ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು: ಮಹಮ್ಮದ್

ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು: ಮಹಮ್ಮದ್

ಲೋಕದರ್ಶನ ವರದಿ

ಬಳ್ಳಾರಿ 12: ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಇದು ಜೀವರಕ್ಷಕ ಎಂದು ಮಹಮ್ಮದ್ ರಫೀ ಹೇಳಿದರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪೊಲೀಸ್ ಇಲಾಖೆ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ "30ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ" ಅಂಗವಾಗಿ "ಸೋಶಿಯಲ್ ಎಮಜರ್ೆನ್ಸಿ ರೆಸ್ಪಾನ್ಸ್ ವಾಲಂಟಿಯರ್ಸ್" ಅಪಘಾತ ವಿಷೇಶ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ್ ಗಿರಿ, ರಸ್ತೆ ಸುರಕ್ಷತಾ ಸಪ್ತಾಹ ಬಗ್ಗೆ ವಿವರಿಸಿದರು.

ನಂತರ ಮೋತಿ ವೃತ್ತದಲ್ಲಿ ರಸ್ತೆ ಅಪಘಾತ ಬಗ್ಗೆ ಅಣಕು ಪ್ರದರ್ಶನ ನಡೆಸಲಾಯಿತು. ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿ ಅಪಘಾತ ಆದಾಗ ಹೇಗೆ ಜೀವರಕ್ಷಣೆ ಮಾಡಬೇಕೆಂದು "ಸವರ್್" ತಂಡ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆಂಸ್ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕಳುಸುವ ಮೂಲಕ ಪ್ರದರ್ಶನವನ್ನು ನೀಡಿದ್ದರು. 

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದಶರ್ಿ ಎಂ.ಎ.ಷಕೀಬ್, ನೇತೃತ್ವದಲ್ಲಿ ಸವರ್್ ತಂಡದ ನಿಸಾರ್ ಅಹಮದ್, ಹರಿ ಶಂಕರ್, ರವಿ ಶಂಕರ್, ಪ್ರದೀಪ್ ಕುಮಾರ್, ಉಮಾಮಹೇಶ್ವರಿ, ಮಹಾಂತೇಶ್, ತೇಜಸ್, ಇಜಾಝ್ ಅಹಮದ್, ಶಿವ ಸಾಗರ್, ಬಾರಿಕರ ಗಣೇಶ್, ನರೇಶ್ ಕುಮಾರ್, ಭರತ್ ಕುಮಾರ್ ಮತ್ತು ಅನೇಕ ಸವರ್್ ತಂಡದವರು ಭಾಗಿಯಾಗಿದ್ದರು. 


ಸುದ್ದಿ ಓದಿ