ಪುರೋಹಿತರಿಗಾಗಿ ವೇದ ಕಾರ್ಯಗಾರ

ಪುರೋಹಿತರಿಗಾಗಿ ವೇದ ಕಾರ್ಯಗಾರ

ಬಳ್ಳಾರಿ02: ಆರೋಬಿಂದೋ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆ ಬೆಂಗಳೂರು ಇವರು ನಗರದ ಸತ್ಯನಾರಾಯಣ ಪೇಟೆಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ವೇದ ಕಾರ್ಯಗಾರಕ್ಕೆ ಚಾಲನೆ ನೀಡಿದರು. 

        ಈ ಕಾರ್ಯಗಾರದಲ್ಲಿ ನೂರಾರು ಜನ ವೇದ ಕಲಿಯುವ ಬಗ್ಗೆ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಈ ಕಾರ್ಯಗಾರವನ್ನು ಶ್ರೀನಿವಾಸ ಮೂತರ್ಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂದಿಗೆ ಪ್ರಾಶಸ್ತೆ ಇದೆ. ಇಂತಹ ಕಾರ್ಯ ವೇದ ಸಂಸ್ಕೃತಿ ಸಂಸ್ಥೆಯವರು ಮಾಡುತ್ತಿರುವುದ ಹೆಮ್ಮೆಯ ವಿಷಯ. ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಲೆಂದು ತಿಳಿಸಿದರು. 

ನತಂರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟ್ ರವಿ ಜಾಗಿರ್ದಾರ್ ಮಾತನಾಡಿ ತಮ್ಮ ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ವೇದ, ರಕ್ಷಣೆ, ಪ್ರಸಾರ, ಪ್ರಚಾರದಲ್ಲಿ ತೊಡಗಿಸಿಕೊಂಡು ಹಲವಾರು ಶಾಲೆಗಳಲ್ಲಿ ವೇದ ಮಂತ್ರಗಳನು ಮಕ್ಕಳಿಗೆ ಕಲಿಸುವ ಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. 

           ನಂತರ ಮಾತನಾಡಿದ ಸುರೇಶ್ ಮಾಯಾವಣ ಮಾತನಾಡಿ ವೇದವನ್ನು ಎಲ್ಲರೂ ಕಲಿಯಬೇಕು. ಪುರೋಹಿತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಕಾರ್ಯಗಾರ ನಡೆಯುತ್ತಿದೆ. ಹೀಗಾಗಿ ಅತ್ಯಂತ ಒಳ್ಳೆಯ ಕಾರ್ಯಗಳನ್ನು ನೀಡುತ್ತಾ ಈ ವೇದ ಸಂಸ್ಕೃತಿ ಸಂಸ್ಥೆ ರಾಜ್ಯಾಧ್ಯಂತ ಅಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. 

          ಈ ಕಾರ್ಯಗಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ವೇದ ಪಠಣದ ಪುಸ್ತಕ ಗೌರವದನವನ್ನು ಶ್ರೀನಿವಾಸ್ ಕುಲಕಣರ್ಿ ಮತ್ತು ಬಿಂದು ಮಾದವ ಜಾಗಿರ್ದಾರ್ ವಿತರಿಸಿದರು. ಈ ಸಂದರ್ಭದಲ್ಲಿ ಸತ್ಯನಾರಾಯಣ ದೇವಸ್ಥಾನದ ಟ್ರಷ್ಟಿಗಳಾದ ಸತ್ಯನಾರಾಯಣ ರಾವ್, ಶ್ರೀನಿವಾಸ ಮೂತರ್ಿ, ನಾಗೇಂದ್ರ, ಚಿದಂಬರಾವ್, ಸೇರಿದಂತೆ ಹಲವಾರು ಗಣ್ಯವ್ಯೆಕ್ತಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. 

ಸುದ್ದಿ ಓದಿ