ಅಥಣಿ

ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಕಕಮರಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಾಶಯ

ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಕಕಮರಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಾಶಯ

 ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಕಕಮರಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಾಶಯ 

.ಅಥಣಿ 22:  ಕಾಂಗ್ರೆಸ್ ಪಕ್ಷದ ಅನೇಕ ಶಾಸಕರು ಈಗೀನ ಸರಕಾರದಲ್ಲಿ ಬೇಸತ್ತು ನನ್ನನ್ನು ಸಂಪರ್ಕಿಸಿ ಬಿಜೆಪಿ ಸರಕಾರ ರಚಿಸಲು ನಿವೇಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ ಸಿಡಿಸಿದ್ದಾರೆ. ಸಂಕೋನಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಕಕಮರಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಾಶಯ ಕೋರಿ ಸುದ್ದಿಗಾರರಿಗೆ ಮಾತನಾಡುತ್ತಿದ್ದರು. ಸಿಎಮ್ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬಿಳಿಸಲು ಬಿಜೆಪಿಯ ಯಾರೂ ಪ್ರಯತ್ನಿಸಿಲ್ಲ ಆದರೂ ಸಿದ್ಧರಾಮಯ್ಯ ತಮ್ಮ ಶಾಸಕರಿಗೆ 50 ಕೋಟಿ ಆಫರ್ ಕೊಡುತ್ತಿದ್ದಾರೆ ಎಂದು ಹೇಳಿಕೆ ಯಾಕೆ ನೀಡುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದ ಸರಕಾರ ಅಸ್ಥಿರಗೊಳಿಸುವವನೆ ನಾನೇ ಸುಮ್ಮನಿರುವಾಗ ಬೇರೆಯವರು ಯಾರೂ ಪ್ರಯತ್ನಿಸುತ್ತಿಲ್ಲ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಈ ಮೊದಲು ನಾವು  ನಿರ್ಧಾರ ಮಾಡಿದಂತೆ ನವ್ಹೆಂಬರ 25 ರಿಂದ ಬೀದರದಿಂದ ವಕ್ಫ ಜಾಗೃತಿ ಯಾತ್ರೆ ಬಿಜೆಪಿ ನೇತೃತ್ವದಲ್ಲಿ ಪ್ರಾರಂಭಗೊಳ್ಳಲಿದ್ದು ವಕ್ಫ ಹೋರಾಟ ಯಾವದೇ ಒಂದು ಸಮುದಾಯ ಮತ್ತು ಪಕ್ಷದ ವಿರೋಧ ಅಲ್ಲ ಎಂದು ಸ್ಪಷ್ಟ ಪಡಿಸಿದ ವಕ್ಫ ನಲ್ಲಿ ಹಿಂದುಗಳಷ್ಟೇ ಅಲ್ಲ ಮುಸಿ, ್ಲಂರೂ ಕೂಡ ಆಸ್ತಿ ಕಳೆದುಕೊಂಡಿದ್ದಾರೆ ಹೀಗಾಗಿ ನಮ್ಮ ಹೋರಾಟದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಅಪ್ಪಾಸಾಹೇಬ ಅವತಾಡೆ, ಉಮೇಶರಾವ ಬಂಟೋಡಕರ, ಗೀರೀಶ ಬುಟಾಳಿ, ನಾನಾಸಾಹೇಬ ಅವತಾಡೆ, ಮಲ್ಲಿಕಾರ್ಜುನ ಅಂದಾನಿ, ಅಶೋಕ ಯಲ್ಲಡಗಿ, ತಮ್ಮಣ್ಣಾ ಪೂಜಾರಿ, ಧರೆಪ್ಪ ಠಕ್ಕಣ್ಣವರ, ಸಿದ್ಧಪ್ಪಾ ಮುದಕಣ್ಣವರ,ವಸತ್ಯಪ್ಪಾ ಬಾಗೆನ್ನವರ, ಪ್ರಭಾಕರ ಚವ್ಹಾಣ, ಡಾ. ರವಿ ಸಂಕ,  ರವಿ ಪೂಜಾರಿ, ಹರ್ಷಾ ಮಗದುಮ್, ಶ್ರೀಶೈಲ ಅಂದಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ