾಗೂ ಹೊಸ ಆವಿಷ್ಕಾರಗಳು ಮಾಡಲು ಹಾದಿಯನ್ನು ಸುಗಮಗೊಳಿಸುವುದು ಹಾಗೂ ಇದರಿಂದ ಹೊಸದನ್ನು ಸಮಾಜಕ್ಕೆ ನೀಡಲು ಅವಕಾಶವಿರುತ್ತದೆ. ಆದುದರಿಂದ ವಿದ್ಯಾಥರ್ಿಗಳಿಗೆ ಇದರ ಬಗ್ಗೆ ಮನವರಿಕೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿರುತ್ತದೆ." ಎಂದು ಹೇಳಿದರು.

ಸಂಯೋಜಕರಾದ ವಿನುತಾ ಪ್ರಶಾಂತ್, ಶ್ರೀಮತಿ ಸರ್ವರ್ ಬೇಗಂ    ಇವರು ನಿರೂಪಿಸಿದರು ಹಾಗೂ ವಂದನಾರ್ಪಣೆ ಮಾಡಿದರು.

ಸುದ್ದಿ ಓದಿ