ಜಮಖಂಡಿ

ಧಾರಾಕಾರ ಮಳೆ: ಜನಜೀವನ ಅಸ್ಥವ್ಯಸ್ಥ

ಧಾರಾಕಾರ ಮಳೆ: ಜನಜೀವನ ಅಸ್ಥವ್ಯಸ್ಥ

ಲೋಕದರ್ಶನ ವರದಿ,

ಜಮಖಂಡಿ 4: ನಗರದಲ್ಲಿ ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ತರಕಾರಿ ವ್ಯಾಪಾರಿಗಳು ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಯಾವುದೇ ವ್ಯಾಪಾರ ವಹಿವಾಟ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ.

ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಮಳೆಯಲ್ಲಿ ಹೋಗುವದು ಸಾಮಾನ್ಯವಾಗಿತ್ತು. ಬೇರೆ ಊರುಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು ಕಂಡು ಬಂದಿತ್ತು. ಬೇರೆ, ಬೇರೆ ಉದ್ಯೋಗ ಮಾಡುವ ಕುಶಲಕಮರ್ಿಗಳು ಸುರಿಯುತ್ತಿರುವ ಮಳೆಯಿಂದ ಕೆಲಸವಿಲ್ಲದೆ ಕಂಗಾಲಾಗಿದ್ದು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಯಿಂದ ಆಚೆಗೆ ಹೊರಗೆ ಬರುತ್ತಿಲ್ಲ. ಎಲ್ಲ ವ್ಯಾಪಾರ ವಹಿವಾಟಗಳು ಕಂಡಿಮೆಯಾಗಿದ್ದು. ಶಾಲಾ, ಕಾಲೇಜಿನ ಮಕ್ಕಳು ಮಳೆಯಲ್ಲಿಯೇ ಶಾಲೆಗೆ ಹೋಗುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತ್ತು 

ಸುದ್ದಿ ಓದಿ