ಶಾಶ್ವತವಾಗಿ ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನ: ಉಗ್ರಪ್ಪ

ಶಾಶ್ವತವಾಗಿ ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನ: ಉಗ್ರಪ್ಪ

ಬಳ್ಳಾರಿ 04: ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸಬೇಕು ಎಂದು ಆಗ್ರಹಿಸಿ ಕಳೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಮತ ಬಹಿಷ್ಕರಿಸಿ ಗಮನಸೆಳೆದಿದ್ದ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮಕ್ಕೆ ಸಂಸದ ವಿ.ಎಸ್.ಉಗ್ರಪ್ಪ ಅವರು ಸೋಮವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಗ್ರಾಮಸ್ಥರು ನಮ್ಮ ಗ್ರಾಮದ ಅಂತರ್ಜಲ ಮಟ್ಟ 1980ರಿಂದ ದಿನೇದಿನೆ ಕುಸಿಯುತ್ತಿದ್ದು, ಈಗ ಬೊರವೆಲ್ ಕೊರೆದರೂ ನೀರು ಬರದಂತಾಗಿದೆ ಎಂದರು.

ಆದ ಕಾರಣ ನಮ್ಮೂರಿಗೆ ಕೂಡಲೇ ಶಾಶ್ವತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಗ್ರಾಮದ ಬಳಿ ಕೆರೆ ನಿಮರ್ಿಸಿ ಹೆಚ್ಎಲ್ಸ್ ಕಾಲುವೆ ಮುಖಾಂತರ ನೀರು ತುಂಬಿಸಿ ಗ್ರಾಮಕ್ಕೆ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸಬೇಕು. ಕುಡಿತಿನಿ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ತಕ್ಷಣವೇ ತಾತ್ಕಾಲಿಕವಾದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ನಂತರ ಮಾತನಾಡಿದ ಸಂಸದ ಉಗ್ರಪ್ಪ ಅವರು, ಈ ಗ್ರಾಮಕ್ಕೆ ಶಾಶ್ವತವಾದ ಕುಡಿಯುವ ನೀರಿನ ಸಮಸ್ಯೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡಲಾಗುವುದು ಎಂದರು.

ತಕ್ಷಣವೇ ನಿಮ್ಮ ಶಾಶ್ವತವಾದ ಬೇಡಿಕೆ ಈಡೇರಿಸುತ್ತೇನೆ ಎಂಬ ಭರವಸೆ ನಾನು ನೀಡಲಾರೆ. ತಾತ್ಕಾಲಿಕವಾದ ಸೌಲಭ್ಯ ತಕ್ಷಣ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ತಮ್ಮ ಶಾಶ್ವತವಾದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ,ಜಿಪಂ ಸಿಇಒ ಹಾಗೂ ಜಿಲ್ಲಾಡಳಿತದೊಂದಿಗೆ ಚಚರ್ಿಸಿ ಇತ್ಯರ್ಥಪಡಿಸಲಾಗುವುದು. ತಮ್ಮೂರಿನ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದರು.

ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಎಇಇ ಎಸ್.ಬಿ.ದೇವನಾಳ್ ಅವರು ಡಿಎಂಎಫ್ ಅಡಿ ಹರಗಿನಡೋಣಿ ಗ್ರಾಮಕ್ಕೆ 20ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದರ ಕೆರೆ ನಿಮರ್ಾಣಕ್ಕಾಗಿ ಗ್ರಾಮದ ಬಳಿ 15ಎಕರೆ ಜಾಗ ಕೂಡ ಗುರುತಿಸಲಾಗಿದೆ. ತಾತ್ಕಾಲಿಕವಾದ ಪರಿಹಾರದ ಅಡಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.ತಾಪಂ ಇಒ ಜಾನಕಿರಾಮ್, ಗ್ರಾಪಂ ಅಧ್ಯಕ್ಷರು, ಗ್ರಾಪಂ ಪಿಡಿಒ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಓದಿ